ರಾಣಿಬೆನ್ನೂರ:
ಕೈಗಾರಿಕಾ ಕ್ರಾಂತಿಯಿಂದ ಆಗುವ ಪರಿಣಾಮವೇ. ಓಝೊನ್ ನಾಶದಿಂದ ಜೇವರಾಶಿಗಳ ಮೇಲೆ ತೀವ್ರ ಪರಿಣಾಮಗಳಾಗಿ, ಮನುಷ್ಯರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮಲ್ಲಣ್ಣ ಸಿ ಹೇಳಿದರು.
ನಗರದ ಸಂಸ್ಥೆಯ ರಾಜ ರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ಓಝೊನ್ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ತೀವ್ರ ಬದಲಾವಣೆಯಿಂದಾಗಿ ಮನುಕೂಲ ನಾಶ ಹೊಂದಲು ಸಾದ್ಯತೆಯಿದೆ. ಇದನ್ನು ಕಾಪಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮುಂದುವರೆದ ರಾಷ್ಟ್ರಗಳ ಪ್ರಜೆಗಳು ಐಷಾರಾಮಿ ವಸ್ತುಗಳನ್ನು ಏರಕೂಲರ್ ಇತ್ಯಾದಿ ಹೆಚ್ಚಾಗಿ ಬಳಿಕೆ ಮಾಡುತ್ತಿರುವುದರಿಂದ ಇದರ ಪರಿಣಾಮದಿಂದ ಕ್ಲೋರೂ ಪ್ಲೋರೊ ಕಾರ್ಬನ್ ವಾತಾವರಣದಲ್ಲಿ ಸೆರ್ಪಡೆಯಾಗಿ ಓಝೊನ್ ಪದರದಲ್ಲಿ ರಂದ್ರಗಳು ಹೆಚ್ಚುವಂತೆ ಮಾಡಿದೆ ಎಂದರು.
ಪ್ರಾಚಾರ್ಯ ಎಂ.ವಿ.ಯಲಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಜನಾಂಗದ ಮೇಲೆ ಪರಿಸರ ಮಾಲಿನ್ಯ ತಡೆಗಟ್ಟುವ ಹೊಣೆಗಾರಿಕೆ ಇರುತ್ತದೆ. ಪರಿಸರ ರಕ್ಷಣೆ ಕುರಿತು ಮುಂಜಾಗೃತೆ ಕ್ರಮಗಳ ಬಗ್ಗೆ ವಿವರಿಸಿದರು. ಐಶ್ವರ್ಯ ಕೆ, ಪ್ರೊ. ಎಂ.ಎನ್. ಸೂರಣಗಿ, ಡಾ. ಎಸ್.ಎಲ್. ಕರ್ಲವಾಡ, ಸುಧಾ ಚಕ್ರಸಾಲಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ