ಮೈಸೂರು:
ಕೇಂದ್ರ ಸರ್ಕಾರದ 2020ರ ಸ್ವಚ್ಛ ಸರ್ವೇಕ್ಷಣೆಯ ಎರಡನೇ ತ್ರೈಮಾಸಿಕದಲ್ಲಿ ಅರಮನೆ ನಗರ ಮೈಸೂರು 9ನೇ ಸ್ಥಾನ ಪಡೆದುಕೊಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಪಟ್ಟಿ ಪ್ರಕಟಿಸಿದೆ.
ಈ ನಗರ 1ರಿಂದ 10 ಲಕ್ಷ ಜನಸಂಖ್ಯೆ ವರ್ಗದ ನಗರಗಳ ಪಟ್ಟಿಯಲ್ಲಿ ಪಾಲ್ಗೊಂಡಿದೆ. 2018ರ ಏಪ್ರಿಲ್ 19ರಿಂದ ಜೂನ್ 19ರವರೆಗೆ ಎರಡನೇ ತ್ರೈಮಾಸಿಕದ ಸ್ವಚ್ಛತಾ ಸರ್ವೇಕ್ಷಣೆಯನ್ನು ಹಮ್ಮಿಕೊಂಡಿದೆ. ಮೊದಲ ತ್ರೈಮಾಸಿಕದಲ್ಲಿ ಮೈಸೂರು 22ನೇ ಸ್ಥಾನದಲ್ಲಿತ್ತು. ಜನವರಿ 4ರಂದು ಅಧಿಕೃತ ಸರ್ವೆ ನಡೆಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.