ಚಳ್ಳಕೆರೆ
ತಾಲ್ಲೂಕಿನ ತಳಕು ಹೋಬಳಿಯ ವರವು ಕಾವಲಿನಲ್ಲಿ ಕಳೆದ 3 ವರ್ಷಗಳಿಂದ ಪ್ರೋಟಿನ್ ಸೂರ್ಯ ಕಿರಣ್ ಖಾಸಗಿ ಕಂಪನಿ ಸೋಲಾರ್ ಘಟಕ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ತಾನೇ ಕಂಪನಿಯಲ್ಲಿ ಗುತ್ತಿಗೆ ಪಡೆದ ಹೈದರಾಬಾದ್‍ನ ನಿಯೋಸಾಲ್ ಎನರ್ಜಿ ಕಂಪನಿಯ ಸಿಬ್ಬಂದಿ ಹಣಕಾಸಿನ ವಿಚಾರದಲ್ಲಿ ಅಸಮದಾನಗೊಂಡು ಕಂಪನಿಯ ಬಾಗಿಲಿಗೆ ಬೀಗವನ್ನು ಹಾಕಿದ್ದಲ್ಲದೆ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವನ್ನು ಹೊರಗೆ ಕಳುಹಿಸಿ ಘಟನೆ ನಡೆದಿದೆ.
ನಿಯೋಸಾಲ್ ಎನರ್ಜಿ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದ್ದು, ಇಲ್ಲಿ ಸೋಲಾರ ಪ್ಲಟ್‍ಗಳ ಮೂಲಕ ತಳಕು ಬೆಸ್ಕಾಂ ಇಲಾಖೆಗೆ ನೀಡಲಾಗುತ್ತಿದ್ದು, ಪ್ರೋಟಿನ್ ಸೂರ್ಯಕಿರಣ್ ಕಂಪನಿಗೆ ಯಾವುದೇ ಮಾಹಿತಿ ನೀಡದೆ ನಿಯೋಸಾಲ್ ಎನರ್ಜಿ ಕಂಪನಿಯವರು ಬೀಗ ಹಾಕಿರುವುದರಿಂದ ಕಂಪನಿ ಕಾರ್ಯನಿರ್ವಹಿಸದೆ ತಟಸ್ಥವಾಗಿದೆ. ಇದರಿಂದ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಯಲ್ಲದೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಅನಿವಾರ್ಯವಾಗಿ ಘಟಕದಿಂದ ಹೊರಗೆ ಉಳಿಯಬೇಕಾಗಿದೆ. ಇದರಿಂದ ನೂರಾರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಕೆಲಸವಿಲ್ಲವಾಗಿದೆ.
ಪ್ರೋಟಿನ್ ಸೂರ್ಯ ಕಿರಣ್ ಕಂಪನಿ ಈ ಬಗ್ಗೆ ಮಾಹಿತಿ ನೀಡಿ, ನಾವು ನೇರವಾಗಿ ಸರದಾರ್ ಸೋಲಾರ ಕಂಪನಿಗೆ ಗುತ್ತಿಗೆ ನೀಡಿದ್ದು, ಅವರು ಸಹ ಗುತ್ತಿಗೆದಾರರಾಗಿ ನಿಯೋಸಾಲ್ ಎನರ್ಜಿ ಕಂಪನಿಯವರಿಗೆ ನೀಡಿರುತ್ತಾರೆ. ಹಣಕಾಸಿನ ಯಾವುದೇ ವ್ಯವಹಾರ ಇದ್ದಲ್ಲಿ ನಿಯೋಸಾಲ್ ಕಂಪನಿಯವರು ನೇರವಾಗಿ ಸರದಾರ್ ಕಂಪನಿಯವರನ್ನೇ ಸಂಪರ್ಕಿಸಬೇಕಿದೆ. ಆದರೆ, ನೇರವಾಗಿ ಸಂಪರ್ಕ ಮಾಡದೆ ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಿ ಬೀಗ ಹಾಕುವ ಮೂಲಕ ವಿದ್ಯುತ್ ಉತ್ಪಾದನೆಗೆ ಅಡಚಣೆ ಮಾಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಪುನಃ ಘಟಕ ಪ್ರಾರಂಭಕ್ಕೆ ಅನುವು ಮಾಡಿಕೊಡುವಂತೆ ಪ್ರೋಟಿನ್ ಸೂರ್ಯಕಿರಣ್ ಕಂಪನಿವರು ವಿನಂತಿಸಿದ್ದಾರೆ. ಈ ಬಗ್ಗೆ ಪೊಲೀಸ್‍ರಿಗೂ ಮಾಹಿತಿ ನೀಡಲಾಗಿದೆ ಎಂದಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ