ನಗರ ಸಭೆ ನಿರ್ಲಕ್ಷ್ಯ: ಸಾರ್ವಜನಿಕರ ಪರದಾಟ

ಗುತ್ತಲ :

     ಹಾವೇರಿ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯ ನಿರ್ಲಕ್ಷಕ್ಕೆ ಬೇಸತ್ತ ಪ್ರಯಾಣಿಕರು ಹಾಗೂ ಪಟ್ಟಣದ ಜನತೆ.
ಗುತ್ತಲ ಪಟ್ಟಣದಿಂದ ಬಳ್ಳಾರಿ ಜಿಲ್ಲೆಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯಲ್ಲಿ ಹಾವೇರಿ ಜಿಲ್ಲಾ ಕೇಂದ್ರಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಪೈಪ್‍ಲೈನ್ ಒಡೆದ ಕಾರಣ ದುರಸ್ಥಿಗೊಳಿಸಲೆಂದು ಅಗೆಯಲಾದ ಮಣ್ಣನ್ನು ರಸ್ತೆಯ ಮೇಲೆಯೆ ಹಾಕಿ ಪ್ರಯಾಣಿಕರ ಜೀವಕ್ಕೆ ಕುತ್ತು ತರುವಂತ ಸ್ಥಿತಿ ನಿರ್ಮಾಣವಾಗಿದೆ.

      ದುರಸ್ಥಿ ಕಾರ್ಯ ಮುಗಿದು ಸುಮಾರು ವಾರ ಕಳೆದರು ಮಣ್ಣಿನ ಗುಡ್ಡೆಯನ್ನು ತಗ್ಗು ಪ್ರದೇಶಕ್ಕೆ ಮರಳಿ ಹಾಕದೆ ರಸ್ತೆಯ ಮೇಲೆ ಬಿಟ್ಟಿರುವುದು ಸ್ಥಳೀಯರು ಮತ್ತು ಪ್ರಯಾಣಿಕರು ಹಾವೇರಿ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯ ನಿರ್ಲಕ್ಷಕ್ಕೆ ಹಿಡಿಶಾಪವನ್ನು ಹಾಕುವಂತಾಗಿದೆ.

     ಸಮೀಪದ ತುಂಗಭದ್ರಾ ನದಿಯಿಂದ ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಕುಡಿಯುವ ನೀರಿನ ಸಂಪರ್ಕವನ್ನು ನಗರ ಸಭೆಯವರು ಮಾಡಿದ್ದಾರೆ. ಆದರು ಅದು ಕೆಲ ದಿನಗಳ ಹಿಂದೆಯೆ ಪೈಪ್ ಲೈನ್ ಒಡೆದು ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದನ್ನು ಅರಿತು ಅದರ ದುರಸ್ಥಿ ಕೆಲಸವನ್ನು ಮಾಡಿ ಒಡೆದ ಪೈಪನ್ನು ಸರಿಪಡಿಸಲು ಮುಂದಾಗಿ ಪೋಲಾಗುವ ನೀರನ್ನು ತಡೆದರು, ಆದರೆ ಅದರ ಕೆಲಸಕ್ಕೆ ತೆಗೆದ ಮಣ್ಣನ್ನು ಹಾವೇರಿ ಜಿಲ್ಲಾ ಕೇಂದ್ರದಿಂದ ಬಳ್ಳಾರಿ ಜಿಲ್ಲೆಗೆ ಸಂಪರ್ಕವನ್ನು ಕಲ್ಪಿಸುವ ರಾಜ್ಯ ಹೆದ್ದಾರಿಯ ಮೇಲೆಯೆ ಮಣ್ಣಿನ ಗುಡ್ಡೆಯನ್ನು ಹಾಕಿದ್ದು ಪಟ್ಟಣದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

     ಇಲ್ಲಿನ ಸಾರ್ವಜನಿಕರು ಸ್ವಾಮೀ ಕೆಲಸವನ್ನು ಮಾಡುವುದಾದರೆ ಸರಿಯಾದ ರೀತಿಯಲ್ಲಿ ಸಂಪೂರ್ಣವಾಗಿ ಮಾಡಿ ಅದನ್ನು ಬಿಟ್ಟು ಪಟ್ಟಣ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ಯಾಕೆ ನಿಮ್ಮ ಸಿಟ್ಟನ್ನು ಈ ರೀತಿಯಾಗಿ ತೋರ್ಪಡಿಸುತ್ತಿರಿ ಎನ್ನುವಂತಹ ಮಾತುಗಳನ್ನು ಸಾರ್ವಜನಿಕರು ಆಕ್ರೋಶದಿಂದ ಹೇಳುತ್ತಿದ್ದಾರೆ.

     ದಿನ ಬೆಳಗಾದರೆ ಸಾಕು ಈ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ ಅದರಲ್ಲಿ ಈ ಮಾರ್ಗದಲ್ಲಿ ಬೈಕ್ ಸವಾರರು ಪ್ರಯಾಣಿಸುವ ಸಂಖ್ಯೆಯೆ ಹೆಚ್ಚು ನೀವು ತೆಗೆದು ರಸ್ತೆಯ ಮೇಲೆ ಹಾಕಿರುವಂತಹ ಮಣ್ಣಿನ ಗುಡ್ಡೆಯಿಂದ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಮೊದಲು ಸಾರ್ವಜನಿಕರಿಗೆ ನಿಮ್ಮ ಅಪೂರ್ಣತೆಯ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಯನ್ನು ದೂರಮಾಡಿ.

     ನೀವುಗಳು ಮಾಡುವಂತಹ ಕಾರ್ಯವನ್ನು ಸರಿಯಾಗಿ ಮಾಡಿ ಅದನ್ನು ಬಿಟ್ಟು ಅಪೂರ್ಣತೆಯ ಕಾರ್ಯವನ್ನು ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಬಿಟ್ಟಿ ಮಾಡುವಂತಹ ಕಾರ್ಯವನ್ನು ಸರಿಯಾಗಿ ಮಾಡಿ ಎನ್ನುವಂತಹ ಮಾತುಗಳು ಪಟ್ಟಣದ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ ಇನ್ನಾದರು ನಗರಸಭೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಯಿಂದ ಪ್ರಯಾಣಿಕರಿಗೆ ಹಾಗೂ ಪಟ್ಟಣದ ಸಾರ್ವಜನಿಕರಿಗೆ ಆಗಿರುವಂತಹ ಸಮಸ್ಯೆಯನ್ನು ಅರಿತು ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತಾರಾ ಎಂಬುದನ್ನಾ ಕಾದು ನೊಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link