ಹಗರಿಬೊಮ್ಮನಹಳ್ಳಿ
ಹೂವಿನ ಹಡಗಲಿಯಲ್ಲಿ ಯಾರು ಶಾಸಕರಾಗಿ ಆಯ್ಕೆಯಾಗುತ್ತಾರೋ, ಅವರು ರಾಜ್ಯವಾಳುವ ಪಕ್ಷದವರಾಗಿ ಹೊರ ಹೊಮ್ಮುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತು ಪಡಿಸಿದಂತಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸೊನ್ನದ ಮಹೇಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಹಡಗಲಿಯ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸಮ್ಮೀಶ್ರ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಮೊದಲಿನಿಂದಲೂ ಸಾಂಪ್ರಾದಾಯಕ ಎನ್ನುವಂತೆ ಹಡಗಲಿ ಕ್ಷೇತ್ರದ ಶಾಸಕರು ಯಾರಾಗುತ್ತಾರೊ ಅವರು ಸಚಿವ ಸ್ಥಾನವನ್ನು ಹೊಂದಿರುತ್ತಾರೆ ಅಥವಾ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷದ ಶಾಸಕರಾಗಿರುತ್ತಾರೆ ಎಂಬುದು ನಡೆದುಕೊಂಡು ಬಂದಿರುವುದು ಸತ್ಯ.
ಅದರಂತೆ ಈ ಬಾರಿ ಮತ್ತೇ ಆ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಪಿ.ಟಿ.ಪರಮೇಶ್ವರನಾಯ್ಕಗೆ ಸಚಿವ ಸ್ಥಾನ ದೊರೆತದ್ದು ಮತ್ತೊಮ್ಮೆ ಸಾಂಪ್ರಾದಾಯವನ್ನು ಸಾಬೀತು ಪಡಿಸಿದೆ ಎಂದರು.ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ವ್ಯಕ್ತಿ ಪರಮೇಶ್ವರನಾಯ್ಕರಾಗಿದ್ದು, ಅವರ ನಿಷ್ಠೆ ಮತ್ತು ಕಾರ್ಯ ವೈಖರಿಯನ್ನು ಕಂಡು ಇಂದು ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಿರುವುದು ಸೂಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
