ಹಳೇ ವಾಹನಗಳಿಗೆ ಕೂಡಲೇ ನಿಷೇಧ ಅಗತ್ಯ : ವಜೂಭಾಯಿ ವಾಲಾ

ಬೆಂಗಳೂರು

    ಇಂಧನ ಉಳಿತಾಯವನ್ನು ಕಡ್ಡಾಯಗೊಳಿಸಲು ಕೂಡಲೇ ಹಳೇ ವಾಹನಗಳಿಗೆ ಕೂಡಲೇ ನಿಷೇಧ ವಿಧಿಸಬೇಕಾದ ಅಗತ್ಯವನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಒತ್ತಿ ಹೇಳಿದ್ದಾರೆ.

     ಇಂಡಿಯನ್ ಆಯಿಲ್ ಸಂಸ್ಥೆಯು ಕಬ್ಬನ್ ಪಾರ್ಕ್‍ನ ಬಾಲಭವನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಕ್ಷಮ 2019- ತೈಲ ಮತ್ತು ಅನಿಲ ಸಂರಕ್ಷಣಾ ಸಾಮೂಹಿಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಪಾಲರು ಇಂಧನ ಉಳಿತಾಯ ಮಾಡಲು ಅವಧಿ ಪೂರ್ಣಗೊಂಡಿರುವ ವಾಹನಗಳು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕಾದ ತುರ್ತು ಅಗತ್ಯವನ್ನು ಪ್ರತಿಪಾದಿಸಿದರು
ಪೆಟ್ರೋಲಿಯಂ ಉತ್ಪನ್ನಗಳನ್ನು ಕಡಿಮೆ ಬಳಸುವ ನಿಯಮಗಳನ್ನು ರೂಪಿಸಬೇಕು ಪೆಟ್ರೋಲಿಯಂ ಉತ್ಪನ್ನಗಳ ಕಚ್ಚಾ ವಸ್ತುಗಳು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಹೆಚ್ಚು ಆದಾಯ ಗಳಿಕೆ ಉದ್ದೇಶದಿಂದ ವಿದೇಶಗಳಲ್ಲಿ ಅತಿಹೆಚ್ಚು ಇಂಧನ ಮಾರಾಟ ಮಾಡಬೇಕು ಎಂದು ಯೋಜನೆ ರೂಪಿಸಿ ಬೆಲೆ ಹೆಚ್ಚಿಸಿಕೊಳ್ಳುತ್ತಾರೆ ಬೆಲೆ ಹೆಚ್ಚಿಸಿದಂತೆಲ್ಲಾ ನಾವು ಹೆಚ್ಚು ಹಣ ತೆರಬೇಕಾಗುತ್ತದೆ ಎಂದು ತಿಳಿಸಿದರು

      ನಾವು ಏನನ್ನು ಉಳಿಸುತ್ತೇವೂ, ಅದೇ ನಮ್ಮ ಆದಾಯ ಉಳಿತಾಯ ಮಾಡುವುದೇ ನಿಜವಾದ ಅಭಿವೃದಿ ಕೂಡ ಆಗಿದೆ ಕೆಲವೊಮ್ಮೆ ಸಮಯ ಹಾಳು ಮಾಡ್ತೇವೆ ಅದು ವಾಪಸ್ ಬರುವುದಿಲ್ಲ ಯಾರು ಆದಾಯ ತೆರಿಗೆ ಸರಿಯಾಗಿ ಪಾವತಿ ಮಾಡುವುದಿಲ್ಲವೂ ಅವರ ಬಳಿಯೇ ಹೆಚ್ಚು ಹಳೆ ವಾಹನಗಳಿವೆ.ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು, ಪ್ರತಿಮನೆಗೆ ಬೈಕ್ ಮತ್ತು ಕಾರು ಎಷ್ಟು ಸಂಖ್ಯೆಯಲ್ಲಿರಬೇಕು ಎಂಬುದಕ್ಕೂ ನಿಯಮ ಮಾಡಬೇಕು. ಅಷ್ಟೇ ಅಲ್ಲದೆ, ಎಲ್ಲಿಯವರೆಗೂ ಈ ಬಗ್ಗೆ ಕಾನೂನು ರಚನೆ ಆಗುವುದಿಲ್ಲವೂ, ಅಲ್ಲಿಯವರೆಗೂ ವಿಚಾರ ಸಂಕಿರಣ, ಅಭಿಯಾನಗಳಿಂದ ಏನು ಪ್ರಯೋಜನ ಇಲ್ಲ. ಎಲ್ಲದಕ್ಕೂ ಕಠಿಣ ಕಾನೂನು, ನಿಯಮ ರೂಪಿಸಿದರೆ, ಮಾತ್ರ ಜನ ಅದನ್ನು ಪಾಲಿಸುತ್ತಾರೆ ಎಂದು ಅವರು ಸಲಹೆ ಮಾಡಿದರು.

ಸಾಮೂಹಿಕ ಜವಾಬ್ದಾರಿ

       ಇಂಡಿಯನ್ ಆಯಿಲ್ ನ ಪ್ರಧಾನ ವ್ಯವಸ್ಥಾಪಕ ರಾಜೇಶ್ ಕುಮಾರ್ ಸಾಯಲ್ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆ ಒಂದು ಸಾಮೂಹಿಕ ಜವಾಬ್ದಾರಿಯಾಗಿದ್ದು, ಸಮಾಜದ ಪ್ರತಿ ಅಂಗಕ್ಕೂ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುವುದರಲ್ಲಿ ನಂಟು ಹೊಂದಿದೆ ಎಂದರು.

       ಕಾರ್ಯಕ್ಷಮತೆಯ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ಅಳವಡಿಸುವುದು, ನವೀಕರಿಸಬಹುದಾದ ಸಂಪನ್ಮೂಲಗಳ ಬದಲಾಯಿಸಿ ಕೊಳ್ಳುವುದು ಹಾಗೂ ಇಂಧನ ಉಳಿಸುವ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳುವುದು ಉತ್ತಮ ಎಂದು ನುಡಿದರು.ಕಾರ್ಯಕ್ರಮದಲ್ಲಿ ಬಿಪಿಸಿಎಲ್ ರಾಜ್ಯ ಮುಖ್ಯಸ್ಥ ರಾಹುಲ್ ಟಂಡನ್, ಎಚ್ ಪಿಸಿಎಲ್ ಉಪ ಪ್ರಧಾನ ವ್ಯವಸ್ಥಾಪಕ ಸುಧಾಕರ್ ದತ್ತ, ಇಂಡಿಯನ್ ಆಯಿಲ್ ವ್ಯವಸ್ಥಾಪಕ ಕೆ.ಪ್ರಸಾದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap