ಕೊರಂ ಕೊರತೆ ಹಿನ್ನೆಲೆ ಸಭೆ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ

ಬಳ್ಳಾರಿ

        ಕೊರಂ ಕೊರತೆ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಜಿಪಂ ಸಾಮಾನ್ಯ ಸಭೆಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ.
ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ಸಭೆ ನಡೆಯಬೇಕಿತ್ತು. ಮದ್ಯಾಹ್ನ 12.30 ಆದರೂ ಕೊರಂಗೆ ನಿಗದಿಪಡಿಸಿದಷ್ಟು ಸದಸ್ಯರು ಸಭೆಗೆ ಹಾಜರಾಗಲಿಲ್ಲ.

         ಸದಸ್ಯರ ಬರುವಿಕೆಗೆ ಒಂದೂವರೆ ಗಂಟೆ ಕಾಯ್ದರೂ ಕೇವಲ 12 ಸದಸ್ಯರಷ್ಟೇ ಸಭೆಗೆ ಹಾಜರಾಗಿರುವುದನ್ನು ಮನಗಂಡು ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಸಭೆಯನ್ನು ಕೊರಂ ಕೊರತೆ ಹಿನ್ನೆಲೆ ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದ್ದು, ಮುಂದಿನ ಸಭೆಯ ದಿನಾಂಕವನ್ನು ನಂತರ ತಿಳಿಸಲಾಗುವುದು ಅಂತ ಸಭೆಯಲ್ಲಿ ಪ್ರಕಟಿಸಿದರು.

          ಜಿಪಂ ಒಟ್ಟು 40 ಸ್ಥಾನಗಳು ಹೊಂದಿದ್ದು,ಇವುಗಳ ಜತೆಗೆ ಸಂಸತ್ ಸದಸ್ಯರು,ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ತಾಪಂ ಅಧ್ಯಕ್ಷ ಸ್ಥಾನಗಳು ಸೇರಿ 60 ಸ್ಥಾನಗಳ ಬಲ ಹೊಂದಿದ್ದು,ಕೊರಂಗೆ 31ಸದಸ್ಯರ ಉಪಸ್ಥಿತಿ ಅವಶ್ಯವಾಗಿದೆ.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಜಿಪಂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link