ಹಾನಗಲ್ಲ :
ಲಾರಿಗೆ ದಾರಿ ಬಿಟ್ಟುಕೊಟ್ಟ ಓಮ್ನಿ ಕಾರ್ ಕೆರೆಯಲ್ಲಿ ಉರುಳಿಬಿದ್ದ ಪರಿಣಾಮ ಚಾಲಕ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕರೆಕ್ಯಾತನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮಂಗಳವಾರ ತಡರಾತ್ರಿ ಕರೆಕ್ಯಾತನಹಳ್ಳಿ ಗ್ರಾಮದ ಕೆರೆಯ ಬಳಿ ತಿರುವಿನಲ್ಲಿ ಓಮ್ನಿ ಕಾರ್ ಬರುತ್ತಿದ್ದಾಗ ಎದುರಿಗೆ ಬಂದ ಲಾರಿಗೆ ದಾರಿ ನೀಡುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ವಾಹನದಲ್ಲಿ ಯಾವುದೇ ಪ್ರಯಾಣಿಕರಿಲ್ಲದ್ದರಿಂದ ಚಾಲಕ ಓಂಕಾರಯ್ಯ(40) ತಕ್ಷಣ ಹೊರಜಿಗಿದು ಪ್ರಾಣಾಪಾಯದಿಂದ ಹೊರಬಂದಿದ್ದಾನೆ. ಗ್ರಾಮಸ್ಥರ ಸಹಾಯದಿಂದ ಬುಧವಾರ ಬೆಳಿಗ್ಗೆ ಕಾರನ್ನು ಕೆರೆಯಿಂದ ಮೇಲೆತ್ತಿ ಹೊರತೆಗೆಯಲಾಗಿದೆ.
ಈ ಕೆರೆಗೆ ತಡೆಗೋಡೆ ನಿರ್ಮಿಸಿಲ್ಲದಿರುವುದು ಈ ಘಟನೆಗೆ ಕಾರಣವೆನ್ನಲಾಗಿದೆ. ಪ್ರತಿನಿತ್ಯ ಈ ಕೆರೆಯ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಮೇಲಿಂದ ಮೇಲೆ ಇಂಥ ಅಪಘಾತಗಳು ಸಂಭವಿಸುತ್ತಲಿವೆ. ಆದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ ಧೋರಣೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ