ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ದುಂಬಾಲು ಬೀಳುತ್ತಿರುವ ಶಾಸಕರು..!

ಬೆಂಗಳೂರು

     ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಮುಖ್ಯಮಂತ್ರಿ ಸಿದ್ದವಿಲ್ಲದಿದ್ದರೂ ಸಂಪುಟದ ಸಚಿವರು,ಶಾಸಕರು ಪೈಪೋಟಿಗೆ ಬಿದ್ದು ತಮ್ಮ ಸಮುದಾಯದ ಪ್ರಮುಖ ವ್ಯಕ್ತಿಗಳ ಹೆಸರನ್ನು ಇಂದಿರಾ ಕ್ಯಾಂಟೀನ್ ಇಡಿ ಎಂದು ಹೊಸ ಖ್ಯಾತೆ ತೆಗೆದಿದ್ದಾರೆ.

     ಕಾಂಗ್ರೆಸ್ ಸರ್ಕಾರ,ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾ ಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಸಚಿವರು ಹಾಗೂ ಶಾಸಕರು ಬಿಗಿ ಪಟ್ಟುಹಿಡಿದಿದ್ದಾರೆ.ಬಿಜೆಪಿ ಸರ್ಕಾರ ಈಗಾಗಲೇ ಇಂದಿರಾ ಹೆಸರು ತೆಗೆದು ಅದರ ಬದಲಿಗೆ ವಾಲ್ಮೀಕಿ ಹೆಸರಿಡು ವಂತೆ ವಾಲ್ಮೀಕಿ ಸಮುದಾಯ ನಾಯಕರು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದ್ದಾರೆ.ಶಾಸಕರ ಒತ್ತಾಯಕ್ಕೆ ಮಣಿದು ಕಂದಾಯ ಸಚಿವ ಆರ್.ಅಶೋಕ್ ಹೆಸರು ಬದಲಾಯಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿ ಮುಖ್ಯಮಂತ್ರಿ ಅವರನ್ನೇ ಪೇಚಿಗೆ ಸಿಲುಕಿಸಿದ್ದಾರೆ.

      ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಚಿಂತನೆ ವ್ಯಕ್ತವಾಗು ತ್ತಿದ್ದಂತೆಯೇ ಒಬ್ಬೊಬ್ಬ ಬಿಜೆಪಿ ಶಾಸಕರು ಒಂದೊಂದು ಹೊಸ ಹೊಸ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿ ಮುಂದೆ ಮಂಡಿಸಿದ್ದಾರೆ. ಬಿಜೆಪಿ ಶಾಸಕ ರಾಜುಗೌಡ ಇಂದಿರಾ ಕ್ಯಾಂಟೀನ್ ಹೆಸರನ್ನು ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಹೆಸರಿಡುವಂತೆ ಸಿಎಂಗೆ ಮನವಿ ಮಾಡಿದ್ದರು.ಇದಕ್ಕೆ ಸಚಿವ ಆರ್.ಅಶೋಕ್ ಕೂಡ ತಮ್ಮ ಒಲವು ವ್ಯಕ್ತಪಡಿಸಿದ್ದರು.

    ಆದರೆ,ಅದರ ಬೆನ್ನಲ್ಲೇ ಸಚಿವ ಸಿ.ಟಿ.ರವಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿರುವಂತೆ ಇಂದಿರಾ ಕ್ಯಾಂಟೀನ್ ಗೆ ?ಅನ್ನಪೂರ್ಣ ಕ್ಯಾಂಟೀನ್? ಹೆಸರಿಡುವುದು ಸೂಕ್ತ ಎಂಬ ಮನವಿ ಮಾಡಿದ್ದಾರೆ. ಇತ್ತ ಸಚಿವ ಸುರೇಶ್ ಕುಮಾರ್ ಇಂದಿರಾ ಕ್ಯಾಂಟೀನ್ ಗೆ ?ಅನ್ನ ಕಟೀರ? ಎಂದು ನಾಮಕರಣ ಮಾಡುವುದು ಒಳ್ಳೇದು ಎಂಬ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದಿಷ್ಟು ಶಾಸಕರು ಸ್ಥಳೀಯ ಜಿಲ್ಲೆ,ಪ್ರಾದೇಶಿಕ ಪ್ರಾಮುಖ್ಯತೆ ಆಧರಿಸಿ ಇಂದಿರಾ ಕ್ಯಾಂಟೀನ್ ಹೆಸರಿಡಬೇಕೆಂದು ಆಗ್ರಹಿಸಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಸಂಗೊಳ್ಳಿ ರಾಯಣ್ಣ ಹೆಸರಿಡುವುದು ಸೂಕ್ತ ಎಂಬ ಮನವಿಯನ್ನೂ ಮಾಡಿದ್ದಾರೆ.

     ಇತ್ತ ಬೆಂಗಳೂರು ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗೆ ನಾಡಪ್ರಭು ಕೆಂಪೇಗೌಡರ ಹೆಸರಿಡಲು ಬೆಂಗಳೂರು ಶಾಸಕರು ಮನವಿ ಮಾಡಿದ್ದಾರೆ. ರಾಜ್ಯದ ಆಯಾ ಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಆ ಭಾಗದ ಪುಣ್ಯ ಪುರುಷರ ಹೆಸರಿಡುವುದು ಸೂಕ್ತ ಎಂದು ಕೆಲ ಬಿಜೆಪಿ ಶಾಸಕರು ಸಲಹೆ ನೀಡುತ್ತಿದ್ದಾರೆ. ಇಷ್ಟೊಂದು ಹೆಸರುಗಳನ್ನು ಸೂಚಿಸಿ ಬಿಜೆಪಿ ಶಾಸಕರುಗಳು ಮನವಿ ಮಾಡುತ್ತಿರುವುದರಿಂದ ಸಿಎಂ ಯಡಿಯೂರಪ್ಪ ಅವರೇ ಈಗ ಪೇಚಿಕೆ ಸಿಲುಕಿದ್ದಾರೆ. ಇಷ್ಟೊಂದು ಹೆಸರುಗಳಲ್ಲಿ ಯಾವ ಹೆಸರಿಡೋದಪ್ಪಾ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link