ಕೊಟ್ಟೂರು : ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲಿನ ಪಾಕೇಟ್ ವಿತರಣೆ

ಕೊಟ್ಟೂರು

    ಸರ್ಕಾರದ ಆದೇಶದ ಅನ್ವಯ ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ಶನಿವಾರ ಬೆಳಗ್ಗೆ ಉಚಿತವಾಗಿ ತಹಸೀಲ್ದಾರ್ ಅನಿಲ್ ಕುಮಾರ್ ಹಾಲಿನ ಪಾಕೇಟ್ ವಿತರಿಸಿದರು.

   ರಾಬಕೊ ಹಾಲು ಉತ್ಪಾದಕರ ಸಂಘ ಪಟ್ಟಣದಲ್ಲಿ ಹಾಲು ವಿತರಿಸಲು 939 ಲೀಟರ್ ಹಾಲನ್ನು ಸರಬರಾಜುಮಾಡಿದ್ದು, ಈ ಹಾಲನ್ನು ಪಟ್ಟಣದ 8 ಕೊಳಗೇರಿಯ 939 ಕುಟುಂಬಗಳಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.ಸರ್ಕಾರ ಪರಿಸ್ಕøತ ಆದೇಶ ನೀಡಿದ್ದು, ಭಾನುವಾರ ದಿಂದ ಪ್ರತಿ ಕುಟಂಬಕ್ಕೆ ಅರ್ಧ ಲೀಟರ್ ಹಾಲನ್ನು ವಿತರಿಸಲಾಗುವುದು. ಈ ಸೌಲಭ್ಯ ಏಪ್ರಿಲ್ 14ರ ತನಕ ಇರಬಹುದು ಎಂದರು.

   ಕೊಳಗೇರಿ ಅಭಿವೃದ್ದಿ ನಿಗಮ ಪಟ್ಟಣದಲ್ಲಿ 1983ರಲ್ಲಿ ಗುರುತಿಸಿರುವ ಕೊಳಗೇರಿ ನಿವಾಸಿ ಕುಟುಂಬಗಳ ಪಟ್ಟಿ ಅನ್ವಯ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್ ಹಾಲನ್ನು ವಿತರಿಸಲಾಗುವುದು ಎಂದರು.ಆದರೆ ಇಂದು ಕೊಳಗೇರಿ ನಿವಾಸಿಗಳ ಕುಟುಂಬಗಳ ಸಂಖ್ಯೆ ಹೆಚ್ಚಾಗಿವೆ. ಇದರಿಂದ ಇನ್ನೂ ಹೆಚ್ಚಿನ ಪ್ರಮಾಣದ ಹಾಲಿನ ಪಾಕೇಟ್ ಬೇಕಾಗುತ್ತದೆ. ಈ ಸಮಸ್ಯೆಯಿಂದ ಹಾಲು ವಿತರಣೆ ಸಮಸ್ಯೆಯಾಗುತ್ತಿದೆ ಎಂದರು.

    ತಹಸೀಲ್ದಾರ್ ಅನಿಲ್ ಕುಮಾರ್, ಪ.ಪಂ. ಮುಖ್ಯಾಧಿಕಾರಿ ಹೆಚ್. ಬಿದರಿ ಹಾಗೂ ಸಿಬ್ಬಂದಿಯೊಂದಿಗೆ ಬೆಳಗ್ಗೆ ಆರು ಗಂಟೆಗೆ ಖುದ್ದಾಗಿ ಮನೆ ಮನೆಗೆ ತೆರಳಿ ಕೊಳೆಗೇರಿ ನಿವಾಸಿಗಳ ಕುಟುಂಬಗಳಿಗೆ ಹಾಲಿನ ಪಾಕೇಟ್ ವಿತರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link