ಜೆಡಿಎಸ್ ಪಾದಯಾತ್ರೆ : ಭದ್ರತೆಗಾಗಿ ಸೇನಾ ತುಕಡಿ ನಿಯೋಜನೆ

ತುರುವೇಕೆರೆ

    ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲ್ಲೂಕು ಜೆಡಿಎಸ್ ವತಿಯಿಂದ ಆ.31ರಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದ ಯಾತ್ರೆಯ ಮುಂಜಾಗೃತೆಯಾಗಿ ತಾಲ್ಲೂಕಿನ ಹಲವೆಡೆ ಹಾಗು ಗುಡ್ಡೇನಹಳ್ಳಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಹಾಗು ಮಿಲಿಟರಿ ತುಕಡಿಗಳಿಂದ ರೂಟ್ ಮಾಚ್ ಮಾಡಲಾಯಿತು.

    ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ರೈತರು ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ 800ರಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೆಟ್ಟಿದ್ದರು. ಇದನ್ನು ಹಾಲಿ ಶಾಸಕರು ತಾಲ್ಲೂಕು ಆಡಳಿತ ಹಾಗು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ತೆಂಗಿನ ಸಸಿ ಕೀಳಿಸಿದ್ದಾರೆಂದು ಮಾಜಿ ಶಾಸಕರು ಆರೋಪಿಸಿದರು.

   ಈ ಬಗ್ಗೆ ಪ್ರತಿಭಟನೆ ಮಾಡುವುದಾಗಿ ತಾಲ್ಲೂಕು ಜೆಡಿಎಸ್ ಹಾಕಿದ್ದ ಫ್ಲೆಕ್ಸ್‍ಗಳನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದರು. ಈ ವೇಳೆ ಫ್ಲೆಕ್ಸ್ ಹರಿದ ವಿಚಾರವಾಗಿ ಎರಡು ಪಕ್ಷಗಳ ನಡುವೆ ಘರ್ಷಣೆ ನಡೆದು ತಾಲ್ಲೂಕಿನಲ್ಲಿ 144 ಸೆಕ್ಷನ್ ನಿಷೇದಾಜ್ಞೆ ಜಾರಿಗೆ ಕಾರಣವಾಯಿತು. ಆದಾಗ್ಯೂ ಮಾಜಿ ಶಾಸಕರು ಪ್ರತಿಭಟನೆ ಮಾಡುವುದಾಗಿ ಸುದ್ದಿ ಗೋಷ್ಠಿ ನಡೆಸಿದರು. ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆಗೆ ಮಾಜಿ ಶಾಸಕರು ಎಡರು ಗಾಲು ಹಾಕುತ್ತಿದ್ದು ನಾವೂ ಪ್ರತಿ ಪ್ರತಿಭಟನೆ ಮಾಡವುದಾಗಿ ತಾಲ್ಲೂಕು ಬಿಜೆಪಿ ಮುಖಂಡರು ಸುದ್ದಿ ಗೋಷ್ಠಿ ನಡೆಸಿದ್ದರು.

    ಈ ಎಲ್ಲವುಗಳ ಬೆಳವಣಿಗೆಯ ಮುಂಜಾಗೃತೆಯಾಗಿ ಹಾಗೂ 144 ಸೆಕ್ಷನ್ ಬಗ್ಗೆ ಜಾಗೃತಿ ಮೂಡಿಸಲು ಶುಕ್ರವಾರ ಮಧ್ಯಾಹ್ನ ಗುಡ್ಡೇನಹಳ್ಳಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಪೊಲೀಸ್ ಮತ್ತು ಮಿಲಿಟರಿ ತುಕಡಿಗಳು ರೂಟ್ ಮಾರ್ಚ್ ಮಾಡಿದವು. 144 ಸೆಕ್ಷನ್ ಜಾರಿಯಲ್ಲಿದ್ದು ಯಾರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಾರದು ಒಂದು ವೇಳೆ ಭಾಗವಹಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದೆಂದು ದ್ವನಿವರ್ಧಕದಲ್ಲಿ ಪೊಲೀಸರು ಎಚ್ಚರಿಕೆ ನೀಡಿದರು. ವಿವಿಧ ಜಿಲ್ಲೆಗಳಿಂದ ಹೆಚ್ಚುವರಿಯಾಗಿ 1 ಸಾವಿರಕ್ಕೂ ಅಧಿಕ ಪೊಲೀಸರು. ಸಿಆರ್‍ಎಫ್‍ಹಾಗು ಕೆಎಸ್‍ಆರ್‍ಪಿ ಆರೇಳು ತುಕಡಿಗಳು, 10 ಡಿಆರ್ ವಾಹನಗಳು ಹಾಗು ಇಬ್ಬರು ಪಿಎಸ್‍ಐಗಳು ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಡಿಐಜಿ ಕಮೀಷನ್‍ರ್ ಕೂಡ ಭೇಟಿ ನೀಡಲಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link