ನಾಳೆ ತರಾತುರಿಯಲ್ಲಿ ಮಿನಿ ವಿಧಾಸೌಧದ ಉದ್ಘಾಟನೆ

ಶಿರಾ

    ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಕಂದಾಯ ಇಲಾಖೆಯ ಮಿನಿ ವಿಧಾನಸೌಧದ ಕಾಮಗಾರಿ ಮುಗಿದು ಎರಡೂ ವರ್ಷಗಳೇ ಸಂದಿದ್ದರೂ ಈವರೆಗೂ ಈ ನೂತನ ಕಟ್ಟದ ಉದ್ಘಾಟನೆಯನ್ನು ಮಾಡದ ಜಿಲ್ಲಾಡಳಿತ ದಿಢೀರನೆ ಸೆ. 10 ರಂದು ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಿರುವುದು ಸೋಜಿಗದ ಸಂಗತಿಯೂ ಆಗಿದೆ.

   ಈವರೆಗೆ ಕಟ್ಟಡ ಪೂರ್ಣಗೊಂಡು ಎರಡೂ ವರ್ಷಗಳೆ ಕಳೆದರೂ ಸದರಿ ಕಟ್ಟಡದ ಉದ್ಘಾಟನೆಯ ಬಗ್ಗೆ ಯಾರೂ ಕೂಡ ಚಕಾರವನ್ನೇ ಎತ್ತಿರಲಿಲ್ಲ. ಈ ನೂತನ ಕಟ್ಟಡಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳೊಂದೂ ಇಲ್ಲವಾದರೂ ದಿಢೀರನೇ ಕಟ್ಟಡದ ಉದ್ಘಾಟನೆ ಮಾಡುತ್ತಿರುವುದರ ಹಿಂದೆ ಶೀಘ್ರದಲ್ಲಿಯೇ ಬರಲಿರುವ ಶಿರಾ ಕ್ಷೇತ್ರದ ಉಪ ಚುನಾವಣೆ ಇದೆ ಎಂದರೂ ತಪ್ಪಾಗಲಾರದು.

    ಚುನಾವಣೆಗೂ ಮುನ್ನವೇ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಕೈತೊಳೆದುಕೊಂಡುಬಿಡಬೇಕು ಎಂಬುದು ಜಿಲ್ಲಾಡಳಿತದ ಉದ್ದೇಶ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ತರಾತುರಿಯಲ್ಲಿ ಉದ್ಘಾಟನೆಯ ಕಾರ್ಯ ನೆರವೇರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.ಕಂದಾಯ ಸಚಿವ ಆರ್.ಅಶೋಕ್ ನೂತನ ಕಟ್ಟಡಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸುವರು. ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಸಂಸದ ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಸಂಸದರಾದ ಬೆಮೆಲ್ ಕಾಂತರಾಜು, ವೈ.ಎ.ನಾರಾಯಣಸ್ವಾಮಿ, ತಾ.ಪಂ. ಸದಸ್ಯ ಚಂದ್ರಯ್ಯ ಮುಂತಾದವರು ಪಾಲ್ಗೊಳ್ಳುವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link