ಬಳ್ಳಾರಿ
ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲಾ-ಕಾಲೇಜುಗಳು, ವಾಣಿಜ್ಯ ಕಟ್ಟಡಗಳು, ಎಲ್ಲಾ ಆಸ್ತಿದಾರರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು 2019-20ನೇ ಚಾಲ್ತಿ ಸಾಲಿನ ಅಂದರೆ ಏ.01 ರಿಂದ ಏ.30 ರವರೆಗೆ ಆಸ್ತಿ ತೆರಿಗೆಯನ್ನು ಪಾವತಿಸಲು ಶೇ.5% ರಷ್ಟು ರಿಯಾಯಿತಿಯನ್ನು ನೀಡಲಾಗಿದ್ದು, ಮೇ 01 ರಿಂದ ಜೂನ್ 30 ರವರೆಗೆ ಪಾವತಿಸಿದಲ್ಲಿ ದಂಡ ರಹಿತ ತೆರಿಗೆಯನ್ನು ವಿಧಿಸಲಾಗುವುದು. ನಂತರ ಆಸ್ತಿ ತೆರಿಗೆಯನ್ನು ತಡವಾಗಿ ಪಾವತಿಸಿದಲ್ಲಿ ಪ್ರತಿ ತಿಂಗಳಿಗೆ ಶೇ.2 ರಷ್ಟು ದಂಡವಿಧಿಸಲಾಗುತ್ತದೆ ಎಂದು ಪಾಲಿಕೆಯ ಆಯಕ್ತ ತುಷಾರಮಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2019-20ನೇ ಸಾಲಿನಲ್ಲಿ ಕರ್ನಾಟಕ ಕಾರ್ಪೋರೇಷನ್ ನಿಯಮಾವಳಿಗಳು 1976ರ ಪ್ರಕಾರ ಎಲ್ಲಾ ಆಸ್ತಿದಾರರು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಪಾವತಿಸುವುದು ತಮ್ಮ ಆದ್ಯ ಕರ್ತವ್ಯವಾಗಿರುತ್ತದೆ. 2019-20ನೇ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆಗೆ ಮಾತ್ರ ಏ.01 ರಿಂದ ಏ.30 ರವರೆಗೆ ತಮ್ಮ ಆಸ್ತಿ ತೆರಿಗೆಯ ಒಟ್ಟು ಮೊತ್ತಕ್ಕೆ ಶೇ.5 ರಷ್ಟು ರಿಯಾಯಿತಿ ನೀಡಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಪ್ರಸ್ತುತ ಆಸ್ತಿ ತೆರಿಗೆಯನ್ನು ಪಾವತಿಸಲು ಪ್ರತ್ಯೇಕವಾದ ಕೌಂಟರುಗಳನ್ನು ತೆರೆಯಲಾಗಿದ್ದು. ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ದಯಮಾಡಿ ತಾವು 2019-20ನೇ ಸಾಲಿನ ಆಸ್ತಿ ತೆರಿಗೆಯ ಕಂದಾಯವನ್ನು ಪಾವತಿಸಿ ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
