ಬಳ್ಳಾರಿ
ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ನಗರದ ಕೌಲ್‍ಬಜಾರ್(ಮೊದಲ ಗೇಟ್)ದಿಂದ ಬೆಳಗಲ್ ಕ್ರಾಸ್‍ವರೆಗೆ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಗಮನಸೆಳೆಯಿತು ಮತ್ತು ಮತದಾನದ ಮಹತ್ವ ಹೊತ್ತ ವಿವಿಧ ಸಂದೇಶ ಫಲಕಗಳು ಮತದಾನದ ಮಹತ್ವವನ್ನು ಸಾರಿದವು.
ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ ಅವರು ಈ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆಯು ಕೌಲ್ ಬಜಾರ್(ಮೊದಲ ಗೇಟ್)ದಿಂದ ಆರಂಭವಾಗಿ ಬೆಳಗಲ್ ಕ್ರಾಸ್‍ವರೆಗೆ ನಡೆಯಿತು. ಸರಕಾರಿ ನೌಕರರು, ಸಾರ್ವಜನಿಕರು,ಅಂಗನವಾಡಿ ಕಾರ್ಯಕರ್ತೆಯರು,ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮತದಾನದಿಂದ ಪ್ರಜಾಪ್ರಭುತ್ವ ನಿರ್ಧಾರ, ಮತದಾನದಲ್ಲಿ ನೈತಿಕತೆಇರಲಿ, ನಿಮ್ಮ ಮತ ಸುಭದ್ರ ಸರಕಾರದ ಆಯ್ಕೆ, ಕಾಲೇಜು ತಪ್ಪಿಸಲ್ಲ;ಮತದಾನ ಮರೆಯಲ್ಲ ಎಂಬುದು ಸೇರಿದಂತೆ ವಿವಿಧ ಮತದಾನ ಮಹತ್ವ ಸಾರುವ ಸಂದೇಶಗಳು ಗಮನಸೆಳೆದವು. ಈ ಸಂದರ್ಭದಲ್ಲಿ ತಾಪಂ ಇಒ ಜಾನಕಿರಾಮ್, ಸಿಡಿಪಿಒ ಉಷಾ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ