ಯುವ ಜನಾಂಗದ ಉತ್ತೇಜನ ಆನ್‍ಲೈನ್ ಕಾರ್ಯಾಗಾರ

ತುಮಕೂರು:

     ಅನನ್ಯ ಇನಿಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಮತ್ತು ಮಮತೆ ಟ್ರಸ್ಟ್ ತುಮಕೂರು ಇವರ ವತಿಯಿಂದ ಯುವಜನಾಂಗದ ಉತ್ತೇಜನ ಆನ್‍ಲೈನ್‍ನಲ್ಲಿ ಎಂ.ಕಾಂ., ವಿದ್ಯಾರ್ಥಿಗಳಿಗೆ ಓದುವ ಅಭ್ಯಾಸದ ಕೌಶಲ್ಯಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

    ಮಮತೆ ಟ್ರಸ್ಟ್‍ನ ಅಧ್ಯಕ್ಷರಾದ ಪಿ.ಮಮತ ಮಾತನಾಡಿ ಕೋವಿಡ್-19 ಸೋಂಕಿನ ಹಿನ್ನೆಲೆಯ ಕಾರಣದಿಂದ ಎಲ್ಲಾ ತರಗತಿಗಳು ಆನ್‍ಲೈನ್‍ನಲ್ಲಿ ನಡೆಯುತ್ತಿರುವುದರಿಂದ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.

    ಮನಃಶಾಸ್ತ್ರ ತಜ್ಞರಾದ ಸಿ.ಸಿ. ಪಾವಟೆಯವರು ಕಾರ್ಯಾಗಾರದ ಉಪನ್ಯಾಸ ನೀಡಿ ಯಾವುದೇ ಮಾರ್ಗವನ್ನು ನಿರ್ಧರಿಸುವ ಮುನ್ನ ತಮ್ಮ ಸಾಮಥ್ರ್ಯವನ್ನು ಮೊದಲು ಅರಿಯಬೇಕು. ಸಾಮಥ್ರ್ಯವನ್ನು ಅಳೆಯಲು ಸ್ವಾಟ್ ತಂತ್ರದ ಅವಶ್ಯಕತೆ ಹಾಗೂ ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ತಿಳಿಸಿದರು ಹಾಗೂ ತಮ್ಮ ಸಾಮರ್ಥವನ್ನು ಹೆಚ್ಚಿಸಿಕೊಳ್ಳಲು ಕಲಿಕೆ ಬಹಳ ಮುಖ್ಯ. ಯುವ ಜನಾಂಗ ಗುರಿಯನ್ನು ಹಾಗೂ ಆಯಾ ವಿಷಯಗಳ ಪರಿಕಲ್ಪನೆಯನ್ನು ಹೊಂದಬೇಕು. ಗುರಿ ಹೊಂದಿದರೆ ಸಾಲದು ಅದಕ್ಕಾಗಿ ಬಳಸುವ ಮಾರ್ಗವೂ ಕೂಡ ಒಳ್ಳೆಯದಾಗಿರಬೇಕು.

   ಕೇವಲ ಅಂತರ್ಜಾಲದಿಂದ ಸಿಗುವ ಮಾಹಿತಿ ಮೇಲೆ ಅವಲಂಬಿತರಾಗದೆ ಆಯಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳ ಜ್ಞಾನವನ್ನು ಪರಿಗಣಿಸಿದಾಗ ಮಾತ್ರ ನಮ್ಮಗಳ ಮಾರ್ಗವನ್ನು ನಿರ್ಧರಿಸಬೇಕು ಎಂದು ಕೆಲವು ಉದಾಹರಣೆಗಳ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ ಹೆಚ್‍ಓಡಿ ರಾಘವೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap