ಹಗರಿಬೊಮ್ಮನಹಳ್ಳಿ:
ಪರಿಸರ ಉಳಿಸುವಲ್ಲಿ ನಮ್ಮೆಲ್ಲರ ಹೊಣೆಯಾಗಿರಬೇಕು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ಎಸ್.ಜಟ್ಲಾ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ, ಸಸಿ ನೆಡೊ ಕಾರ್ಯಕ್ರಮದಲ್ಲಿ ಸಸಿಗಳಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ 3ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗಿದೆ. ಶಿಕ್ಷಕರು ಕಾಳಜಿವಹಿಸಿ ವಿದ್ಯಾರ್ಥಿಗಳ ಮೂಲಕ ಸಸಿಗಳನ್ನು ನೆಟ್ಟು, ಅವುಗಳನ್ನು ವಿದ್ಯಾರ್ಥಿಗಳನ್ನು ಬೆಳೆಸಿದಂತೆ ಹೆಮ್ಮರ ಆಗುವವರೆಗೂ ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ಸಿ.ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ಜಾಣ ಶಿವಾನಂದ, ತಹಸೀಲ್ದಾರ್ ವಿಜಯಕುಮಾರ್, ಅರಣ್ಯಾಧಿಕಾರಿ ರವೀಂದ್ರನಾಯ್ಕ, ತೋಟಗಾರಿಕೆ ಇಲಾಖೆಯ ಅಧಿಕಾರಿ ಪರಮೇಶ್ವರಪ್ಪ, ಜೆ.ಸಿ.ಬಳಗ, ಗ್ರೀನ್ ಎಚ್.ಬಿ.ಎಚ್‍ನ ಪದಾಧಿಕಾರಿಗಳು, ಅಶೋಕ ಉಪ್ಪಾರ್, ಬದಾಮಿ ಕರಿಬಸವರಾಜ್, ವೆಂಕಟೇಶ್ ಮರಡಿ, ವಿ.ಎಂ.ವಿಶಾಲ್, ವಕೀಲರಾದ ಕೊಟ್ರೇಶ್ ಶೆಟ್ಟರ್, ಟಿ.ಜಿ.ಎಂ.ಕೊಟ್ರೇಶ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
