ಗಣಿ ಬಾಧಿತರ ಜಿಲ್ಲಾ ಸಮಾವೇಶ

ಬಳ್ಳಾರಿ

       ನಗರದ ಬಿ.ಡಿ.ಎ.ಎ ಸಭಾಂಗಣದಲ್ಲಿ ಗಣಿ ಬಾಧಿತರ ಜಿಲ್ಲಾ ಸಮಾವೇಶವನ್ನುಆಯೋಜಿಸಲಾಗಿತ್ತು.ಗಣಿ ಬಾಧಿತಜನರಅಭಿವೃದ್ಧಿ ಸಮಿತಿಯಿಂದ ಸಂಘಟಿಸಲಾದ ಈ ಕಾರ್ಯಕ್ರಮಕ್ಕೆ ನೂರಾರುಜನ ಸಂಡೂರು, ಬಳ್ಳಾರಿ ಹಾಗೂ ಹೊಸಪೇಟೆ ತಾಲ್ಲೂಕುಗಳಿಂದ ಆಗಮಿಸಿದ್ದರು.ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರುಸಸಿಗೆ ನೀರು ಹಾಕುವುದರ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.

     ಸಮಾಜ ಪರಿವರ್ತನಾ ಸಮುದಾಯದಎಸ್.ಆರ್. ಹಿರೇಮಠ್, ಜನ ಸಂಗ್ರಾಮ್ ಪರಿಷತ್‍ನರಾಘವೇಂದ್ರ ಕುಷ್ಟಗಿ, ಎಸ್.ಯು.ಸಿ.ಐ (ಕಮ್ಯುನಿಸ್ಟ್)ನ ಸೋಮಶೇಖರ್.ಕೆ ಹಾಗೂ ರಾಮಾಂಜನಪ್ಪ.ಎ, ಮುಂತಾದಗಣ್ಯರು ಸಭೆಯನ್ನುದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಿದರು.

     ಗಣಿಬಾಧಿತಜನರಅಭಿವೃದ್ಧಿ ಸಮಿತಿಯ ಪರವಾಗಿ ಶ್ರೀಶೈಲ ಆಲ್ದಳ್ಳಿ ಪ್ರಾಸ್ತವಿಕವಾಗಿ ಮಾತನಾಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿಯ ಸೋಮಶೇಖರಗೌಡ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಆರ್ಥಿಕತಜ್ಞರಾದ ಡಾ.ಬಿ.ಶೇಷಾದ್ರಿ ಅವರಿಗೆ ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

     ಉದ್ಘಾಟನೆ ಮಾಡಿದಅಲ್ಲಮಪ್ರಭು ಬೆಟ್ಟದೂರುಅವರು ಮಾತನಾಡುತ್ತಾ “ಅಕ್ರಮ ಹಾಗೂ ಅವೈಜ್ಞಾನಿಕಗಣಿಗಾರಿಕೆಯ ಫಲವಾಗಿ ಕೆರೆಗಳು ಬತ್ತಿ ಹೋಗಿವೆ, ಅಂತರ್ಜಲ ಕುಸಿದಿದೆ, ಕೃಷಿ ಹಾಗೂ ಪರಿಸರ ನಾಶವಾಗಿದೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ , ಜನರಿಗೆ ತೀವ್ರ ಅನಾರೋಗ್ಯ ಇಂತಹ ಅನೇಕ ಸಮಸ್ಯೆಗಳು ಜನ ಜೀವನ ಕಿತ್ತುತಿನ್ನುತ್ತಿವೆ . ಈ ಹಿಂದೆ ರಿಪ್ಲಬಿಕ್‍ ಆಫ್ ಬಳ್ಳಾರಿಯಲ್ಲಿ ಗಣಿಗಳ ಲೂಟಿ ಎಗ್ಗು ಸಿಗ್ಗಿಲ್ಲದೆ ನಡೆಯಿತು.

      ಇದರಿಂದಾಗಿ ಕೆಲವರುಅತೀ ಶ್ರೀಮಂತರಾದರೆ, ಬಹುಸಂಖ್ಯಾತಜನರು ನಿರ್ಗತಿಕರಾದರು.ಆದರೆ ಗಮನಿಸಬೇಕಾದಅಂಶವೆಂದರೆ, ಗಣಿಗಳು ಜನರ ಸಂಪತ್ತು.ಅದನ್ನುಜನರಿಗಾಗಿ ಬಳಸಬೇಕು.ಸರ್ಕಾರಗಳು ಖಾಸಗಿ ಅವರಿಗೆ ಗಣಿಗಳನ್ನು ಲೀಸ್ ನೀಡುವ ಬದಲು, ಸರ್ಕಾರವೇ ಗಣಿಗಳನ್ನು ನಡೆಸಬೇಕು.ಗಣಿಗಳನ್ನು ರಾಷ್ಟ್ರೀಕರಣಗೊಳಿಸಬೇಕು”ಎಂದರು.

     ಎಸ್.ಆರ್ ಹಿರೇಮಠ್‍ಅವರು ಮಾತನಾಡುತ್ತಾ“ಗಣಿಬಾಧಿತ ಪ್ರದೇಶದಜನರಅಭಿವೃದ್ಧಿಗೆ ಸಾವಿರಾರುಕೋಟಿ ಹಣವನ್ನುಆರ್.ಆರ್ ಫಂಡ್‍ನ ಮೂಲಕ ನೀಡಲಾಗಿದೆ.ಇಷ್ಟೆಲ್ಲಾ ಹಣವಿದ್ದರೂ,ಸರ್ಕಾರದ ಬೇಜವಾಬ್ದರಿಯಿಂದಾಗಿ ಸರಿಯಾದ ಕೆಲಸಗಳು ನಡೆಯುತ್ತಿಲ್ಲ. ಈ ಹಣವನ್ನು ಬಳಸಿ ಸರ್ಕಾರವು ಸರಿಯಾದಕ್ರಿಯಾಯೋಜನೆರೂಪಿಸದೆಇರುವುದರಿಂದ, ಸರ್ಕಾರದ ಯೋಜನೆಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.ಕಟ್ಟಡಕಟ್ಟಿಸುವ, ಫ್ಲೈಓವರ್‍ಕಟ್ಟಿಸುವಇಂತಹ ಯೋಜನೆಗಳ ಮೂಲಕ ಆರ್.ಆರ್ ಫಂಡ್‍ನ ಹಣವನ್ನು ಲೂಟಿ ಮಾಡುವ ಕುತಂತ್ರಗಳನ್ನ ರಾಜಕಾರಣಿಗಳು, ಭ್ರಷ್ಟ್ಟ ಅಧಿಕಾರಿಗಳು ಮಾಡುತ್ತಿದ್ದಾರೆ.

      ಈ ಹಿನ್ನಲೆಯಲ್ಲಿಗಣಿಬಾಧಿತರಿಗೆಆರ್.ಆರ್ ಫಂಡ್‍ನ ಹಣ ಮುಟ್ಟಬೇಕಾದರೆ, ಹೋರಾಟ ಅನಿವಾರ್ಯ. ಹಾಗಾಗಿ ಜನರು ಹೋರಾಟದಲ್ಲಿ ನಂಬಿಕೆ ಇಡಬೇಕು. ಗಣಿಬಾಧಿತಜನರು ಸರಿಯಾದ ನಾಯಕತ್ವದಲ್ಲಿ ನಿರಂತರ ಹೋರಾಟ ನಡೆಸಿದ್ದೇ ಆದರೆ, ಜನರಿಗೆಯಶಸ್ಸುಖಂಡಿತ” ಎಂದರು.

       ಜನಸಂಗ್ರಾಮ ಪರಿಷತ್‍ನರಾಘವೇಂದ್ರ ಕುಷ್ಟಗಿ “ ಗಣಿಬಾಧಿತಜನರ ಈ ಸಮಾವೇಶದ ಸಂದೇಶಎಲ್ಲೆಲ್ಲೂ ಹರಡಬೇಕು. ಈ ಮೂಲಕ ಕತ್ತಲು ಸರಿದು ಬೆಳಕು ಹರಿಯುವ ದಿನ ಹತ್ತಿರವಾಗಬೇಕು.ಅದಾಗಬೇಕಾದರೆ, ಕೇವಲ ಭಾಷಣ ಮಾಡಿ, ಚಪ್ಪಾಳೆ ತಟ್ಟಿದರೆ ಸಾಲದು, ನಾವೆಲ್ಲಒಗ್ಗಟ್ಟಾಗಿ ಹೋರಾಟ ಮಾಡಿದಾಗಮಾತ್ರಜಯ ಸಿಗಲು ಸಾಧ್ಯ.

     ಕಾರ್ಮಿಕ ಮುಖಂಡರು ಹಾಗೂ ಎಸ್.ಯು.ಸಿ.ಐ (ಕಮ್ಯುನಿಸ್ಟ್) ರಾಜ್ಯ ಸಮಿತಿ ಸದಸ್ಯರಾದ ಕೆ.ಸೋಮಶೇಖರ್‍ಮಾತನಾಡುತ್ತಾ“ ಬಿಜೆಪಿ, ಕಾಂಗ್ರೆಸ್, ಜನತಾದಳ ಹಾಗೂ ಇತರೆಎಲ್ಲಾ ಪಕ್ಷಗಳ ನೀತಿಗಳು ಒಂದೇ ಆಗಿವೆ. ಈ ಪಕ್ಷಗಳು ಬಂಡವಾಳಶಾಹಿಗಳ ಹಿತವನ್ನುಕಾಪಾಡುತ್ತವೆ, ಈ ಪಕ್ಷಗಳು ತಮ್ಮಕುರ್ಚಿಗಾಗಿ, ಹಣ ಮಾಡಿಕೊಳ್ಳುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸುತ್ತಾರೆ. ಜನರಅಭಿವೃದ್ಧಿಗಾಗಿಅಲ್ಲ” ಎಂದು ಆರೋಪಿಸಿದರು.

      ಎಐಡಿವೈಓ ಅಖಿಲ ಭಾರತಅಧ್ಯಕ್ಷರು ಹಾಗೂ ಎಸ್.ಯು.ಸಿ.ಐ (ಕಮ್ಯುನಿಸ್ಟ್) ರಾಜ್ಯ ಸಮಿತಿ ಸದಸ್ಯರಾದರಾಮಾಂಜನಪ್ಪ ಆಲ್ದಳ್ಳಿ “ ಹೋರಾಟದಲ್ಲಿ ಬರುವ ಕಷ್ಟ ಕಾರ್ಪಣ್ಯಗಳನ್ನು ನಾವೆಲ್ಲರೂ ಹಂಚಿಕೊಂಡು ಮುನ್ನುಗ್ಗಬೇಕು. ಎಂತಹತ್ಯಾಗಕ್ಕಾದರೂ ಸಿದ್ಧರಿರಬೇಕು, ಆಗ ಮಾತ್ರಆರ್.ಆರ್ ಫಂಡ್‍ನ ಹಣಜನರಅಭಿವೃದ್ಧಿಗೆ ಬಳಕೆಯಾಗಲು ಸಾಧ್ಯ” ಎಂದರು.ರೈತ ಮುಖಂಡರಾದಚಾಗನೂರು ಮಲ್ಲಿಕಾರ್ಜುನರೆಡ್ಡಿ ಮಾತನಾಡಿದರು.

       ಈ ಸಂದರ್ಭದಲ್ಲಿಗಣಿಬಾಧಿತರಜನರಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ ಎಸ್.ಆರ್.ಹಿರೇಮಠ್, ರಾಘವೇಂದ್ರ ಕುಷ್ಟಗಿ, ಸೋಮಶೇಖರ್.ಕೆ, ರಾಮಾಂಜನಪ್ಪ.ಎ, ಮಲ್ಲಿಕಾರ್ಜುನರೆಡ್ಡಿ, ಸಂಚಾಲಕರಾಗಿ ಶ್ರೀಶೈಲ ಆಲ್ದಳ್ಳಿ, ಸೋಮಶೇಖರಗೌಡ, ದೇವದಾಸ್, ಹಾಗೂ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು, 6 ಮಂದಿ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಲಾಯಿತು.

        ವೇದಿಕೆಯ ಮೇಲೆ ಜನಸಂಗ್ರಾಮ ಪರಿಷತ್‍ನರಾಜ್ಯಾಧ್ಯಕ್ಷರುಜಾನ್ ವೆಸ್ಲಿ, ಜಿಲ್ಲಾಉಪಾಧ್ಯಕ್ಷರುಟಿ.ಎಂ.ಶಿವಕುಮಾರ್, ಮಹಾತ್ಮಗಾಂಧಿ ವಿವಿದೋದ್ದೇಶ ಸಂಘದಶಿವಾನಂದಯ್ಯ ಸ್ವಾಮಿ, ಮಹಾರುದ್ರಗೌಡ, ಆಶಾ ಕಾರ್ಯಕರ್ತೆಯರ ಸಂಘದರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, ಜನಾಂದೋಲನ ಮಹಾಮೈತ್ರಿಯಚಂದ್ರಶೇಖರ್ ಮೇಟಿ, ರೈತ ಕೃಷಿ ಕಾರ್ಮಿಕ ಸಂಘಟನೆಯದೇವದಾಸ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link