ಫ್ರಾನ್ಸ್ ಭೇಟಿ ಸಮರ್ಥಿಸಿಕೊಂಡ :ನಿರ್ಮಲಾ ಸೀತಾರಾಮನ್

0
24

ಪ್ಯಾರಿಸ್

           ‘ರಫೇಲ್ ಡೀಲ್ ಸದ್ಯ ಭಾರತದಲ್ಲಿ ಸದ್ಧು ಮಾಡುತ್ತಿರುವ ಅತ್ಯಂತ ಚರ್ಚಾಸ್ಪದವಾದ ವಿಷಯ ಈ ವಿದ್ಯಮಾನ ನಡೆಯುವಾಗಲೆ  ನಮ್ಮ ದೇಶದ ರಕ್ಷಣಾ ಸಚಿವರು ಹಟಾತ್ ಫ್ರಾನ್ಸ್ ಗೆ ತೆರೆಳಿದ್ದರು ಇದನ್ನು ಇಟ್ಟುಕೊಂಡು ಅವರ ಕಾಲು ಎಳೆದವರ ಸಂಖ್ಯೆಯೇ ಅಧಿಕವಾಗಿತ್ತು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ರಕ್ಷಣಾ ಸಚಿವರೂ ಉತ್ತರ ಕೊಟ್ಟಿದ್ದಾರೆ ಏನದೂ ಎಂದರೆ.

            ಇದು ಎರಡು ಸರ್ಕಾರಗಳ ನಡುವಿನ ವಿಚಾರ. ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವೆ ನಡೆದ ಒಪ್ಪಂದ ಇದು. ಇದರಲ್ಲಿ ಯಾರದೇ ವೈಯಕ್ತಿಕ ಹಿತಾಸಕ್ತಿ ಇಲ್ಲ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೂರು ದಿನಗಳ ಫ್ರಾನ್ಸ್ ಭೇಟಿಯ ಬಗ್ಗೆ ಪ್ರತಿಪಕ್ಷಗಳು ಮಾಡಿದ್ದ ಆರೋಪಗಳನ್ನು ಅಲ್ಲಗಳೆದ ಅವರು, ‘ಡಸಾಲ್ಟ್ ನಿಂದ ನನಗೆ ಆಮಂತ್ರಣವಿತ್ತು. ನಾನು ಅವರ ಗ್ರಾಹಕಿ. ಆದ್ದರಿಂದ ನಾನು ಅಲ್ಲಿಗೆ ತೆರಳಲೇಬೇಕಿತ್ತು’ ಎಂದರು.  ‘ರಫೇಲ್ ಡೀಲ್ ನಲ್ಲಿ ನಡೆದ ಅವ್ಯವಹಾರಗಳಿಗೆ ತೇಪೆ ಹಚ್ಚಲು ಮತ್ತು ಈ ಹಗರಣವನ್ನು ಮಯಚ್ಚಿಹಾಕಲು ನಿರ್ಮಲಾ ಸೀತಾರಾಮನ್ ಅವರು ಫ್ರಾನ್ಸಿಗೆ ತೆರಳಿದ್ದಾರೆ’ ಎಂಬ ಪ್ರತಿಪಕ್ಷಗಳ ಟೀಕೆಯನ್ನು ಅವರು ಕಟುವಾಗಿ ವಿರೋಧಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here