ಬೆಂಗಳೂರು:
ಹೊಸದಾಗಿ ವಿವಾಹವಾದರೆ ಕೆಲಸಕ್ಕೆ ರಜೆ ಹಾಕಿ ಊರು ಸುತ್ತುವುದು ಸಾಮಾನ್ಯ ಆದರೆ ಇಲ್ಲೊಬ್ಬ ಪೊಲೀಸಪ್ಪ ರಜೆ ಕೇಳಿದ ಪರಿ ನೋಡಿ ಮೇಲಾಧಿಕಾರಿ ಒಂದು ಕ್ಷಣ ದಂಗಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ನವ ವಿವಾಹಿತ ಪೊಲೀಸ್ ಪೇದೆಯೊಬ್ಬರು ರಜೆ ಕೋರಿ ಅರ್ಜಿ ಸಲ್ಲಿಸಿದ್ದು, ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪತ್ರದಲ್ಲಿ ಏನಿದೇ ಎಂದು ನೋಡಿ:
‘ನಾನು ಹೊಸದಾಗಿ ಮದುವೆ ಆಗಿದ್ದೀನಿ. ಅಲ್ಲದೇ ಹೊಸ ಹುರುಪಿನಲ್ಲಿ ಇದ್ದೀನಿ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ’ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ. ಇನ್ನು ಪೇದೆಯ ಪತ್ರ ವ್ಯಾಪಕ ವೈರಲ್ ಆಗುತ್ತಿದ್ದು, ಹೊಸ ಮದುವೆ ಗಂಡಿಗೆ ರಜೆ ನೀಡಿ ಎಂದು ಹಾಸ್ಯ ಮಾಡಿ ಟ್ರೋಲ್ ಮಾಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ