ಮೂರು ವರ್ಷದ ಹೆಣ್ಣುಮಗುವಿನ ಜೊತೆ ಬಾವಿಗೆ ಹಾರಿದ ತಾಯಿ

ಬೆಂಗಳೂರು

        ಮೂರು ವರ್ಷದ ಹೆಣ್ಣುಮಗುವಿನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

         ಮೃತರನ್ನು ಅವುಲನಾಗೇನಹಳ್ಳಿಯ ಐಶ್ವರ್ಯ(26)ಮತ್ತವರ ಪುತ್ರಿ ಪ್ರಣೀತಾ(3) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಬಿ.ಕೊತ್ತಕೋಟದ ಸೋದರಮಾವ ಮಂಜನಾಥ್ ನೊಂದಿಗೆ ಐಶ್ವರ್ಯಗೆ ವಿವಾಹ ಮಾಡಿಕೊಡಲಾಗಿತ್ತು.ಮಂಜುನಾಥ್ ಹೈದರಾಬಾದ್‍ನ ಪ್ರಿಂಟಿಗ್ ಪ್ರೆಸ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ದಂಪತಿ ಹೈದರಾಬಾದ್‍ನಲ್ಲಿ ಜೀವನ ಸಾಗಿಸುತ್ತಿದ್ದರು. 3 ದಿನಗಳ ಹಿಂದೆ ತವರು ಮನೆಗೆ ತನ್ನ ಮಗುವಿನ ಜೊತೆ ಬಂದ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

            ಅವುಲನಾಗೇನಹಳ್ಳಿಯದ ರೈತ ವೆಂಕಟರೆಡ್ಡಿ ಎಂಬವರ ತೋಟದಲ್ಲಿನ ಬಾವಿಗೆ ತನ್ನ ಮಗುವಿನ ಜೊತೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾವಿ ಬಳಿ ಇದ್ದ ಚಪ್ಪಲಿಯನ್ನ ಕಂಡು ಬಾವಿ ಕಡೆಗೆ ರೈತ ವೆಂಕಟರೆಡ್ಡಿ ನೋಡಿದಾಗ ಬಾವಿಯಲ್ಲಿ ಐಶ್ವರ್ಯ ಹಾಗೂ ಮಗು ಬಿದ್ದಿರುವುದು ಕಂಡು ಬಂದಿದೆ. ಈ ಸಂಬಂಧ ಗುಡಿಬಂಡೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನ ಬಾವಿಯಿಂದ ಹೊರತೆಗೆದಿದ್ದಾರೆ. ಸದ್ಯ ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link