ಉನ್ನತ ಶಿಕ್ಷಣವು ದೇಶದ ಪ್ರಗತಿಗೆ ಕಾರಣವಾಗಬಲ್ಲದು

ಶಿರಾ

      ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಅನಿವಾರ್ಯವಾಗಿದ್ದು, ಇಂತಹ ಶೈಕ್ಷಣಿಕ ಬೆಳವಣಿಗೆಗಳಿಂದ ದೇಶದ ಪ್ರಗತಿಯ ಗಾಂಭೀರ್ಯತೆಗೆ ಕಾರಣವಾಗಬಲ್ಲದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ.ಆರ್.ಕೆ.ರಮೇಶ್‍ಬಾಬು ತಿಳಿಸಿದರು.

      ಶಿರಾ ನಗರದ ಸರ್ಕಾರಿ ಪ್ರ.ದ. ಕಾಲೇಜಿನಲ್ಲಿ ಪ್ರಾಧ್ಯಾಪಕರಿಗಾಗಿ ಐಕ್ಯುಎಸಿ ಘಟಕವು ಕೈಗೊಳ್ಳಲಾಗಿದ್ದ ಪರಿಷ್ಕøತ ನ್ಯಾಕ್ ಮೌಲ್ಯ ಮಾಪನ ಮತ್ತು ಮಾನ್ಯತೆಯ ಚೌಕಟ್ಟು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.ಪುಟ್ಟ ಪುಟ್ಟ ಹೆಜ್ಜೆಗಳು ದೊಡ್ಡ ಸಾಧನೆಯ ಹಾದಿಯಲ್ಲಿ ನಮ್ಮ ಗುರಿಯನ್ನು ತಲುಪಿಸಲು ಸಾಧ್ಯವಾಗುತ್ತದೆ. ಕಾರ್ಪೊರೇಟ್ ಕ್ಷೇತ್ರದ ಮಾನದಂಡಗಳು ಗ್ರಾಮೀಣ ಕಾಲೇಜುಗಳನ್ನು ಅಳೆಯುವ ಮಾನದಂಡಗಳಾಗಿರುವುದು ಅಸಂಬದ್ಧ ಮತ್ತು ಅಸಹಜ ಎಂದರು.

      ಮಕ್ಕಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕಿದೆ. ಪ್ರವಚನ ನೀಡುವ ಕೆಲಸ ಶಿಕ್ಷಕರದ್ದಾದರೂ ಮಕ್ಕಳು ಅರ್ಥೈಸಿಕೊಳ್ಳುವ ಮೂಲಕ ತಮ್ಮ ಬುದ್ದಿಮತ್ತೆಗೆ ಕ್ರಿಯಾಶೀಲತೆ ತುಂಬಬೇಕಿದೆ ಎಂದು ರಮೇಶ್‍ಬಾಬು ತಿಳಿಸಿದರು.

        ಚಿತ್ರದುರ್ಗದ ಸಂಪನ್ಮೂಲ ವ್ಯಕ್ತಿ ಪ್ರೊ.ಕೆ.ಸಜ್ಜಾತ್ ಮಾತನಾಡಿ, ಒಳಗೊಳ್ಳುವಿಕೆ, ಸಮಾನತೆ, ಗುಣಮಟ್ಟಗಳು ಮುನ್ನೆಲೆಗೆ ಬಂದಿವೆ. ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ವ್ಯಾಖ್ಯಾನ ಎಂಬುದು ಕಟ್ಟಡ, ಪೀಠೋಪಕರಣಗಳಷ್ಟೇ ಅಲ್ಲ. ಹೃದಯಾಂತರಾಳದಿಂದ ಹೊಮ್ಮುವುದು ಅಧ್ಯಾಪಕನ ಕೆಲಸವಾಗಬೇಕು. ಅಧ್ಯಾಪನ ಮಾಡುತ್ತಾ ಕಾಲ ಕಾಲಕ್ಕೆ ಪರಿಷ್ಕರಣೆ ಮಾಡಿಕೊಳ್ಳುವ ಕೆಲಗಳು ಅಧ್ಯಾಪಕನಿಂದ ನಡೆಯಬೇಕು ಎಂದರು.

        ಯಲಹಂಕ ಕಾಲೇಜಿನ ಡಾ.ಕೆ.ಮಹೇಶ್ ಮಾತನಾಡಿ, ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಶವು ಹೃದಯ ಮತ್ತು ಮೆದುಳು ಇದ್ದಂತೆ. ಅತ್ಯಂತ ಸಂತಸದ ಸಂಗತಿ ಎಂದರೆ ರಾಷ್ಟ್ರದಲ್ಲಿಯೇ ಕರ್ನಾಟಕದ ಅತಿ ಹೆಚ್ಚು ಕಾಲೇಜುಗಳು ನ್ಯಾಕ್‍ನಿಂದ ಮಾನ್ಯತೆ ಪಡೆದು ಗುಣಮಟ್ಟದ ಸಾಧನೆಯಲ್ಲಿ ಎರಡನೇ ಸ್ಥಾನ ಪಡೆದಿವೆ ಎಂದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ, ಕಾಲೇಜಿನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಕುರಿತು ಅಧ್ಯಾಪಕರು ಸ್ವವಿಮರ್ಶೆ, ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಶೈಕ್ಷಣಿಕ ಆಗು ಹೋಗುಗಳ ವಿಮರ್ಶೆಯನ್ನು ಮಾಡುವ ಅಗತ್ಯವಿದೆ ಎಂದರು.

        ಡಾ.ಚಿಕ್ಕಣ್ಣ, ಸತೀಶ್‍ಗೌಡ ಸೇರಿದಂತೆ ಕಾಲೇಜಿನ ಅಧ್ಯಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು. ನಳಿನ ಪ್ರಾರ್ಥಿಸಿ, ಐಕ್ಯುಎಸಿ ಸಂಚಾಲಕ ಡಾ.ಎಸ್.ಡಿ.ರಂಗಪ್ಪ ಸ್ವಾಗತಿಸಿ, ಅಧ್ಯಾಪಕಿ ಸುಷ್ಮಾ ನಿರೂಪಿಸಿ, ದರ್ಶನ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link