ಜಿಲ್ಲಾಧಿಕಾರಿಗಳಿಂದ ಚೆಕ್ ಪೋಸ್ಟ್ ಪರಿಶೀಲನೆ

0
9

ಹುಳಿಯಾರು

           ಪಟ್ಟಣ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯ ಲೋಕಸಭಾ ಚುನಾವಣಾ ಸಂಬಂಧ ತೆರೆದಿರುವ ಕೋಡಿಪಾಳ್ಯದ ಚೆಕ್ ಪೋಸ್ಟ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸಂಜೆ ಭೇಟಿ ನೀಡಿದ್ದರು.

          ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಅಂತರ್ ರಾಜ್ಯಗಳಿಂದ ಬರುವ ಲಾರಿ, ಕಾರುಗಳನ್ನು ತಪ್ಪದೆ ಚಕ್ ಮಾಡಬೇಕು. ರಾತ್ರಿ ವೇಳೆ ವಾಹನಗಳು ಅತೀ ವೇಗವಾಗಿ ಚಲಿಸುವುದರಿಂದ ರಾತ್ರಿ ಪಾಳೆಯದವರು ಜಾಗರುಕರಾಗಿ ಕರ್ತವ್ಯ ನಿರ್ವಹಿಸಬೇಕು. ಪೊಲೀಸ್ ಇಲಾಖೆಯಿಂದ ಇಡಲಾಗಿರುವ ಬ್ಯಾರಿಕೇಡ್‍ಗಳು ಶಿಥಿಲಗೊಂಡಿರುವದರಿಂದ ಬೇರೆ ಬ್ಯಾರಿಕೇಡ್ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ್ ಅವರಿಗೆ ಆದೇಶ ನೀಡಿದರು.

         ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, ಸಿಬ್ಬಂದಿ ಸೂಕ್ಷ್ಮವಾಗಿ ವಾಹನಗಳ ತಪಾಸಣೆ ಮಾಡಬೇಕು. ಹಣ ಇನ್ನಿತರೆ ವಸ್ತುಗಳ ಸಾಗಾಟದ ಮೇಲೆ ನಿಗಾ ಇಟ್ಟಿರಬೇಕು. ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ತಹಶೀಲ್ದಾರ್ ತೇಜಸ್ವಿನಿ, ಸಿಪಿಐ ಸುರೇಶ್, ಉಪತಹಶೀಲ್ದಾರ್ ಮಲ್ಲಿಕಾರ್ಜುನಯ್ಯ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here