ಮೊದಲ ವರ್ಷದ ಮಹಾಸಭೆ

ಗುಬ್ಬಿ

     ಸಾವಯವ ಕೃಷಿ ಉತ್ಪನ್ನಗಳಿಂದ ಉತ್ತಮ ಪೌಷ್ಠಿಕಾಂಶದ ಆಹಾರಗಳನ್ನು ಪಡೆಯಲು ಸಾಧ್ಯವಿದ್ದು ಈ ನಿಟ್ಟಿನಲ್ಲಿ ರೈತರು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯುವತ್ತ ಮುಂದಾಗಬೇಕೆಂದು ಕೃಷಿ ವಿಜ್ಞಾನಿ ಡಾ:ವೆಂಕಟೇಶ್ ತಿಳಿಸಿದರು.

       ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಐಡಿಎಫ್ ಸಂಸ್ಥೆ ಬೆಂಬಲಿತ ನಿಟ್ಟೂರು ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಇದರ ಪ್ರಾರಂಭೋತ್ಸವ ಹಾಗೂ ಮೊದಲ ವರ್ಷದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಮಾರುಕಟ್ಟೆಯಲ್ಲಿ ಹೆಚ್ಚು ಬೆಡಿಕೆ ಇರುವ ವಸ್ತುಗಳನ್ನು ಉತ್ಪಾದಿಸುವ ಕೌಶಲ್ಯವನ್ನು ರೂಡಿಸಿಕೊಳ್ಳಬೇಕು ಮತ್ತು ಎಲ್ಲಾ ಪ್ರದೇಶದಲ್ಲಿ ಗೋಡಂಬಿಯನ್ನು ಬೆಳೆಯಬಹುದು ಇದರಿಂದ ರೈತರು ಆರ್ಥಿಕವಾಗಿ ಅಭಿವೃಧ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

      ನಿಟ್ಟೂರು ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‍ನ ಅಧ್ಯಕ್ಷ ವೈ.ಆರ್.ಹರೀಶ್ ಮಾತನಾಡಿ ಕಂಪನಿಯು ಆರ್ಥಿಕ ಚಟುವಟಿಕೆಯ ಜೊತೆಯಲ್ಲಿ ಮಾರಾಟ ವ್ಯವಹಾರ ಮಾಡುವುದರಿಂದ ರೈತರು ಬೆಳೆದ ಬೆಳೆಗಳನ್ನು ನಮ್ಮ ಕಂಪನಿಯು ಖರೀದಿ ಮಾಡುತ್ತದೆ. ಆದ್ದರಿಂದ ಸಾವಯವದಲ್ಲಿ ರೈತರು ತರಕಾರಿ ಮತ್ತು ಕೃಷಿಧಾನ್ಯಗಳನ್ನು ಬೆಳೆಯಬೇಕು ಇದರಿಂದ ಉತ್ತಮ ಪೌಷ್ಠಿಕಾಂಶ ಪಡೆಯಬಹುದಾಗಿದೆ ಎಂದು ತಿಳಿಸಿದರು.

        ಐಡಿಎಫ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಎನ್.ಸಾಲಿಮಠ ಮಾತನಾಡಿ ಕಂಪನಿಯ ಷೇರುದಾರರು ನೋಡಿ ಕಲಿ ಮಾಡಿ ಕಲಿ ತತ್ವದಂತೆ ಇತರೆ ಕಂಪನಿಗೆ ಭೇಟಿ ನೀಡಿ ಅವರ ಚಟುವಟಿಗಳನ್ನು ಅಧ್ಯಯನ ಮಾಡಿ ತಮ್ಮ ಕಂಪನಿಯು ಯಾವ ರೀತಿಯ ಬದಲಾವಣೆಯನ್ನು ಕಾಣಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಯಾವುದೇ ಕಂಪನಿಯು ಮೂರು ನಾಲ್ಕು ವರ್ಷಗಳ ಕಾಲ ವ್ಯವಹಾರ ಮಾಡಿದಾಗ ಮಾತ್ರ ಲಾಭ ನಷ್ಟ ಎಂಬುದನ್ನು ಮನಗಾಣಬಹುದು. ನಿರ್ದೇಶಕರು ಕಂಪನಿಯ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

        ಐಡಿಎಫ್ ಸಂಸ್ಥೆಯ ಟ್ರಸ್ಟಿ ತೀ.ವೆಂ.ಶ್ರೀಕಾಂತ ಶೆಣೈ ಮಾತನಾಡಿ ರೈತರು ಸಾವಯವಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ವ್ಯವಸಾಯದಲ್ಲಿ ಕಡಿಮೆ ಖರ್ಚಿನಲ್ಲಿ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಆರೋಗ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕು ಎಂದು ತಿಳಿಸಿದ ಅವರು ಸಾವಯವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು ರೈತ ಸಮುದಾಯ ಆರೋಗ್ಯ ಮತ್ತು ಆರ್ಥಿಕ ದೃಷ್ಠಿಯಿಂದ ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವತ್ತ ಮುಂದಾಗಬೇಕೆಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ಐಡಿಎಫ್ ಸಂಸ್ಥೆಯ ಸತ್ಯಮಾಧವ್, ಚೇಳೂರು ಮತ್ತು ಹಾಗಲವಾಡಿ ರೈತ ಉತ್ಪಾದಕ ಕಂಪನಿಯ ಹೆಚ್.ಎಂ.ಲೋಕನಾಥ್, ಚನ್ನಬಸವೇಶ್ವರ ರೈತ ಉತ್ಪಾದಕ ಕಂಪನಿಯ ಯತೀಶ್‍ಕುಮಾರ್, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರರೆಡ್ಡಿ, ಕ್ಷೇತ್ರಾಧಿಕಾರಿ ಭಾನುಮತಿ, ಐಡಿಎಫ್ ಸಂಸ್ಥೆಯ ಪರಿಣಿತ ನಿರ್ದೇಶಕರಾದ ಗೋವಿಂದರಾಜನ್, ಮು.ಲ.ಕೆಂಪೇಗೌಡ, ಬಿ.ಸಂಗಪ್ಪ, ಗುರುದತ್, ತಾಲ್ಲೂಕು ಸಂಯೋಜಕ ಆರುಣ್‍ಗೌಡ, ವ್ಯವಸ್ಥಾಪಕ ಗೋವಿಂದರಾಜು, ಕಂಪನಿಯ ನಿರ್ದೇಶಕರುಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link