ಚಿತ್ರದುರ್ಗ:
ಪಾಕಿಸ್ತಾನ್ ಮುರ್‍ದಾಬಾದ್, ಹಿಂದುಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಗಳೊಂದಿಗೆ ಪಾಕಿಸ್ತಾನಿ ಉಗ್ರರ ರಾಕ್ಷಿಸಿ ಕೃತ್ಯವನ್ನು ಖಂಡಿಸಿ ಚಿತ್ರದುರ್ಗದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ ಮುಸ್ಲಿಂರು ಉಗ್ರರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಾರತದ ವೀರಸೇನಾನಿಗಳನ್ನು ಉಗ್ರರು ಬಲಿಪಡೆದಿರುವುದನ್ನು ಖಂಡಿಸಿ ಜಾಮಿಯಮಸೀದಿ ಕಮಿಟಿ ಹಾಗೂ ಎಸ್.ಎಸ್.ಎಫ್ ಇವರುಗಳ ಸಹಯೋಗದೊಂದಿಗೆ ಬಡಮಕಾನ್‍ನಿಂದು ಹೊರಟ ಪ್ರತಿಭಟನಾಕಾರರು ಎಸ್.ಬಿ.ಎಂ.ವೃತ್ತದ ಮೂಲಕ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಹಾದು ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಉಗ್ರವಾದಿತನಕ್ಕೆ ಭಾರತ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಇಸ್ಲಾಂ ಎಂದರೆ ಶಾಂತಿಯ ಸಂಕೇತ, ರಕ್ತಪಾತವನ್ನು ಎಂದಿಗೂ ಇಸ್ಲಾಂ ಧರ್ಮ ಬಯಸುವುದಿಲ್ಲ. ಮುಸ್ಲಿಂ ಸಂಘಟನೆಯ ಹೆಸರಿನಲ್ಲಿ ಭಯೋತ್ಪಾದನೆ ನಡೆಸುವವರಿಗೂ ಇಸ್ಲಾಂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಭಾರತವನ್ನು ಛಿದ್ರಗೊಳಿಸಲು ಉಗ್ರರಿಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಪಾಕಿಸ್ತಾನಿ ಉಗ್ರರಿಗೆ ಪ್ರತಿಭಟನಾನಿರತ ಮುಸ್ಲಿಂರು ರವಾನಿಸಿದರು.
ಮೌಲ್ವಿಗಳಾದ ಅದಾಂ ಹಜರತ್, ಇಬ್ರಾಹಿಂ ಸಾಖಿ, ಸರ್‍ಖಾಜಿ ಸೈಯದ್ ಶಂಷುದ್ದಿನ್, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಿವೃತ್ತ ಡಿ.ವೈ.ಎಸ್ಪಿ.ಗಳಾದ ಸೈಯದ್‍ಇಸಾಖ್, ಬಡಮಕಾನ್ ಮುತುವಲ್ಲಿ ಎಂ.ಸಿ.ಓ.ಬಾಬು, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಗುಡ್‍ಲಕ್ ಇಮ್ತಿಯಾಜ್, ಬಾಬ್‍ಜಾನ್, ಶಫೀವುಲ್ಲಾ, ಹೆಚ್.ಶಬ್ಬೀರ್‍ಭಾಷ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.