ಮೊಲದ ಬೇಟೆಯಲ್ಲಿಯೇ ಬಲೆಗೆ ಬಿದ್ದ ಕರಡಿ

ಕೂಡ್ಲಿಗಿ
         ತಾಲ್ಲೂಕಿನ  ಶಿವಪುರ ಗ್ರಾಮದ ಹೊರವಲಯದಲ್ಲಿ ಅರಣ್ಯ ಪ್ರದೇಶದಲ್ಲಿ ಉಗಾದಿ ಪ್ರಯುಕ ಮೊಲದ ಬೇಟೆಗೆ ಬಲೆಯನ್ನು ಎಣೆದು ಕುಳಿತಿದ್ದು.ಆ ಬಲೆಗೆ ಕರಡಿ ಮರಿಯೊಂದು ಸಿಲುಕಿಕೊಂಡಿದ್ದು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷದ ಕಾಲ ಬಲೆಯಲ್ಲಿ ತೊಳಲಾಡಿ ನಂತರ ಅದೃಷ್ಟವಶಾತ್ ಬಲೆಯಿಂದ  ಕರಡಿ ಮರಿ ತಪ್ಪಿಸಿಕೊಂಡು ಹೋಗಿರುವ ಘಟನೆ ಜರುಗಿದ್ದು.
   
        ಅದು ತಡವಾಗಿ ಬೆಳಕಿಗೆ ಬಂದಿದೆ ಟು ಮೂಲಕ್ಕಾಗಿ ಭೇಟಿ ಹೇಳಲು ಕೂಡ್ಲಿಗಿ ಪಟ್ಟಣ ರಾಮು ಎಂಬುವವರು ಮತ್ತು ಆತನ ಸ್ನೇಹಿತರು ಗುಂಡು ತೆರಳಿದ್ದ ಸಂದರ್ಭದಲ್ಲಿ ಘಟನೆ ಜರುಗಿದೆ.ಮೊಲ.ವನ್ಯ ಪಕ್ಷಿಗಳು. ಕೆಲ ಜೀವಿಗಳನ್ನು ಬೇಟೆಯಾಡುವುದು ಸರ್ವೇ ಸಾಮಾನ್ಯವಾಗಿ ಜರುಗುತ್ತಿವೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿದೆ ಅದಕ್ಕೆ ಈ ಘಟನೆಯ ನಿದರ್ಶನವಾಗಿದ್ದು  ಪೂರಕವಾದ ಸಾಕ್ಷ್ಯಾಧಾರಗಳ ಸಮೇತ ಅಧಿಕಾರಿಳಿಗೆ ವರದಿ ಮಾಡಲಾಗುವುದು ಮತ್ತು ದೂರು ನೀಡಲಾಗುವುದು ಎಂದು ಸಾಮಾಜಿಕ ಹೋರಾಟಗಾರರು ತಿಳಿಸಿದ್ದಾರೆ.
 
        ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ಅಧಿಕಾರಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಅರಣ್ಯಾಧಿಕಾರಿ ರೇಣುಕಾ ಅವರು ಹೇಳಿಕೆ ನೀಡಿದ್ದು ಆರೋಪಿ ರಾಮು ಹಾಗೂ ಆತನ ಸಹಪಾಠಿ ಅರೊೀಪಿಗಳ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಜಾಮೀನು ರಹಿತ ಬಂಧನ ಆದೇಶವಿದ್ದು.ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಪ್ರಕರಣ ಪ್ರಗತಿಯಲ್ಲಿದೆ ಎಂದು ಅರಣ್ಯಾಧಿಕಾರಿ  ಎ. ರೇಣುಕಾರವರು ತಿಳಿಸಿದ್ದಾರೆ ಬೇಟೆಯಾಡುವುದು
 

       ಕಾನೂನು ಬಾಹಿರ ವಾಗಿದೆ ಯಾದರೂ ಬೇಟೆಯಾಡುವುದು ಕೂಡ್ಲಿಗಿ ತಾಲ್ಲೂಕು ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿಯೇ ಜರುಗುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಕರಿಸುತ್ತದೆ.ಯಾವುದೇ ಸಣ್ಣ ಕಾರ್ಯಕ್ರಮಗಳು ಚಟುವಟಿಕೆಗಳು ಜರುಗಿದರೂ ಪ್ರಚಾರಬಯಸುವ ಅರಣ್ಯಾಧಿಕಾರಿಗಳು ಘಟನೆ ಜರುಗಿದ ದಿನಗಳೇ ಕಳೆದರೂ ಕೂಡ ಯಾವುದೇ ರೀತಿಯ ಮಾಹಿತಿ ನೀಡಲು ಅರಣ್ಯ ಇಲಾಖಾಧಿಕಾರಿಗಳು ಹಿಂದೇಟು ಹಾಕಿದ್ದು ಸೋಜಿಗವಾಗಿದೆ.ಇದು ಆರೋಪಿಗಳ ರಕ್ಷಣೆಗೆ  ಪ್ರಭಾವಿಗಳ ಕಾಣದ ಕೈ ಅಥವಾ ಪ್ರಭಾವಿ ಭ್ರಷ್ಟ ಅಧಿಕಾರಿಗಳ ಕಾಣದ ಕೈ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕವಲಯದಲ್ಲಿ ಮೂಡಿದೆ.   ವರದಿ:ವಿ.ಜಿ. ವೃಷಬೇಂದ್ರ ಕೂಡ್ಲಿಗಿ -9008937428.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 
Attachments area

Recent Articles

spot_img

Related Stories

Share via
Copy link