ಕೃಷಿ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಪಾವಗಡ

         ತಾಲ್ಲೂಕಿನ ವೆಂಕಟಾಪುರ ಪ್ರ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 5 ವರ್ಷದ ಅವಧಿಗೆ ಭಾನುವಾರ ವೆಂಕಟಾಪುರ ಪ್ರಾಥಮಿಕ ಪಾಠ ಶಾಲೆಯಲ್ಲಿ ಚುನಾವಣೆ ನಡೆಯಿತು.

       ಸಂಘದ 12 ನಿರ್ದೇಶಕ ಸ್ಥಾನಗಳಿಗೆ, ಹಿಂದುಳಿದ ವರ್ಗದಿಂದ ಅವಿರೋಧವಾಗಿ ಡಿ.ಅಂಜಿನಪ್ಪ, ಆರ್.ಶಂಕರಪ್ಪ, ವೆಂಕಟಲಕ್ಷ್ಮಮ್ಮ, ರಾಮಾಂಜಿನಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ರಾಮಲಿಂಗಪ್ಪ ಆಯ್ಕೆಯಾಗಿದ್ದಾರೆ. ಉಳಿದ 7 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 14 ಜನ ಕಣದಲ್ಲಿ ಇದ್ದು, ಸಾಮಾನ್ಯ ಕ್ಷೇತ್ರದಿಂದ ನಾಗೇಶ್, ರಘುನಾಥ್‍ರೆಡ್ಡಿ, ಎಸ್.ಪುರುಷೋತ್ತಮ, ಎನ್.ಹರೀಶ್ ಮತ್ತು ಎಸ್.ಸಿ ಕ್ಷೇತ್ರದಿಂದ ತಿಮ್ಮರಾಯಪ್ಪ, ಎಸ್.ಟಿ ಕ್ಷೇತ್ರದಿಂದ ಎ.ರಾಮಾಂಜಿನಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಚ್.ಸಿ.ಸೌಮ್ಯ ತಿಳಿಸಿದರು.

        ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎನ್.ವಿ.ನಾಗಭೂಷಣ ಹಾಜರಿದ್ದರು. ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link