ದಾವಣಗೆರೆ:
ಮುದಹದಡಿ ಗ್ರಾಮದಲ್ಲಿ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಏರ್ಪಡಿಸಿರುವ ಎನ್‍ಎಸ್‍ಎಸ್ ವಿಶೇಷ ವಾರ್ಷಿಕ ಶಿಬಿರವನ್ನು ಜಿಲ್ಲಾ ಪಂಚಾಯತ್ ಸದಸ್ಯ ಜೆ.ಸಿ. ನಿಂಗಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ವೀರಭದ್ರಯ್ಯ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎಸಿಬಿ ಡಿವೈಎಸ್‍ಪಿ ಪರಮೇಶ್ವರ್ ಹೆಚ್.ಎಸ್., ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ದಿಳ್ಯಪ್ಪ, ತಾ.ಪಂ. ಸದಸ್ಯ ಹನುಮಂತಪ್ಪ ಎ ಬಿ, ವಿಎಸ್‍ಎಸ್‍ಎನ್ ಉಪಾಧ್ಯಕ್ಷ ಪಿ ಹೆಚ್ ನಂದಿಗೌಡರು ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಿದೇವಿ, ಎಮ್.ಮಂಜಪ್ಪ, ಹೆಚ್.ಕೆ.ಪ್ರಕಾಶ, ಬಿ ಜಿ ನಾಗರಾಜಪ್ಪ, ಹನುಮನಗೌಡ, ಕರಿಯಮ್ಮ, ನಿರ್ಮಲ, ಟಿ.ವೀರಪ್ಪ, ಅನುರಾಧ, ತಿಪ್ಪೇರುದ್ರಯ್ಯ, ಷಣ್ಮುಖಪ್ಪ, ಎ ಕೆ ನಾಗೇಂದ್ರಪ್ಪ, ಉಪನ್ಯಾಸಕರಾದ ಗುರುಪಾದಯ್ಯಗುರುವಿನ, ಪಿ ಮಂಜುನಾಥ, ರಾಘವೇಂದ್ರ, ಸೈಯದ್‍ಅಹಮದ್ ಬಾಷಾ, ಶರತಕುಮಾರ ಬೇದ್ರೆ ಉಪಸ್ಥಿತರಿದ್ದರು.
ಕದಳಿ ಮಹಿಳಾ ವೇದಿಕೆಯ ಸದಸ್ಯೆಯರು ವಚನ ಗಾಯನ ನಡೆಸಿಕೊಟ್ಟರು. ಕಾಲೇಜಿನ ಪ್ರಾಚಾರ್ಯ ಎನ್.ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಬಿ.ಪಾಲಾಕ್ಷಿ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಅನ್ನಪೂರ್ಣ ಪಾಟೀಲ್ ಎನ್‍ಎಸ್‍ಎಸ್ ಪ್ರತಿಜ್ಞಾವಿಧಿ ಬೋಧಿಸಿದರು. ಮಂಜಪ್ಪ ಎಫ್ ಹಿತ್ತಲಮನಿ ವಂದಿಸಿದರು. ಉಪನ್ಯಾಸಕಿ ಅರುಣಕುಮಾರಿ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ