ಸಂವಿಧಾನದ ಆಶಯ ಕಡೆಗಣಿಸಿದ ಬಿಜೆಪಿ ಸೋಲಿಸಿ

ತುಮಕೂರು

        ಪ್ರಜಾತಂತ್ರಕ್ಕೆ ವ್ಯತಿರಿಕ್ತವಾದ ವ್ಯಕ್ತಿ ಆಧಾರಿತ ಆಡಳಿತ ವ್ಯವಸ್ಥೆ ದೇಶಕ್ಕೂ ಒಳ್ಳೆಯದಲ್ಲ, ಸಮಾಜಕ್ಕೂ ಒಳ್ಳೆಯದಲ್ಲ, ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುತ್ತಾ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರ ಮಾಡುತ್ತಿದೆ ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ಟೀಕಿಸಿದರು.

        ಜನಗಣಮನ-ನಾವೂ ದೇಶವಾಸಿಗಳು ಎಂಬ ಘೋಷವಾಕ್ಯದಡಿಯಲ್ಲಿ ಪ್ರಗತಿಪರರು ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೋಲಬೇಕು, ಯಾಕೆ ಸೋಲಬೇಕು ಎಂಬ ವಿಚಾರವಾಗಿ ಮಾತನಾಡಿದರು.

      ಎಲ್ಲಾ ಕಡೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಪಕ್ಷದ ತತ್ವ, ಪ್ರಣಾಳಿಕೆ, ಸಾಧನೆ, ಕೊಡುಗೆ ಇಂತಹ ವಿಚಾರಗಳನ್ನು ಮತದಾರರ ಮುಂದೆ ಪ್ರಸ್ತಾಪಿಸುವುದಕ್ಕಿಂತಾ ಮೋದಿ ಹೆಸರನ್ನೇ ಮುಂದಿಡುತ್ತಿದ್ದಾರೆ. ಭಾರತದ ಈವರೆಗ ನಡೆದ ಯಾವ ಚುನಾವಣೆಯಲ್ಲೂ ವ್ಯಕ್ತಿಗತವಾದ ಚುನಾವಣೆ ನಡೆದಿಲ್ಲ. ಎಂದರು.

        ಮುಖ್ಯಮಂತ್ರಿಯಾಗಲಿ, ಪ್ರಧಾನಮಂತ್ರಿಯಾಗಲಿ ಶಾಸಕರು, ಸಂಸದರ ಆಯ್ಕೆ ನಂತರ ಅವರು ಆಯ್ಕೆ ಮಾಡಬೇಕು. ಆದರೆ ಬಿಜೆಪಿ ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿ ಘೋಷಿಸಿಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ ಎಂದರು.

       ಬಿಜೆಪಿ ಯಾಕೆ ಗೆಲ್ಲಬಾರದು ಎಂದರೆ ದೇಶದ ಸಂವಿಧಾನದ ಆಶಯಗಳನ್ನು ಬಿಜೆಪಿ ಹಾಳು ಮಾಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆವಕಾಶವಿಲ್ಲ, ನಿರ್ಭೀತವಾಗಿ, ಜಾತ್ಯಾತೀತವಾಗಿ ಮಾತನಾಡಿದ ಎಂ ಎಂ ಕಲಬುರ್ಗಿ, ಗೌರಿಲಂಕೇಶ್ ಅಂತಹವರ ಹತ್ಯೆಯಾಯಿತು. ಹತ್ಯೆಯ ಜಾಡೂ ಸಿಗದಂತೆ ವ್ಯವಸ್ಥಿತ ಕೊಲೆಯಾಗಿದೆ.

         ನಮ್ಮದು ಹಲವು ಜಾತಿ, ಧರ್ಮ, ಭಾಷೆಗಳ, ಬಹುಸಂಸ್ಕತಿಗಳ ದೇಶ. ಹೀಗಾಗಿ ಎಲ್ಲಾ ಜಾತಿ ಧರ್ಮ ಭಾಷಿಕರು ಮುಕ್ತವಾಗಿ, ಸಮಾನತೆಯಿಂದ ಬಾಳಬೇಕು ಎಂಬುದು ಸಂವಿಧಾನದ ಆಶಯ. ಆದರೆ ಬಿಜೆಪಿಯದ್ದು ಏಕ ಧವರ್, ಏಕ ಸಂಸ್ಕತಿ ಧೋರಣೆ ದೇಶದ ಭಾವೈಕ್ಯತೆಗೆ ಧಕ್ಕೆಯಾಗುತ್ತದೆ. ಇಂತಹ ಬಿಜೆಪಿ ಚುನಾವಣೆಯಲ್ಲಿ ಸೋಲಬೇಕು ಎಂದರು

        ದೇಶದಲ್ಲಿ ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಸರ್ಕಾರ ಬಡವರಿಗೆ ಸುಖಿರಾಜ್ಯ ಕಲ್ಪನೆಯಲ್ಲಿ ಉದ್ಯೋಗ ಸೃಷ್ಠಿ, ಸಂಪತ್ತು ಸೃಷ್ಠಿ ಮಾಡುವ ಪ್ರಯತ್ನ ಮಾಡಲಿಲ್ಲ. ಸಮಾಜಿಕ ನ್ಯಾಯ ಕಾಪಾಡಲಿಲ್ಲ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಾನತೆ ಸಾಧ್ಯವಿಲ್ಲ, ಸಂವಿಧಾನದ ಆಶಯ ಪಾಲನೆಯಾಗುವುದಿಲ್ಲ ಎಂದು ಹೇಳಿದರು.

         ವಿವಿಧ ಸಂಘಟನೆಗಳ ಮುಖಂಡರಾದ ಜಿ ಎಂ ಶ್ರೀನಿವಾಸಯ್ಯ, ಕೆ ದೊರೈರಾಜ್, ನಟರಾಜ್ ಬೂದಾಳ್, ನಟರಾಜ್ ಹೊನ್ನವಳ್ಳಿ, ಗೋಮಾರದನಹಳ್ಳಿ ಮಂಜುನಾಥ್, ಟಿ ಎಸ್ ಹನುಮಂತೇಗೌಡ, ನಾಗತಿಹಳ್ಳಿ ರಮೇಶ್, ಡಾ. ಅರುಂಧತಿ, ಮಲ್ಲಿಕಾ ಬಸವರಾಜು, ಕರಿಗೌಡ ಬೀಚನಹಳ್ಳಿ, ಎಲ್ ಎನ್ ಮುಕುಂದರಾಜ್ ಜೊತೆಗೆ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap