ದಾವಣಗೆರೆ :
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ವತಿಯಿಂದ ಸ್ವೀಪ್ ಚಟುವಟಿಕೆ ಅಡಿಯಲ್ಲಿ ಮತದಾನ ಜಾಗೃತಿಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗುರುವಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.
ಇಲ್ಲಿನ ತಾಲೂಕು ಪಂಚಾಯತ್ ಆವರಣದಿಂದ ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ ಅವರಿಂದ ಚಾಲನೆ ಪಡೆದ ಬೈಕ್ ರ್ಯಾಲಿಯು ರ್ಯಾಲಿಯು ಎಲೆಬೇತೂರು, ರಾಂಪುರ, ನಾಗರಕಟ್ಟೆ, ಕಾಡಜ್ಜಿ, ಆಲೂರು, ಶ್ರೀರಾಮನಗರ, ಮೆಳ್ಳಕಟ್ಟೆ, ಅಣಜಿ, ಹುಲಿಕಟ್ಟೆ, ಗುಡಾಳು, ಕಂದನಕೋವಿ, ಪವಾಡರಂಗವ್ವನಹಳ್ಳಿ, ಶಿವಪುರ, ಆನಗೋಡು, ಹೊನ್ನೂರು ಮತ್ತಿತರೆ ಗ್ರಾಮಗಳಲ್ಲಿ ಸಂಚರಿಸಿತು.
ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಗ್ರಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನನ್ನ ಮತ ಮಾರಾಟಕ್ಕಿಲ್ಲ. ನಾನು ತಪ್ಪದೆ ಮತ ಚಲಾಯಿಸುತ್ತೇನೆ ನೀವು?, ಬಡತನ, ಭ್ರಷ್ಟಚಾರ, ಅನಕ್ಷರತೆ ಒಂದು ಚುಕ್ಕಿಯಿಂದ ಅಳಿಸಬಲ್ಲದು, ಕಡ್ಡಾಯ ಮತದಾನ ಸದೃಢ ಪ್ರಜಾಪ್ರಭುತ್ವಕ್ಕೆ ವರದಾನ, ಬನ್ನಿ ಬನ್ನಿ ಮತ ಚಲಾಯಿಸಿ ನಿಮ್ಮ ಮತ ಉಪಯೋಗಿಸಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಮತದಾರರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಾನಾಯ್ಕ್, ತಾ.ಪಂ. ಇಒ ಎಲ್.ಎಸ್.ಪ್ರಭುದೇವ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
