ಶಿಗ್ಗಾವಿ :
ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳಾಗಿದ್ದಾರೆ, ಅಂತಹ ಸೇವಾ ನಿರತ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರದ ವತಿಯಿಂದ ಆಚರಿಸುತ್ತಾ ಬರುತ್ತಿರುವದು ಅತ್ಯಂತ ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಪೌರ ಸೇವಾ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಸಿಸಿ ಮಾತನಾಡಿದ ಅವರು ಪಟ್ಟಣದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ವೈದ್ಯಾದಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣದ ಪೌರರು ಆರೋಗ್ಯದಿಂದಿರಲು ಸಾದ್ಯ ಆನಿಟ್ಟಿನಲ್ಲಿ ಪೌರಕಾರ್ಮಿಕರು ಕೇಲಸದ ವೇಳೆ ಸರಕಾರ ನೀಡಿದ ಹ್ಯಾಂಡ ಬ್ಲೌಜ್ ಶೂಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಿದರು.
ದಿನಗೂಲಿ ಪೌರ ಕಾರ್ಮಿಕರಿಗೆ ವಿಳಂಬವಾದ ವೇತನವನ್ನು 15 ದಿನಗಳೊಳಗಾಗಿ ಪಾವತಿಸುವ ಬರವಸೆ ನೀಡಿದರು. ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಗೊಳಿಸುವಂತೆ ಮೇಲಾಧಿಕಾರಿಗಳೊಂದಿಗೆ ಈ ಹಿಂದೆಯೇ ಚರ್ಚಿಸಲಾಗಿದ್ದು ತಾಳ್ಮೆಯಿಂದ ನಡೆದಾಗ ಮಾತ್ರ ಬರುವ ದಿನಗಳು ನಿಮಗೆ ಶುಭಕರವಾಗಲಿದೆ ಎಂದು ಹೇಳಿದರು.
ಈ ಸಂದರ್ಬದಲ್ಲಿ ಕಾಯಂ ಪೌರ ಕಾರ್ಮಿಕರಿಗೆ ವಿಶೇಷ ಭತ್ತೆಯ ಚೆಕ್‍ನ್ನು ಪುರಸಭೆ ಅದ್ಯಕ್ಷೆ ಶಾಬಿರಾಬಿ ಯಲಗಚ್ಚ ವಿತರಿಸಿದರು. ನಂತರ ಸರ್ವ ದಿನಗೂಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪುರಸಭೆಯಿಂದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಚಿತ್ರಕಲೆ ಸ್ಪರ್ಧೆ ಎರ್ಪಡಿಸಲಾಗಿತ್ತು ಅದರಲ್ಲಿ ಪ್ರಥಮಸ್ಥಾನವನ್ನು ಸುಸ್ಮೀತಾ ಕಟ್ಟಿಮನಿ ದ್ವೀತಿಯ ರಾಧಿಕಾ ಕಲಾಲ ತೃತೀಯ ಸ್ಥಾನವನ್ನು ಎಸ್.ಎ.ಹೆಬಸೂರ ಪಡೆದರು ಅವರಿಗೆ ಪುರಸಭೆ ವತಿಯಿಂದ ಪ್ರಶಸ್ತಿಪತ್ರ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಮಾಜಿ ಸ್ಥಾಯಿ ಸಮಿತಿ ಅದ್ಯಕ್ಷ ಶಾಂತವೀರಯ್ಯ ಗಚ್ಚಿನಮಠ, ಉಮೇಶ ಮಾಳಗಿಮನಿ, ಪುರಸಭೆ ಸಿಂಬಂದಿಗಳಾದ ವೀರಯ್ಯ ಹಿರೇಮಠ, ಬಸವರಾಜ ಗಡಾದ, ಮಲ್ಲಮ್ಮ ಹರವಿ, ನಿಂಗಪ್ಪ ಹೊಸಮನಿ, ಗಂಗಾಧರ ಸಣಕ್ಯಾನವರ, ರಾಘವೇಂದ್ರ ಚವ್ಹಾಣ, ಡಿ.ಎಚ್.ಕೊರಕಲ್, ನೀರ್ಮಲಾ ಗುಡಿಮನಿ, ಪರಶುರಾಮ ಹೆಬ್ಬಾರ, ಪೌರ ನೌಕರ ಸಂಘದ ಅದ್ಯಕ್ಷ ನಿಂಗಪ್ಪ ಹೊಸಮನಿ ಸೇರಿದಂತೆ ಸರ್ವ ಪೌರ ಕಾರ್ಮಿಕರು ಉಪಸ್ಥಿತರಿದ್ದರು. ಬಿ.ಎಸ್.ಗಿಡ್ಡಣ್ಣವರ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
