ಚಳ್ಳಕೆರೆ
ನಗರದ ಹಲವೆಡೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತೆ ಪ್ರಾರಂಭವಾಗಿದ್ದು, ಮೇ 21ರಂದು ಬೆಂಗಳೂರು ರಸ್ತೆಯ ಐಡಿಬಿಐ ಬ್ಯಾಂಕ್‍ನ ಎಟಿಎಂ ಕೌಂಟರನ್ನು ಲೂಟಿ ಮಾಡಲು ಹೋದ ಕಳ್ಳರ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿರುವ ಐದು ದಲ್ಲಾಲ ಮಂಡಿಗಳ ಬೀಗವನ್ನು ಒಡೆದು ಕಳ್ಳತನಕ್ಕಾಗಿ ಯತ್ನಿಸಿರುವ ಘಟನೆ ನಡೆಸಿದೆ.
ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ನವೀನ್, ಸಿದ್ದೇಶ್ವರ ಸಿಎಸ್‍ಆರ್, ಕೆ.ಎಂ.ಸಿಎಸ್‍ಆರ್ ಮತ್ತು ಇನ್ನಿತರೆ ಎರಡು ದಲ್ಲಾಲರ ಮಂಡಿಗಳ ಮುಂಭಾಗದ ಗೇಟ್ ಹಾರಿ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಗಾಡ್ರೇಜ್‍ಬೀರ್‍ಗಳ ಬೀಗ ತೆಗೆದು ಹಣಕ್ಕಾಗಿ ಎಲ್ಲಂದರಲ್ಲೇ ಹುಡುಕಾಡಿದ್ದಾರೆ. ಬೀರುವಿನಲಿದ್ದ ಕಾಗದ ಪತ್ರಗಳು ಹಾಗೂ ಇನ್ನಿತರ ವಸ್ತುಗಳನ್ನು ಅಂಗಡಿಗಳಲ್ಲಿ ಚಲ್ಲಾಪಿಲ್ಲಿಯಾಗಿ ಚಲ್ಲಿದ್ದಾರೆ. ಯಾವ ಅಂಗಡಿಗಳಲ್ಲೂ ಹಣ ಸಿಕ್ಕ ಬಗ್ಗೆ ಮಾಹಿತಿ ಇಲ್ಲ. ಅಂಗಡಿ ಮಾಲೀಕರು ಹೇಳುವಂತೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಅವರವರ ಮನೆಗಳಿಗೆ ತೆಗೆದುಕೊಂಡು ಹೋಗುವುದು ವಾಡಿಕೆಯಾಗಿದೆ.
ಆದರೆ, ಒಂದೇ ರಾತ್ರಿಯಲ್ಲಿ ಐದಾರು ಅಂಗಡಿಗಳ ಬೀಗ ಒಡೆದು ಕಳ್ಳತನಕ್ಕೆ ಬಂದ ಕಳ್ಳರ ಬಗ್ಗೆ ಇಲ್ಲಿನ ವರ್ತಕ ವೃಂದಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ದಲ್ಲಾಲಿ ಮಂಡಿ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ. ಈ ಸ್ಥಳದಲ್ಲೇ ಒಂದು ಸಿಸಿ ಕ್ಯಾಮರವೂ ಸಹ ಇದ್ದು ಅದರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಕಳ್ಳರನ್ನು ಪತ್ತೆಹಚ್ಚುವ ವಿಶ್ವಾಸವನ್ನು ಪೊಲೀಸರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
