ವಿಶ್ವ ಗುಬ್ಬಚ್ಚಿ ದಿನ: ಕಾಂಕ್ರೀಟ್ ಕಾಡಿನಿಂದ ಮರೆಯಾದ ಗುಬ್ಬಚ್ಚಿ

ತುಮಕೂರು

     ಈ 21ನೇ ಶತಮಾನದ ಮನುಷ್ಯ ಆಧುನಿಕತೆಗೆ ಒಗ್ಗಿಕೊಂಡಂತೆಲ್ಲಾ ಪರಿಸರದ ಮೇಲೆ ಆಗುತ್ತಿರುವ ಅತ್ಯಾಚಾರ ಕಡಿಮೆ ಏನು ಇಲ್ಲಾ ಕೆಲ ವರ್ಷಗಳ ಹಿಂದೆ ಪಟ್ಟಣ ಮತ್ತು ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುತ್ತಿದ್ದ ಪಕ್ಷಿ/ಹಕ್ಕಿ ಎಂದರೆ ಗುಬ್ಬಚ್ಚಿ ಆದರೆ ಇಂದು ಪ್ರಾಣಿ ಸಂಗ್ರಹಾಲಯದ ಪಕ್ಷಿ ಸಾಕಾಣಿಕೆ ಬೋನುಗಳಲ್ಲಿ ನೋಡುವ ಪರಿಸ್ಥತಿ ಇದೆ.ಇದಕ್ಕೆ ಪ್ರಮುಖ ಕಾರಣ ಹೆಚ್ಚುತ್ತಿರುವ ಮೊಬೈಲ್ ಬಳಕೆ   ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಂದ ಉಂಟಾಗಿರುವ ಸ್ಥಳಾವಕಾಶದ ಕೊರತೆ ಕಾರಣ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ನಮ್ಮ ಬಾಲ್ಯದ ಸ್ನೇಹಿತರಂತಿದ್ದ ಗುಬ್ಬಚ್ಚಿಗಳು ಕಾಣದಂತಾಗಿವೆ .ಇನ್ನು ಗುಬ್ಬಚ್ಚಿಗಳು ಗೂಡು ಕಟ್ಟಲು ಅನುಕೂಲಕರ ವಾತಾವರಣ ಸೃಷ್ಟಿ ಮಾಡಿದ್ದರೂ ಸಹ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ ಎಂಬುದೇ ವಿಪರ್ಯಾಸ.

    ಈ ವರ್ಷ 2,020 ಆವಾಸಸ್ಥಾನಗಳನ್ನು ಸ್ಥಾಪಿಸುವ ಮೂಲಕ ಈ ಪುಟ್ಟ ಜೀವಿಗಳಿಗೆ ಪರಿಸರವನ್ನು ಹೆಚ್ಚು ಅನುಕೂಲಕರವಾಗಿ ಸಲು ಪಕ್ಷಿವಿಜ್ಞಾನಿಗಳು ತಮ್ಮ ಅಭಿಯಾನವನ್ನು ಆಯೋಜಿಸಿದ್ದಾರೆ.ಗೂಡಿನ ಪೆಟ್ಟಿಗೆಗಳು, ಪಕ್ಷಿಗಳಿಗೆ ಅಗತ್ಯವಾದ ಹುಳು  ಹುಪ್ಪಟೆಗಳು , ನೀರಿನ  ಸಂಪನ್ಮೂಲ ಸ್ಥಾಪಿಸಲು ಅನುಕೂಲವಾಗುವಂತೆ  ಗುಬ್ಬಚ್ಚಿಗಳಿಗೆ ಸೂಕ್ತವಾದ ಜೀವನ ನಡೆಸಲು ಅನುಕೂಲಕರ ಪ್ರದೇಶದ ರಚನೆ ಮಾಡುವಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಅವಿರತ ಶ್ರಮ ಹಾಕುತ್ತಲೇ ಇವೆ.

   ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನಾಚರಣೆಯಾಗಿದ್ದು ಈ ವರ್ಷ ಕೊರೋನಾವೈರಸ್ ಹಾವಳಿಯಿಂದ ಸಭೆ, ಸಮಾರಂಭಗಳು ರದ್ದಾಗಿದೆ. ಎಂದು ಸ್ಪ್ಯಾರೋ ಮ್ಯಾನ್ ಆಫ್ ಇಂಡಿಯಾ ಎಂದು ಜನಪ್ರಿಯವಾಗಿರುವ ದಿಲಾವರ್ ಹೇಳುತ್ತಾರೆ ಈಗ ಸ್ವಂತವಾಗಿ ಜಾಗೃತಿ ಕಾರ್ಯಕ್ರಮ ಉಪಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅವರು ಹೇಳಿದರು.

    ಕಳೆದ 15 ವರ್ಷಗಳಿಂದ ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸಿರುವ ದಿಲಾವರ್, ಮಲ್ಲೇಶ್ವರಂ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸದಾಶಿವನಗರ, ಹಳೆಯ ಬೆಂಗಳೂರಿನ ಕೆಲವು ಭಾಗಗಳು ಮತ್ತು ನಗರದ ಹೊರವಲಯದಲ್ಲಿರುವ ಸಣ್ಣ ಪ್ರಮಾಣದ ಹಸಿರಿನ ಪ್ರದೇಶಗಳಲ್ಲಿ ಗುಬ್ಬಚ್ಚಿಗಳನ್ನು ಕಾಣುತ್ತಿರುವುದಾಗಿ ಹೇಳೀದರು.ಆದರೆ ಈ ಪ್ರದೇಶಗಳ ಸಂಖ್ಯೆ ಹೆಚ್ಚಾಗಿಲ್ಲ.

   “ಇಂದು ಜನರು ಬಳಸುವ ವೈಫೈ ಮತ್ತು ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಮೊಬೈಲ್ ಟವರ್‌ಗಳ ಸ್ಥಾಪನೆಯ ಹೆಚ್ಚಳವು ಗುಬ್ಬಚ್ಚಿಗಳ ಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಆದರೆ ದುರದೃಷ್ಟವಶಾತ್ ಜನರಲ್ಲಿ ಜಾಗೃತಿ ಮೂಡಿಲ್ಲ”

    ಸುಮಾರು 90 ಪ್ರತಿಶತದಷ್ಟು ಗೂಡಿನ ಪೆಟ್ಟಿಗೆಗಳು ಗುಬ್ಬಚ್ಚಿಗಳನ್ನು ಆಕರ್ಷಿಸುತ್ತವೆ  ಆದರೆ ಅಳಿಲುಗಳಂತಹ ಇತರ ಜೀವಿಗಳು ಅಲ್ಲಿ ನೆಲೆಸುತ್ತವೆ. . ಹಳ್ಳಿಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿಯೂ ಗುಬ್ಬಚ್ಚಿಗಳ ಸಂಖ್ಯೆ ಕ್ಷೀಣವಾಗಿದೆ.  ಪಕ್ಷಿ ವೀಕ್ಷಕ ಎಂಬಿ ಕೃಷ್ಣ ಅವರು ಗುಬ್ಬಚ್ಚಿಗಳು , ಮ್ಯಾಗ್ಪಿ ರಾಬಿನ್ಸ್ ಮತ್ತು ಮಚ್ಚೆಯುಳ್ಳ ಪಾರಿವಾಳದಂತಹಾ ಪಕ್ಷಿಗಳಿಗೆ ಜೀವಿಸಲು ಯಾವುದೇ ಸೂಕ್ತ ಕಾಡಿನಂತಹಾ ಹಸಿರು ಪ್ರದೇಶ ಉಳಿದಿಲ್ಲ, ಅವುಗಳು ಉಳಿವಿಗಾಗಿ ಸಣ್ಣ ಹಸಿರು ಹುಲ್ಲು ಗಳ ಅಗತ್ಯವಿದೆ. .ಆದರೆ ನಗರವು ಮನೆಗಳ, ಕಟ್ಟಡಗಳ ಕಾಂಕ್ರೀಟ್ ಕಾಡಾಗಿದೆ. ಮನೆಗಳಲ್ಲಿ ಹಿತ್ತಲ ಪ್ರಶ್ನೆಯೇ ಇಲ್ಲ. ಗುಬ್ಬಚ್ಚಿಗಳು ಇನ್ನು ಮುಂದೆ ಕಾಣಿಸದಿರಲು ನಗರದ  ಆರ್ಕಿಟೆಕ್ಚರ್ ನ ಬದಲಾವಣೆಯು ಪ್ರಮುಖ ಕಾರಣವಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap