ಹಗರಿಬೊಮ್ಮನಹಳ್ಳಿ:
ಪಕ್ಷಿಧಾಮ ಅಭಿವೃದ್ಧಿಯಾದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಯಾಗುತ್ತೆ ಎಂದು ತಾಲೂಕು ಕೇಂದ್ರ ಹಿರಿಯ ಶ್ರೇಣಿ ನಾಯಾಲಯದ ನ್ಯಾಯಾಧೀಶರಾದ ಬಿ.ಸಿ.ಚಂದ್ರಶೇಖರ್ ಅಭಿಪ್ರಾಯ ಪಟ್ಟರು.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ ಅಂಕಸಮುದ್ರ ಕೆರೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಕೆರೆಗೆ ದೇಶವಿದೇಶಗಳಿಂದ ನಾನಾ ರೀತಿಯ ಹಕ್ಕಿಗಳು ಆಗಮಿಸುತ್ತವೆ. ಎಲ್ಲೂ ನೋಡಲಾಗದ ವಿವಿಧ ಮತ್ತು ಸುಂದರ ಪಕ್ಷಿಗಳನ್ನು ನಾವು ಇಲ್ಲಿ ನೋಡಬಹುದಾಗಿದೆ. ಆದ್ದರಿಂದ ಈ ಕೆರೆ ಬರಿ ಕೆರೆಯನ್ನಾಗಿ ನೋಡದೆ ಸಂಪೂರ್ಣ ಒತ್ತು ನೀಡಿ ಪಕ್ಷಿಧಾಮವನ್ನಾಗಿ ಮಾಡಿದರೆ, ಪ್ರವಾಸೋಧ್ಯಮ ಅಭಿವೃದ್ಧಿ ಸಾಧ್ಯ, ಇದರಿಂದ ಈ ಭಾಗದ ಜನರ ಜೀವನದಲ್ಲಿ ಕೂಡ ಅಭಿವೃದ್ಧಿ ಕಾಣಬಹುದು ಎಂದರು.
ನಂತರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ಎಸ್.ಜಟ್ಲಾ ಅಧ್ಯಕ್ಷತೆ ವಹಿಸಿ, ಇಂದು ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಕೆರೆಯ ಒತ್ತುವರಿಯನ್ನು ತೆರವುಗೊಳಿಸಬೇಕು. ಈ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಅಂಕಸಮುದ್ರ ಕೆರೆ ಸೇರಿದಂತೆ ಸುತ್ತಮುತ್ತಲಿನಲ್ಲಿ 10ಸಾವಿರ ಗಿಡಗಳನ್ನು ನೆಡುವ ಗುರಿ ನಮ್ಮದಾಗಿದ್ದು ಇಂದು ಸಂಕೇತಿಕವಾಗಿ ಸಸಿಗಳನ್ನು ನೆಡಲಾಗುತ್ತಿದೆ ಎಂದರು. ಹಗರಿಬೊಮ್ಮನಹಳ್ಳಿ ಸಂಪೂರ್ಣ ಹಸಿರು ಕರಣಮಾಡಬೇಕು ಎನ್ನುವ ಗುರಿಯನ್ನು ಸಾರ್ವಜನಿಕರು ಹೊಂದಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಗೌರವಾಧ್ಯಕ್ಷ ಬಿ.ವಿ.ಶಿವಯೋಗಿ, ಅಧ್ಯಕ್ಷ ಜಾಣ ಶಿವಾನಂದ, ಸಿ.ಪಿ.ಐ ರಾಜೇಶ್, ತಹಸೀಲ್ದಾರ್ ವಿಜಯಕುಮಾರ್, ಬಿಇಒ ಶೇಖರಪ್ಪ ಹೊರಪೇಟೆ, ತಾ.ಪಂ.ಉದ್ಯೋಗ ಖಾತ್ರಿ ಯೋಜನೆಯ ನಿರ್ದೇಶಕರಾದ ವಿಶ್ವನಾಥ, ಅರಣ್ಯಾಧಿಕಾರಿ ರವೀಂದ್ರನಾಯ್ಕ, ಸಿ.ಡಿ.ಪಿ.ಒ ಚನ್ನಪ್ಪ, ಪಿಡಬ್ಲೂಡಿ ಇಲಾಖೆಯ ಎಇ ಆಂಜನೇಯ ಶೆಟ್ರು, ವಕೀಲರಾದ ಕೊಟ್ರೇಶ್ ಶೆಟ್ಟರ್, ನಿಂಗನಗೌಡ, ಜಿ.ಗಂಗಾಧರ, ಸತ್ಯನಾರಾಯಣ, ವಿಶಾಲಾಕ್ಷಮ್ಮ, ತೋಟಗಾರಿಕೆ ಇಲಾಖೆಯ ಅಧಿಕಾರಿ ಪರಮೇಶ್ವರಪ್ಪ, ಜೆ.ಸಿ. ಹಾಗೂ ಗ್ರೀನ್ ಎಚ್.ಬಿ.ಎಚ್, ಅಂಕಸಮುದ್ರ ಯುವ ಬ್ರಿಗೇಡನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ವಕೀಲರಾದ ಟಿ.ಜಿ.ಎಂ.ಕೊಟ್ರೇಶ್, ಟಿ.ಪ್ರಹ್ಲಾದ್, ಆಂಜನೇಯ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








