ತುಮಕೂರಿನಲ್ಲಿ ತಾನಿಷ್ಕ್ ಆಭರಣ ಮಳಿಗೆ ಶುಭಾರಂಭ..!!

ತುಮಕೂರು

      ಹೆಸರಾಂತ ಆಭರಣ ಸಂಸ್ಥೆಯ ತಾನಿಷ್ಕ್ ಜ್ಯೂವೆಲರ್ಸ್‍ನ 290ನೇ ಶಾಖೆ ತುಮಕೂರಿನಲ್ಲಿ ಶುಕ್ರವಾರ ಆರಂಭವಾಯಿತು. ಜನರಲ್ ಕಾರಿಯಪ್ಪ ರಸ್ತೆಯ ಕಟ್ಟಡದ ವಿಶಾಲ ಮಳಿಗೆಯಲ್ಲಿ ತಾನಿಷ್ಕ್ ಫ್ರಾಚೆಸ್ಸಿ ಶಾಖೆಯನ್ನು ಟೈಟಾನ್ ಸಂಸ್ಥೆಯ ಜ್ಯೂವೆಲ್ಲರಿ ವಿಭಾಗದ ರೀಟೆಲ್ ಮತ್ತು ಮಾರ್ಕೆಟಿಂಗ್‍ನ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ಉದ್ಘಾಟಿಸಿ ಶುಭ ಕೋರಿದರು.

      1996ರಲ್ಲಿ ಚೆನ್ನೈನಲ್ಲಿ ಆರಂಭವಾದ ತಾನಿಷ್ಕ್ ಜ್ಯೂವೆಲ್ಲರಿ ವಿವಿಧ 180 ನಗರಗಳಲ್ಲಿ 190 ಶಾಖೆ ಹೊಂದಿದೆ. ಕರ್ನಾಟಕದಲ್ಲಿ ಹೆಚ್ಚು ಶಾಖೆ ತೆರೆಯುವ ಇಂಗಿತವಿದೆ. ಆಯಾ ರಾಜ್ಯಗಳ ಜನ ನಿರೀಕ್ಷಿಸುವ, ಅವರ ಸಾಂಪ್ರದಾಯಿಕ ಮಾದರಿ ಆಭರಣಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿ ಗ್ರಾಹಕರ ಮನಗೆದ್ದಿರುವ ತಾನಿಷ್ಕ್, ಮದುವೆ ಒಡವೆಗಳನ್ನು ಮಾರುಕಟ್ಟೆಗೆ ತಂದು ಜನಪ್ರಿಯತೆ ಗಳಿಸಿದೆ ಎಂದು ಸಂದೀಪ್ ಕುಲ್ಹಳ್ಳಿ ಈ ವೇಳೆ ಸುದ್ದಿಗಾರರಿಗೆ ಹೇಳಿದರು.

      ಚಿನ್ನದ ಸರ, ಬಳೆ, ಓಲೆ, ಹಾರ, ನೆಕ್ಲೆಸ್ ಮುಂತಾದ ಒಡವೆಗಳಿಗೆ ಕರ್ನಾಟಕದಲ್ಲಿ ಬೇಡಿಕೆ ಇದೆ, ಈ ಮಾದರಿ ಒಡವೆಗಳನ್ನು ಆಕರ್ಷಕ ಡಿಸೈನ್‍ಗಳಲ್ಲಿ ತಯಾರಿಸಿ ಮಾರಾಟ ಮಾಡಲು ಆದ್ಯತೆ ನೀಡಲಾಗಿದೆ. ತುಮಕೂರು ಶಾಖೆಯಲ್ಲಿ ಸುಮಾರು ಎರಡು ಸಾವಿರದಷ್ಟು ಆಕರ್ಷಕ ವಿನ್ಯಾಸದ ವಿವಿಧ ಮಾದರಿ ಆಭರಣಗಳು ಲಭ್ಯ ಇವೆ. ಅಂದಿನ ಚಿನ್ನದ ಚಿನ್ನದ ದರ ಆಧರಿಸಿ ಸುಮಾರು ಎರಡೂವರೆ ಸಾವಿರದಿಂದ ಆರು ಲಕ್ಷ ರೂ ಬೆಲೆವರೆಗಿನ ಒಡವೆಗಳು ಇಲ್ಲಿ ದೊರೆಯುತ್ತವೆ ಎಂದು ತಿಳಿಸಿದರು.

       ಶಾಖೆ ಉದ್ಘಾಟನೆಯ ಆಕರ್ಷಣೆಯಾಗಿ ಆರಂಭದ ಮೂರು ದಿನ ಖರೀದಿಸುವ ಚಿನ್ನದ ಮೇಲೆ ಶೇಕಡ 2ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದ ಅವರು, ಹಳೆ ಚಿನ್ನ ನೀಡಿ ಹೊಸ ಚಿನ್ನದ ಒಡವೆ ವಿನಿಮಯ ಮಾಡಿಕೊಳ್ಳುವ ಅವಕಾಶವಿದೆ ಎಂದು ತಿಳಿಸಿದರು.

      ತಾನಿಷ್ಕ್ ತುಮಕೂರು ಶಾಖೆಯ ಪಾಲುದಾರರಾದ ಪ್ರಕಾಶ್ ಕುಮಾರ್ ರಾಥೊಡ್, ವಸ್ತಿ ಮಲ್ ರಾಥೋಡ್ ಮತ್ತಿತರರು ಹಾಜರಿದ್ದರು.ಸಣ್ಣ ಕೈಗಾರಿಕಾ ಸಚಿವ ಎಸ್ ಆರ್ ಶ್ರೀನಿವಾಸ್, ಶಾಸಕ ಜಿ ಬಿ ಜ್ಯೋತಿಗಣೇಶ್, ಪ್ರಜಾಪ್ರಗತಿ ಸಹ ಸಂಪಾದಕ ಟಿ ಎನ್ ಮಧುಕರ್ ಮತ್ತಿತರ ಗಣ್ಯರು ಆಗಮಿಸಿ ಶುಭ ಕೋರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap