ಹಾವೇರಿ:
ಮತದಾನ ಎನ್ನುವುದು ಪ್ರಜಾ ಪ್ರಭುತ್ವದ ಆಧಾರ ಸ್ತಂಭ. ಈ ಸ್ತಂಭ ಗಟ್ಟಿಯಾಗಿರಬೇಕಾದರೆ ಮತದಾನದ ಪ್ರಮಾಣ ಹೆಚ್ಚಾಗಬೇಕಿದೆ. ಅಂದಾಗ ಮಾತ್ರ ಪ್ರಜಾ ಪ್ರಭುತ್ವ ಯಶಸ್ಸಿನ ಹಾದಿಯಲ್ಲಿ ಸಿಗಲಿದೆ ಎಂದು ಹಾವೇರಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀಮತಿ ಅನ್ನಪೂರ್ಣ ಮುದುಕಮ್ಮನವರ ಹೆಳಿದರು.
ಹಾವೇರಿ ಸಿದ್ದಪ್ಪ ಸರ್ಕಲ್ಲಿನಲ್ಲಿ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮತ್ತು ವಿವಿ ಪ್ಯಾಟ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು. ಪ್ರಜ್ಞಾವಂತ ಮತದಾರರು ಪ್ರಜಾ ಪ್ರಭುತ್ವದ ಮೂಲ ಕ್ರಿಯೆಯಾಗಿರುವ ಮತದಾನದಲ್ಲಿ ಕಡ್ಡಾಯವಾಗಿ ಪಾಲಗೊಂಡು ದೇಶದ ಅಭಿವೃದ್ದಿಗೆ ಕೈಜೋಡಿಸಬೇಕಿದೆ ನಾವು ಮತದಾನ ಮಾಡುವುದಲ್ಲದೆ ನಮ್ಮ ಸುತ್ತಮುತ್ತಲಿನವರು ಮತದಾನ ಮಾಡಿದ ಬಗ್ಗೆ ಖಾತ್ರಿ ಪಡಿಸಿಕೋಳ್ಳಬೇಕು.
ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವಕುರಿತು, ತಿಳಿಹೇಳುವ ಮೂಲಕ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದರು. ಹಾಗೇಯೆ ಸರಕಾರಿ ಸಿಬ್ಬಂದಿ ತಮ್ಮ ಪರಿಸರದ ಮತದಾರರು ಮತಚಲಾಯಿಸುವಂತೆ ನೋಡಿಕೋಳ್ಳಬೇಕಿದೆ. ತಾಲೂಕಾ ವ್ಯಾಪ್ತಿಯಲ್ಲಿ ಮತದಾನ ಶೇಕಡಾ ಪ್ರಮಾಣ ಹೆಚ್ಚಿಸುವಲ್ಲಿ ಕಾಳಜಿವಹಿಸಬೇಕಿದೆ ಎಂದರು. ಇದೆ ಸಂದರ್ಭದಲ್ಲಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹಾಗೂ ವಿವಿಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನಡೆಯಿತು
ಲೊಕಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗ “ಸಿ-ವಿಜಿಲ್” ಎಂಬ ಆಪ್ ಪರಿಚಯಿಸಿದೆ ಸಿ-ವಿಜಿಲ್ ಯಾಪ್‍ನ ಮೂಲಕ ಪೋಟೊ ಮತ್ತು ಎರಡು ನಿಮಿಷದ ವಿಡಿಯೊ ತುಣುಕ ಕಳುಹಿಸಿದರೆ ತಕ್ಷಣ ಅಧಿಕಾರಿಗಳ ತಂಡ ಅಕ್ರಮ ನಡೆಯುವ ಸ್ಥಳಗಳಿಗೆ ಬೇಟಿ ನೀಡಿ ಕ್ರಮ ಕೈಗೊಳ್ಳಲಿದೆ ಎಂದರು.
ಗೂಗಲ್ ಸ್ಟೋರಿನಲ್ಲಿ ಈ ಆಪ್ ಡೌನಲೋಡ್ ಮಾಡಿಕೋಳ್ಳಬಹುದು.ಪ್ರತಿಯೊಬ್ಬರು ಸುಲಭವಾಗಿ ಈ ಆಪ್ ಬಳಸಿಕೊಳ್ಳಬಹುದು, ತಮ್ಮ ಸಮಿಪದಲ್ಲಿ ನಡೆಯುವ ಚುನಾವಣೆ ಅಕ್ರಮಮಗಳ ಪೋಟೋ ಮತ್ತು ಕಿರು ವಿಡಿಯೋವನ್ನು ಭೌಗೋಳಿಕ ಮಾಹಿತಿಯೋಂದಿಗೆ ಆಪ್ ಲೋಡ ಮಾಡಿದರೆ ವಿಡಿಯೋ ವಿವಿಂಗ್ ಟಿಂಮ್ ಅಥವಾ ಪ್ಲೈಯಿಂಗ್ ಸ್ಕ್ವಾಡ್ ಅಥವಾ ಸೆಕ್ಟರ ಅಧಿಕಾರಿಗಳ ತಂಡ ಕ್ರಮ ವಹಿಸಲಿದೆ ಎಂದರು.
ಉಚಿತ ಸಹಾಯವಾಣಿ ನಂ 1950 ಕ್ಕೆ ಚುನಾವಣೆ ಮಾಹಿತಿ ಹಾಗೂ ದೂರುಗಳನ್ನು ನೀಡಬಹುದು. ಮತ್ತು ಸರ್ವಜನಿಕರು ಈ ಸಂಖ್ಯೆಯನ್ನು ಬಳಸಬಹುದು.ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಪುಷ್ಠಲತಾ ಬಿದರಿ, ತಾಲೂಕ ಸಿಬ್ಬಂದಿ ವರ್ಗದವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು,ಪ್ರಾಥಮಿಕ ಶಾಲಾ ಶಿಕ್ಷಕರು ಆಶಾ ಅಂಗನವಾಡಿ ಕಾರ್ಯಕರ್ತೆಯರು,ಸಾರ್ವಜನಿಕರು ಭಾಗವಹಿಸಿದ್ದರು.