ಬಳ್ಳಾರಿ.
ಇಂದು ಚುನಾವಣಾ ಪ್ರಚಾರದ ಅಂಗವಾಗಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಅಭ್ಯರ್ಥಿಎ.ದೇವದಾಸ್‍ಅವರುಪಾರ್ಕ್ ಹಾಗೂ ಮೈದಾನಗಳಲ್ಲಿ ಮತಯಾಚನೆ ಮಾಡಿದರು.ನಗರದ ಮೆಡಿಕಲ್‍ಕಾಲೇಜು ಮೈದಾನ, ಐಟಿಐಕಾಲೇಜು ಮೈದಾನಗಳಲ್ಲಿ ನಾಗರೀಕರನ್ನು ಭೇಟಿ ಮಾಡಿ ಬಳ್ಳಾರಿಯಲ್ಲಿ ನಾಗರೀಕರ ಸಮಸ್ಯೆಗಳ ವಿರುದ್ಧ ನಿರಂತರವಾಗಿಧ್ವನಿ ಎತ್ತುತ್ತಿರುವ ಎಸ್.ಯು.ಸಿ.ಐ (ಸಿ) ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿದರು.
ಎಸ್.ಯು.ಸಿ.ಐ (ಸಿ) ರಾಜ್ಯ ಸಮಿತಿಯ ಸದಸ್ಯರಾದ ಕೆ.ಸೋಮಶೇಖರ್ ಮಾತನಾಡುತ್ತಾ “ ಬಳ್ಳಾರಿಯಲ್ಲಿ ಈ ಹಿಂದೆ ಆಳಿದ ಎಲ್ಲಾ ಪಕ್ಷಗಳು ನಗರದಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರಿನಕೊರತೆ, ಕಸ ವಿಲೇವಾರಿ, ಕೆಟ್ಟ ರಸ್ತೆಗಳು, ಟ್ರಾಫಿಕ್ ಸಮಸ್ಯೆಇಂತಹ ಸಮಸ್ಯೆಗಳ ಪರಿಹಾರಕ್ಕೆ ಯಳ್ಳಷ್ಟು ಕಾಳಜಿ ವಹಿಸಿಲ್ಲ.
ಇನ್ನೊಂದೆಡೆ ಬಳ್ಳಾರಿಯಲ್ಲಿ ಕಾರ್ಪೋರೇಟ್ ಕಾಲೇಜುಗಳು ತಲೆಎತ್ತಿ, ಪೋಷಕರಿಂದ ಲಕ್ಷಾಂತರರೂಪಾಯಿ ಸುಲಿಗೆ ಮಾಡುತ್ತಿವೆ. ಎಲ್.ಕೆ.ಜಿ ಸೇರಿಸಲು ರೂ.50,000-1 ಲಕ್ಷದಷ್ಟುಡೊನೇಷನ್ ಕೆಲವು ಶಾಲೆಗಳು ಪಡೆಯುತ್ತಿವೆ. ಮತ್ತೊಂದೆಡೆಸರ್ಕಾರಿಕಾಲೇಜು-ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆಯಿಂದ, ವಿದ್ಯಾರ್ಥಿಗಳ ಸಂಖ್ಯೆಕ್ಷೀಣಿಸುತ್ತಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಶಿಕ್ಷಣ ವ್ಯಾಪಾರೀಕರಣ-ಖಾಸಗಿಕರಣಗೊಳ್ಳುವಂತೆ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿವೆ.
ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಶಿಕ್ಷಣ ಕ್ಷೇತ್ರವನ್ನೂ ಸಹ ಕಾರ್ಪೋರೇಟ್ ಮಾಲೀಕರ ಕಪಿ ಮುಷ್ಟಿಗೆ ವಹಿಸುತ್ತಿವೆ.ಜನರು ಶಿಕ್ಷಿತರಾಗಿ, ಪ್ರಜ್ಞಾವಂತರಾಗುವುದು ಬಿಜೆಪಿ-ಕಾಂಗ್ರಸ್ ಪಕ್ಷಗಳಿಗೆ ಬೇಕಾಗಿಲ್ಲ.ಈ ಹಿನ್ನಲೆಯಲ್ಲಿ ಶಿಕ್ಷಣದ ವ್ಯಾಪಾರೀಕರಣ-ಖಾಸಗೀಕರಣದ ವಿರುದ್ಧಧ್ವನಿಯೆತ್ತುತ್ತಿರುವ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಎ.ದೇವದಾಸ್‍ಅವರಿಗೆ ಮತ ಹಾಕುವ ಮೂಲಕಜನರಧ್ವನಿ ಪಾರ್ಲಿಮೆಂಟ್‍ಲ್ಲಿ ಮೊಳಗಿಸುವಂತಾಗಬೇಕು.ಅವರಟ್ರ್ಯಾಕ್ಟರ್‍ಗುರ್ತಿಗೆ ಮತ ಹಾಕಿ” ಎಂದು ಮನವಿ ಮಾಡಿದರು.