ನವದೆಹಲಿ
ನಿನ್ನೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿದ್ದ ಮಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಂದು ನ್ಯಾಯಾಲಯಕ್ಕೆ ವಾದ ವಿವಾದವನ್ನು ಆಲಿಸಿದ ಕೋರ್ಟು ಸೆಪ್ಟೆಂಬರ್ 13 ರ ವರೆಗೆ ಇಡಿ ವಶಕ್ಕೆ ನೀಡಿದೆ.
ರೋಸ್ ಅವೆನ್ಯೂನ ಇಡಿ ವಿಶೇಷ ಕೋರ್ಟ್ ನಲ್ಲಿ ಇಂದು ಡಿ.ಕೆ.ಶಿವಕುಮಾರ್ ಅವರನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶ ವಿಜಯ್ ಕುಮಾರ್ ಕುಹುರ್ ಅವರು ವಿಚಾರಣೆ ನಡೆಸಿ,ಈ ಆದೇಶ ನೀಡಿದ್ದಾರೆ.
ಡಿಕೆ.ಶಿವಕುಮಾರ್ ಅವರ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಧಿಶರಿಗೆ ಪರಿಪರಿಯಾಗಿ ವಾದ ಮಂಡಿಸಿದರು ಫಲ ಕೊಡಲಿಲ್ಲ, ಮೊದಲಿಗೆ ಇಡಿಯು 14 ದಿನಗಳ ಕಾಲ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಕೇಳಿದ್ದರು. ಆದರೆ ಇಡಿ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧಿಶರು ಇಂದಿನಿಂದ 10 ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗುವುದು ಎಂದು ಆದೇಶ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ