ರಸ್ತೆಯ ಅಪಘಾತದಲ್ಲಿ ಕೆ.ವೀರಾಪುರ ವ್ಯಕ್ತಿ ಸಾವು

ಬಳ್ಳಾರಿ

         ತಾಲ್ಲೂಕಿನ ಕೆ.ವೀರಾಪುರ ಗ್ರಾಮದ ರೈಲ್ವೇ ನಿಲ್ದಾಣದ ಕ್ರಾಸ್ ಹತ್ತಿರ ಕೆ.ವೀರಾಪುರ ಗ್ರಾಮದ ಬಸಪ್ಪ 58 . ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಎದುರುಗಡೆ ಬರುತ್ತಿರುವ ಕಾರು ಕೆ.ಎ 35 ಎನ್ 4792 ಡಿಕ್ಕಿ ಹೊಡೆದ ಕಾರಣ ಸ್ಥಳದಲ್ಲೇ ಬಸಪ್ಪ ಮೃತಪಟ್ಟಿದ್ದಾರೆ.

         ಈ ವಿಷಯ ತಿಳಿದ ತಕ್ಷಣವೇ ಹಗರಿ ಪಿ.ಎಸ್.ಐ ಹನುಮಂತಪ್ಪ ಘಟನೆ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಮೃತದೇಹವನ್ನು ಶವಪರೀಕ್ಷೆ ಮಾಡುವುದಕ್ಕೆ ವಿಮ್ಸ್ ಆಸ್ಪತ್ರೆಗೆ ತೆರಳಿಸಿದ್ದಾರೆ. ಈ ಪ್ರಕರಣವನ್ನು ಹಗರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಈ ವಿಷಯ ತಿಳಿದ ಶಿಡಿಗಿನಮೊಳ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಕವಿತಾ ರವಿಕುಮಾರ್ ಮತ್ತು ಸದಸ್ಯರು ಇಂದುಶೇಖರ್ ಗೌಡ, ಬೋಗಾರೆಡ್ಡಿ ,ಗಂಗಿರೆಡ್ಡಿ, ತಿರುಮಲರೆಡ್ಡಿ ಇನ್ನಿತರರು ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬದ ಸದಸ್ಯರಿಗೆ ಆ ದೇವರು ದುಃಖವನ್ನು ಬರಿಸು ವ ಶಕ್ತಿಯನ್ನು ನೀಡಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link