ಗಂಗಾವತಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನ

ಹೊಸಪೇಟೆ:

      ದೇಶದ ಅಭಿವೃದ್ಧಿಯ ಹರಿಕಾರ 2ನೇ ಬಾರಿ ಪ್ರಧಾನಿಯಾಗಲು ಈಗಾಗಲೇ ಎಲ್ಲ ಕಡೆ ಚುನಾವಣಾ ಪ್ರಚಾರ ನಿಮಿತ್ತ ಆಗಮಿಸುತ್ತಿರುವ ನರೇಂದ್ರ ಮೋದಿಯವರು ಇಂದು ಗಂಗಾವತಿಗೆ ಆಗಮಿಸಲಿದ್ದು ಎರಡು ಲಕ್ಷಕ್ಕೂ ಅಧಿಕ ಜನಸ್ತೋಮ ಸೇರಲಿದೆ ಎಂದು ಭಾರತೀಯ ಜನತಾ ಪಕ್ಷದ ಮಂಡಲಾಧ್ಯಕ್ಷ ಅನಂತ ಪದ್ಮನಾಭ ತಿಳಿಸಿದರು.

      ಬಿಜೆಪಿ ಕಚೇರಿಯಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಗಂಗಾವತಿ ಬಳ್ಳಾರಿ, ರಾಯಚೂರು, ಕೊಪ್ಪಳ ಮೂರು ಲೋಕಸಭಾ ಕ್ಷೇತ್ರಗಳಿಗೆ ಭೌಗೋಳಿಕವಾಗಿ ವiಧ್ಯವಾಗುತ್ತಿರುವುದರಿಂದ ಗಂಗಾವತಿಯಲ್ಲಿ ಮೋದಿ ಕಾರ್ಯಕ್ರಮ ಮಾಡಲು ಪಕ್ಷದ ವರಿಷ್ಟರು ನಿರ್ಣಯಿಸಿದ್ದಾರೆ.

       ಎಂದ ಅವರು ಎಲ್ಲ ವಿಧಾನಸಭಾ ಕ್ಷೇತ್ರದಿಂದ 2 ಲಕ್ಷಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದು ವಿಜಯನಗರ ಕ್ಷೇತ್ರದಿಂದಲೇ 120 ವಾಹನಗಳು ತೆರಳುತ್ತಿದ್ದು ಮೋದಿ ಅಭಿಮಾನಿಗಳು, ಟೀಂ ಮೋದಿ ಸೇರಿದಂತೆ ಇನ್ನೂ ನೂರಾರು ಸಂಖ್ಯೆಯಲ್ಲಿ ವಾಹನಗಳು ತೆರಳುತ್ತಿವೆ, ಹೆಚ್ಚಿನ ಸಂಖ್ಯೆಯಲ್ಲಿ ಮೋದಿ ಅವರ ಭಾಷಣವನ್ನು ಕೇಳಲು ಕಾರ್ಯಕರ್ತರು ಆಗಮಿಸಲು ವಿನಂತಿಸಿದರು. ಮೋದಿಯವರ ಕಾರ್ಯಸಾಧನೆಗಳು ವಿಶ್ವಕ್ಕೆ ಮಾದರಿಯಾಗುತ್ತಿದ್ದು ಅವರ ಗೆಲುವಿನ ಓಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಈ ಸಂದರ್ಭದಲ್ಲಿ ತಿಳಿಸಿದರು,

       ಇಂದು ಶ್ರೀರಾಮುಲು ಮತಪ್ರಚಾರ: ಕಮಲಾಪುರದಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ವೈ ದೇವೇಂದ್ರಪ್ಪ ಅವರ ಪರ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಲಿದ್ದು ವಿವಿಧ ಮೋರ್ಚಾದ ಕಾರ್ಯಕರ್ತರು ಸೇರಿದಂತೆ ಮಂಡಲಾಧ್ಯಕ್ಷ ಅನಂತ ಪದ್ಮನಾಭ, ಮಾಜಿ ಶಾಸಕ ಹೆಚ್.ಆರ್. ಗವಿಯಪ್ಪ, ಸಾಲಿ ಸಿದ್ದಯ್ಯ, ರಾಣಿ ಸಂಯುಕ್ತ, ಕಮಲಾಪುರ ಭಾಗದ ಪ್ರಮುಖರು ಭಾಗವಹಿಸಲಿದ್ದಾರೆ

      ಮಹಾಸಂಪರ್ಕ ಅಭಿಯಾನ: ಈ ತಿಂಗಳ 14ನೇ ತಾರೀಖಿನಂದು ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ಬೂತ್‍ಗಳಲ್ಲಿ ಬರುವ ಮತದಾರರನ್ನು ತಲುಪುವ ದೃಷ್ಟಿಯಿಂದ “ಮೆರಾಬೂತ್ ಸಬ್ಸೇ ಮಜಬೂತ್” ಕಾರ್ಯಕ್ರಮದ ಅಡಿಯಲ್ಲಿ ಸುಮಾರು 2 ಸಾವಿgಕ್ಕೂ ಹೆಚ್ಚಿನ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಏಕ ಕಾಲಕ್ಕೆ ಪ್ರಚಾರ ಕಾರ್ಯ ನಿರ್ವಹಿಸಲಿದ್ದಾರೆ.

      20ನೇ ತಾರೀಖು ಮಹಾರ್ಯಾಲಿ: ಶಾಸಕ ಶ್ರೀರಾಮುಲು ನೇತೃತ್ವದಲ್ಲಿ ರಾಜ್ಯದ ವಿವಿಧ ಮೋರ್ಚಾದ ಮುಖಂಡರು, ಪಕ್ಷದ ಹಿರಿಯರು ಸೇರಿದಂತೆ 10ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹೊಸಪೇಟೆಯಲ್ಲಿ ಶ್ರೀ ವಡಕರಾಯ ದೇವಸ್ಥಾನದಿಂದ ಆರಂಭಿಸಿ ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳ್ಳಾರಿ ವೃತ್ತದಲ್ಲಿ ಪೂರ್ಣಗೊಳ್ಳಲಿರುವ ಮಹಾರ್ಯಾಲಿಯು ದೇವೇಂದ್ರಪ್ಪ ಅವರ ಪರ ಮತಯಾಚನೆ ಹಾಗೂ ಮೋದಿ ಸಾಧನೆಗಳ ಕುರಿತು ಪ್ರಚಾರ ನಡೆಸಲಿದ್ದೇವೆ, ಎಂದು ಈ ಸಂದರ್ಭದಲ್ಲಿ ತಿಳಿಸಿದರು.

     ಸ್ಪಷ್ಟೀಕರಣ: ನಾಗನಹಳ್ಳಿ ಚಂದ್ರಶೇಖರ್ ಅವರು ಒಂದು ಕಾಲದಲ್ಲಿ ಪಕ್ಷದ ಪದಾಧಿಕಾರಿ ಯಾಗಿದ್ದರು ಅವರಿಗೆ ಯಾವುದೇ ಜವಾಬ್ದಾರಿಗಳು ಹಾಲಿ ಇರುವುದಿಲ್ಲ, ತಪ್ಪು ಮಾಡಿದವರು ಯಾರೇ ಆಗಿರಲಿ ಕಾನೂನಾತ್ಮಕ ಪ್ರಕ್ರಿಯೆಗಳು ಜರುಗಲಿದೆ, ಇದರಲ್ಲಿ ಪಕ್ಷ ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲ, ಮತ್ತು  ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಕೆಲವರು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಮಾಡುತ್ತಿದು, ಇದಕ್ಕೆ ನಮ್ಮ ಕಡೆಯಿಂದ ಯಾವುದೇ ಪ್ರಕ್ರಿಯೆ ಕೊಡುವುದಿಲ್ಲ, ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ, ಎಂದು ಹೇಳುವುದಕ್ಕೆ ಮುಂಚೆ ತಮ್ಮ ತಟ್ಟೆಯಲ್ಲಿರುವ ಹೆಗ್ಗಣವನ್ನು ನೋಡಲಿ ಎಂದು ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತ ಅತ್ಯಾಚಾರ ಪ್ರಕರಣಕ್ಕೆ ಸ್ಪಷ್ಟನೆ ನೀಡಿದರು, ಈ ಸಂದರ್ಭದಲ್ಲಿ ಗೋವಿಂದರಾಜು, ಜೆ ವಸಂತ, ಯಮುನೇಶ್, ರಾಣಿ ಸಂಯುಕ್ತ, ಡಿ ಶ್ರೀನಿವಾಸ, ಸಂಗಪ್ಪ, ಪಂಚಪ್ಪ, ರಾಘವೇಂದ್ರ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link