ಬಳ್ಳಾರಿ
ಬಿಸಿಲಿನ ಸಂಕಟದ ಜೊತೆಗೆ ಕುಡಿಯುವ ನೀರಿಗೂ ಇಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಒಂದು ಬಿಂದಿಗೆಗೆ 5 ರೂಪಾಯಿ ಕೊಟ್ಟು ಕೊಳ್ಳುವ ಪರಿಸ್ಥಿತಿ ಬಳ್ಳಾರಿ ಜಿಲ್ಲೆಯ ಶಂಕರಬಂಡೆಯಲ್ಲಿ ನಿರ್ಮಾಣವಾಗಿದೆ.
ಜಿಲ್ಲೆಯ ಶಂಕರಬಂಡೆ ಗ್ರಾಮದಲ್ಲಿ ಕುಡಿಯುವ ನೀರಿಗೆ ತಾತ್ವಾರ ಇದೆ. ಗ್ರಾಮ ಪಂಚಾಯಿತಿಯನ್ನೊಳಗೊಂಡ ಶಂಕರಬಂಡೆ ಗ್ರಾಮ ಕುಡಿಯುವ ನೀರನ್ನು ಎರವಲು ಪಡೆಯುವಂತಹ ಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗಾಗಿ ಇಲ್ಲಿ ನಿತ್ಯವೂ ಹರಸಾಹಸಶಂಕರಬಂಡೆಯಲ್ಲಿ ನೀರಿನ ಎರಡು ಶುದ್ಧೀಕರಣ ಘಟಕಗಳಿವೆ. ಒಂದನ್ನು ಈಗ ಸ್ಥಾಪಿಸಲಾಗುತ್ತಿದ್ದು, ಇನ್ನೊಂದು ನೀರಿನ ಶುದ್ಧೀಕರಣ ಘಟಕ ಕೆಟ್ಟು ಮೂರ್ನಾಲ್ಕು ತಿಂಗಳಾಗಿವೆ.
ಗ್ರಾಮದ 3 ಭಾಗಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್? ನಿರ್ಮಿಸಲಾಗಿದ್ದು, ಅವುಗಳಲ್ಲಿಯೂ ಕೂಡ ಕಳಪೆ ಕಾಮಗಾರಿಯಿಂದ ನೀರು ಭರ್ತಿ ಮಾಡಲಾಗುತ್ತಿಲ್ಲ.ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯದ ಬಳಿಯೇ ನೀರಿನ ವಕ್ರಾಣಿ ಇದ್ದು, ಅದೂ ಪಾಚಿಗಟ್ಟಿದೆ. ಈ ಮೊದಲು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಈ ವಕ್ರಾಣಿಯನ್ನೇ ಅವಲಂಬಿಸಿದ್ದರು. ಇಡೀ ಗ್ರಾಮದ ನೂರಾರು ಮಂದಿ ಕುಡಿಯಲು ಈ ವಕ್ರಾಣಿಯ ನೀರನ್ನೇ ಬಳಕೆ ಮಾಡುತ್ತಿದ್ದರು.
ಆದರೀಗ ವಕ್ರಾಣಿಯ ಸರಿಯಾದ ನಿರ್ವಹಣೆ ಇಲ್ಲದೇ ಜಾನುವಾರುಗಳಿಗೆ ಮಾತ್ರ ಈ ನೀರನ್ನ ಬಳಸಲಾಗುತ್ತದೆ.ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸಪ್ಪೆ ನೀರನ್ನು ಕುಡಿಯುವ ಪರಿಸ್ಥಿತಿ ತಪ್ಪಿಸಲು ಆಟೋದಲ್ಲಿ ಬರುವ ನೀರನ್ನು ಕಾಯುವ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮದ ಯುವತಿ ಅರುಣಾ. ಇತ್ತೀಚಿನ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರಿನ್ನು ಶೇಖರಿಸುವ ವೇಳೆ ಬೀದಿ ರಂಪಾಟ ನಡೆಯುತ್ತದೆ.
ನಮ್ಮ ಗೋಳು ಕೇಳಲು ಇಲ್ಲಿ ಯಾರೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥ ಗಾದಿಲಿಂಗಪ್ಪ.ವಕ್ರಾಣಿ ತುಂಬೆಲ್ಲಾ ತ್ಯಾಜ್ಯದ ರಾಶಿ: ಗ್ರಾಮ ಪಂಚಾಯಿತಿ ಕಚೇರಿ ಬಳಿಯಿರುವ ವಕ್ರಾಣಿ ತುಂಬೆಲ್ಲಾ ತ್ಯಾಜ್ಯದ ರಾಶಿ ತುಂಬಿಕೊಂಡಿದೆ. ಅದನ್ನು ಶುಚಿತ್ವಗೊಳಿಸುವ ಗೋಜಿಗೂ ಈವರೆಗೂ ಗ್ರಾಮ ಪಂಚಾಯತಿ ಮುಂದಾಗಿಲ್ಲ. ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೇ ಜೀವಜಲವಾಗಿದ್ದ ಈ ವಕ್ರಾಣಿ ಇದೀಗ ನಿರುಪಯುಕ್ತ ಆಗಿದೆ.
ಕೇವಲ ಜಾನುವಾರುಗಳಿಗೆ ನೀರುಣಿಸಲು ಮಾತ್ರ ಈ ವಕ್ರಾಣಿ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಕನಿಷ್ಠ ಪಕ್ಷ ಈ ವಕ್ರಾಣಿಯಿಂದಾದರೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಂಪರ್ಕ ಕಲ್ಪಿಸುವ ಮನಸ್ಸನ್ನೂ ಕೂಡ ಗ್ರಾಮ ಪಂಚಾಯತಿ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ರೂಪನಗುಡಿ ನೀರೇ ಈ ಗ್ರಾಮಕ್ಕೀಗ ಆಸರೆ: ಶುದ್ಧ ಕುಡಿಯುವ ನೀರಿನ ಮೂಲ ದುರಸ್ತಿಯಲ್ಲಿರುವುದರಿಂದ ಈ ಗ್ರಾಮಕ್ಕೀಗ ದೂರದ ರೂಪನಗುಡಿ ಹೋಬಳಿ ಕೇಂದ್ರದ ಶುದ್ಧೀಕರಿಸಿದ ನೀರೇ ಆಸರೆಯಾಗಿದೆ.
ಸರಕು ಸಾಗಣೆಯ ಆಟೋ ರಿಕ್ಷಾದಲ್ಲಿ ದೊಡ್ಡ ಸಿಂಟೆಕ್ಸ್? ಇಟ್ಟುಕೊಂಡು ರೂಪನಗುಡಿಯಿಂದ ಶಂಕರಬಂಡೆ ಗ್ರಾಮಕ್ಕೆ ದಿನನಿತ್ಯ ಆರೇಳು ಬಾರಿ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಒಂದು ಬಿಂದಿಗೆಗೆ 5 ರೂಪಾಯಿನಂತೆ ಖಾಸಗಿ ನೀರು ಪೂರೈಕೆದಾರರು ದರವನ್ನು ನಿಗದಿಪಡಿಸಿದ್ದಾರೆ.
ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸಪ್ಪೆ ನೀರನ್ನು ಕುಡಿಯುವ ಪರಿಸ್ಥಿತಿ ತಪ್ಪಿಸಲು ಆಟೋದಲ್ಲಿ ಬರುವ ನೀರನ್ನು ಕಾಯುವ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮದ ಯುವತಿ ಅರುಣಾ. ಇತ್ತೀಚಿನ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರು ಶೇಖರಣೆಯ ವೇಳೆ ಬೀದಿ ರಂಪಾಟ ನಡೆಯುತ್ತದೆ. ನಮ್ಮ ಗೋಳು ಕೇಳಲು ಇಲ್ಲಿ ಯಾರೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥ ಗಾದಿಲಿಂಗಪ್ಪ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
