ಹೊಸಪೇಟೆ:
ಆಟೊ ಚಾಲಕರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಜಯನಗರ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಚಾಲಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಕೃಷ್ಣ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಆಟೋ ಚಾಲಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು ಈವರೆಗೂ ಯಾವುದೇ ಬೇಡಿಕೆಗೆ ಸ್ಪಂದಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ದೂರಿದರು.
ಬೇಡಿಕೆ:
ಆಟೋ ಚಾಲಕರ ಕುಟುಂಬಗಳಿಗೆ ನಿವೇಶನ ನೀಡಬೇಕು. ನಿವೇಶ ಇರುವವರಿಗೆ ಮನೆಗಳ ನಿರ್ಮಾಣಕ್ಕೆ ಅಗತ್ಯ ಸಹಾಯ ನೀಡಬೇಕು. ಆಟೋ ಗ್ಯಾಸ್ ದರ ಬಳ್ಳಾರಿಗಿಂತ ಹೊಸಪೇಟೆಯಲ್ಲಿ ನಾಲ್ಕು ರೂಗಳು ಹೆಚ್ಚಿಗಿದ್ದು ಕೂಡಲೇ ಇದನ್ನು ಸರಿಪಡಿಸಬೇಕು. ಪ್ರಸ್ತುತ ನಗರದಲ್ಲಿ ಎರಡು ಗ್ಯಾಸ್ ಬಂಕಿದ್ದು ಇನ್ನೂ ಎರಡು ಗ್ಯಾಸ್ ಬಂಕ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಗ್ಯಾಸ್ ಬಂಕ್‍ಗಳು 24 ತಾಸು ಕಾರ್ಯನಿರ್ವಹಿಸುವಂತೆ ಕ್ರಮವಹಿಸಬೇಕು. ಆಟೋ ನಿಲ್ದಾಣಗಳನ್ನು ಆಧುನಿಕರಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಪ್ರಕಾಶ್ ಬಾಬು, ವೆಂಕಟರಮಣ, ಜಂಬಯ್ಯ, ತಿಪ್ಪೇಸ್ವಾಮಿ, ಬಿ. ರಂಗಪ್ಪ, ರಾಮಚಂದ್ರ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
