ಹಾವೇರಿ :
ಕೃಷಿಕರು ಹೆಚ್ಚು ಪಶುಪಾಲನೆ ಮಾಡಿದರೆ ರೈತರ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ.ಮನೆಯಲ್ಲಿ ದನಕರುಗಳನ್ನು ಸಾಕುವದು ವೈಜ್ಞಾನಿಕ ಮತ್ತು ಆರ್ಥಿಕ ದೃಷ್ಠಿಯಿಂದ ಲಾಭದಾಯಕವಾಗಿದ್ದು ಎಂದು ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಶಿವಬಸವೇಶ್ವರ ಜಾನುವಾರುಗಳ ಉಪಮಾರುಕಟ್ಟೆಯಲ್ಲಿ ಲಿಂ, ಶಿವಬಸವ ಸ್ವಾಮೀಜಿಗಳ ಮತ್ತು ಲಿಂ.ಶಿವಲಿಂಗ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವದ ನಮ್ಮೂರ ಜಾತ್ರೆಯ ನಿಮಿತ್ತ ಹಮ್ಮಿಕೊಂಡಿರುವ 48 ನೇ ಶಿವಬಸವ ದನಗಳ ಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನುವಾರು ಮಾರುಕಟ್ಟೆಯು ಇತ್ತೀಚೆಗೆ ಹೆಚ್ಚು ಅಭಿವೃದ್ಧಿ ಹೊಂದಿದ್ದು, ಮೂಲಭೂತ ಸೌಕರ್ಯಗಳು ಇನ್ನೂ ಹೆಚ್ಚಾಗಬೇಕಿದೆ. ಒಂದು ಎತ್ತು, ಹತ್ತು ಜನಕ್ಕೆ ಸವiವಾಗಿದ್ದು ಪಶು ಪ್ರೀತಿಯು ನಮ್ಮಲ್ಲಿ ಬರಬೇಕಿದೆ. ಇನ್ನೆರಡು ವರ್ಷಗಳಲ್ಲಿ ದನಗಳ ಜಾತ್ರೆಯು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ಹಲವು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎ.ಪಿಎಂಸಿ ಅಧ್ಯಕ್ಷ ರಮೇಶ ಚಾವಡಿ ಮಾತನಾಡಿ, ಜಾನುವಾರು ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ದನಕರುಗಳಿಗೆ ಬೃಹತ್ ಮೇಲ್ಛಾವಣಿ ಮೂಲಕ ನೆರಳಿನ ವ್ಯವಸ್ಥೆ ಮಾಡಿದ್ದು, ಮೇಯು, ಕುಡಿಯುವ ನೀರು, ಇನ್ನಿತರ ಸೌಕರ್ಯಗಳನ್ನು ಒದಗಿಸಲಾಗುವದು ಎಂದು ಹೇಳಿದರು.
ಸಮಾರಂಭದಲ್ಲಿ ಪಶು ವೈದ್ಯಾಧಿಕಾರಿ ಡಾ|| ಎಚ್.ಜಿ ಸಣ್ಣಕ್ಕಿ ಮಾತನಾಡಿದರು. ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಎಪಿಎಂಸಿ ಉಪಾಧ್ಯಕ್ಷ ಸಣ್ಣಪ್ಪ ಮಾಳಿ, ಸದಸ್ಯ ರುದ್ರೇಶ ಚಿನ್ನಣ್ಣನವರ, ಶಾಂತಣ್ಣ ಅಟವಾಳಿಗಿ, ಪರಮೇಶಪ್ಪ ನಾಯಕ, ಸಿದ್ದಣ್ಣ ಕಡೇಮನಿ, ಪಿ.ಡಿ ಶಿರೂರ, ರಾಜಶೇಖರ ಮಾಗನೂರ, ತಮ್ಮಣ್ಣ ಮುದ್ದಿ , ಶಿವಯೋಗೆಪ್ಪ ಅರಣಿ, ಗಣೇಶಪ್ಪ ಹೂಗಾರ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಕೆ.ಆರ್ ನಾಶೀಪುರ ಸ್ವಾಗತಿಸಿದರು. ಬಿ.ಬಸವರಾಜ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಿ.ಎಂ ಮಠ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








