ಅಲೆಯೊಂದಕ್ಕೆ ಸಿಕ್ಕು ಜಾರಿಬಿದ್ದ ಶಾಸಕ

0
34
ಉಡುಪಿ: 
       ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಮಹಾಲಯ ಅಮಾವಾಸ್ಯೆಯ ದಿನದಂದು ಉಡುಪಿಯ ಶಾಸಕರು ಪಿಂಡ ಪ್ರಧಾನ ಮಾಡಲು  ಸಮುದ್ರ ಸ್ನಾನಕ್ಕೆ ತೆರಳಿದ್ದರು ಸಮುದ್ರದ ದೊಡ್ಡ ಅಲೆಯೊಂದಕ್ಕೆ ಸಿಕ್ಕು ಜಾರಿಬಿದ್ದ ಘಟನೆ ನೆಡೆದಿದೆ.
ಹಿನ್ನೆಲೆ:
       ಪಿತೃಪಕ್ಷದ ಹಿನ್ನೆಲೆಯಲ್ಲಿ ಮಂಗಳವಾರ ಬೈಂದೂರಿನ ಮರವಂತೆ ಕಡಲ ತೀರದಲ್ಲಿ‌ ಪಿಂಡ ಪ್ರಧಾನದ ನಂತರ ಸಮುದ್ರ ಸ್ನಾನಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾಸಕ ಸುಕುಮಾರ ಶೆಟ್ಟಿ ತಮ್ಮ‌ ಬೆಂಬಲಿಗರೊಂದಿಗೆ ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಬೆಂಬಲಿಗರು ಗುಂಡಿ ಇದೆ ಮುಂದೆ ಹೋಗಬೇಡಿ‌ ಹೇಳಿದರೂ ಶಾಸಕರು ಮುಂದೆ ಹೋಗಿದ್ದಾರೆ. ಆಗ ದೊಡ್ಡ ಅಲೆಯೊಂದು ಶಾಸಕರು‌ ಹಾಗೂ ಬೆಂಬಲಿಗರಿಗೆ ಅಪ್ಪಳಿಸಿದ್ದು, ಆ ಅಲೆಯ ಹೊಡೆತಕ್ಕೆ ಶಾಸಕ ಸುಕುಮಾರ ಶೆಟ್ಟಿ ಸಮುದ್ರ ದಡದಲ್ಲಿಯೇ ಬಿದ್ದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here