ಬೆಂಗಳೂರು
ಈಗ ಬುಕ್ ಮಾಡಿ ನಂತರ ಪಾವತಿಸಿ ಸೌಲಭ್ಯಕ್ಕೆ ಭಾರತೀಯ ಅಂಚೆ ಇಲಾಖೆಯೊಂದಿಗೆ ನೈಋತ್ಯ ರೈಲ್ವೆ ಒಡಂಬಡಿಕೆ ಮಾಡಿಕೊಂಡಿದೆ.
ಇದರನ್ವಯ ವೇಗದೂತ ಸೇವೆ ಅಂದರೆ ಸ್ಪೀಡ್ ಪೋಸ್ಟ ಅಡಿ ಬುಕಿಂಗ್, ನಗದು ವರ್ಗಾವಣೆ ಮೊದಲಾದ ಸೇವೆಗಳನ್ನು ರೈಲ್ವೆ ನಿಲ್ದಾಣಗಳಿಂದ ನೇರವಾಗಿ ನೀಡಲಿದೆ. ಪ್ರಾರಂಭಿಕ ಹಂತದಲ್ಲಿ ಬೆಂಗಳೂರು ಮತ್ತು ಮೈಸೂರಿನ 159 ಮತ್ತು 146 ನಿಲ್ದಾಣಗಳಲ್ಲಿ ಈ ಸೌಲಭ್ಯ ದೊರೆಯಲಿದೆ.
ಈ ಸಂಬಂಧ ನವೆಂಬರ್ 24 ರಂದು ನೈಋತ್ಯ ರೈಲ್ವೆ ಮತ್ತು ಕರ್ನಾಟಕ ಅಂಚೆ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮುಂದಿನ ಹಂತದಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಇತರ ನಿಲ್ದಾಣಗಳು ಸೇರ್ಪಡೆಯಾಗಲಿವೆ.
ಈ ವ್ಯವಸ್ಥೆ ವಿಶ್ವಾಸಾರ್ಹ, ಶೀಘ್ರ ಮತ್ತು ಮಿತವ್ಯಯದ ಯೋಜನೆಯಾಗಿದ್ದು ಇದರಿಂದ ವಾರ್ಷಿಕ ರೂ. 30 ಲಕ್ಷ ಉಳಿತಾಯವಾಗಲಿದೆ. ಇದು ಏಕಕಾಲದಲ್ಲಿ ಬಿಲ್ಲಿಂಗ್ ಮತ್ತು ಪಾವತಿಗೆ ಅನುವು ಮಾಡಿಕೊಡಲಿದ್ದು ನಿಲ್ದಾಣದ ನಗದಿನ ಲೆಕ್ಕಾಚಾರಕ್ಕೂ ಪರಿಣಾಮಕಾರಿ ಸಾಧನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
