ಬೆಂಗಳೂರು
ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಇದೀಗ ಭವಿಷ್ಯದಲ್ಲಿ ನಡೆಯುವ ಬಹುಕೋಟಿ ವಂಚನೆ ಪ್ರಕರಣಗಳ ಕುರಿತು ತನಿಖೆಗೆ ಹೊಸ ವಿಭಾಗವನ್ನ ತೆರೆಯಲು ಚಿಂತನೆ ನಡೆಸಿದೆ.
ಹೊಸ ಎಫ್‍ಐಯು ಸಿಐಡಿ ಅಧೀನದಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲಿದೆ. ಹೊಸ ಠಾಣೆ ಆರಂಭಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಈಗಾಗ ಪ್ರಸ್ತಾವನೆಯನ್ನು ಪೊಲೀಸ್ ಇಲಾಖೆಗೆ ಕಳುಹಿಸಿದೆ.
ಕಳೆದ 2013 ರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಸುಮಾರು 450ಕ್ಕೂ ಬಹುಕೋಟಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟು 5200 ಕೋಟಿಯಷ್ಟು ವಂಚನೆ ಪ್ರಕರಣಗಳು ದಾಖಲಾಗಿದ್ದು, ಕಡಿಮೆ ಬೆಲೆಗೆ ಸೈಟು, ಮನೆ ಕೊಡುತ್ತೇವೆ ಮತ್ತು ಹಣ ಹೂಡಿಕೆ ಮಾಡಿದರೆ ಲಾಭ ಕೊಡ್ತೀವಿ ಎಂದು ನಂಬಿಸಿ ಕೆಲ ಖಾಸಗಿ ಕಂಪನಿಗಳು ಜನರಿಗೆ ಪಂಗನಾಮ ಹಾಕಿವೆ.
ಇದರಿಂದ ಜನ ತಮಗೆ ನ್ಯಾಯ ಸಿಗಲಿ ಎಂಬ ನಿಟ್ಟಿನಿಂದ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಆದರೆ ಪೊಲೀಸ್ ಇಲಾಖೆಗೆ ದಾಖಲಾಗಿರುವ ಹಲವಾರು ಪ್ರಕರಣಗಳನ್ನ ಪತ್ತೆ ಹಚ್ಚಲು ಕಾಲವಕಾಶ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ವಂಚನೆಗಳ ಕುರಿತು ನೇರವಾಗಿ ಸಿಐಡಿಗೆ ದೂರು ನೀಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ.
