ಹೊಸದುರ್ಗ:
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮ, ನಾವೆಲ್ಲರೂ ಸೇವಕರು, ಪ್ರತಿದಿನ ನಮ್ಮ ಬದುಕನ್ನು ಬದುಕಿಸುವುದು ಪ್ರಜಾಪ್ರಭುತ್ವ, ಸಂವಿಧಾನವನ್ನುಸಾರಿದವರುಡಾ.ಬಿ.ಆರ್‍ಅಂಬೇಡ್ಕರ್‍ರವರುಎಂದು ವಿಶ್ರಾಂತ ಹೈಕೊರ್ಟ್ ನ್ಯಾಯಧೀಶರಾದಎಚ್.ಬಿಲ್ಲಪ್ಪನವರುಹೇಳಿದರು.
ಪಟ್ಟಣದ ಭಗೀರಥ ನಗರದತಮ್ಮ ಸ್ವಗೃಹದರಾಮಕೃಷ್ಣ ಪರಮಹಂಸ ಸಭಾಂಗಣದಲ್ಲಿಅನಿಕೇತನ ಬಳಗದ ವತಿಯಿಂದಭಾನುವಾರ ನಡೆದಸಾಹಿತ್ಯ ವಿಚಾರ ವಿನಿಮಯ, ಪುಸ್ತಕ ಬಿಡುಗಡೆ, ಡಾ.ಬಿ.ಆರ್‍ಅಂಬೇಡ್ಕರ್ ಹಾಗೂ ಡಾ.ರಾಜ್‍ಕುಮಾರ್‍ರವರ ಸ್ಮರಣೀಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಸುಧಾರಣೆಗಾಗಿ ಹೋರಾಟವನ್ನು ಮಾಡಿದವರುಡಾ.ಬಿ.ಆರ್‍ಅಂಬೇಡ್ಕರ್‍ರವರು.ಈ ರಾಷ್ಟ್ರಕ್ಕಾಗಿ ಸಂವಿಧಾನವನ್ನು ನೀಡಿದ ಸಂತರು, ಸಂವಿಧಾನದಲ್ಲಿಎಲ್ಲಾ ಭಾಗಗಳನ್ನು ತೆಗೆದಾಗ ಅಂಬೇಡ್ಕರ್ ಸಿಗುತ್ತದೆ.ದುರ್ಬಲ ವರ್ಗದವರಾಗಿದ್ದರೂದುರ್ಬಲವೇ ಅವರಿಗೆ ಶಕ್ತಿಚೇತನವಾಗಿತ್ತು.ದೇವಲಯಗಳನ್ನು ಕಟ್ಟುವ ಬದಲು ಗ್ರಂಥಾಲಯಗಳನ್ನು ಕಟ್ಟಬೇಕು.ದೇವಾಲಯದ ಮುಂದೆ ನಿಲ್ಲುವ ಬದಲುಗ್ರಂಥಾಲಯದಲ್ಲಿಕೂತು ಪುಸ್ತಕಗಳನ್ನು ಓದಬೇಕು.ಪ್ರತಿಯೊಬ್ಬರಿಗೂ ಶಿಕ್ಷಣ ಕೊಡುವುದರ ಮೂಲಕ ಸಮಾಜ ಸುಧಾರಣೆಯಾಗುತ್ತದೆಎಂದರು.
ಸಂವಿಧಾನದಲ್ಲಿ ನಮ್ಮ ಹಕ್ಕುಗಳಿಗೆ ನಾವೇ ಹೊಣೆಗಾರರು, ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಕೇಳಿ ಪಡೆಯಬೇಕು.ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನವನ್ನುಗೌರವಿಸಬೇಕು.ಸಂವಿಧಾನವನ್ನು ಸೌಖ್ಯ ಬರಬೇಕಾದರೆಅದರ ನಡುವಳಿಕೆಗಳನ್ನು ತಿಳಿಯಬೇಕು.ಸಮಾನತೆ, ಸಹೋದರತೆಒಂದು ಕಂಬವಿದ್ದಂತೆ.ಪ್ರಜಾಪ್ರಭುತ್ವದಲ್ಲಿಎಲ್ಲರೂ ಸಮಾನರು ಹೆಣ್ಣುಗಂಡಿಗೂ ಭೇದ ಮಾಡದೇ ಸಮಾನ ವೇತನ ನೀಡಬೇಕು.ಜನ ಸೌಖ್ಯಜನಕಲ್ಯಾಣಎಂಬುದು ಸಂವಿದಾನದಲ್ಲಿದೆ ಪ್ರತಿಯೊಬ್ಬರೂ ಪಾಲಿಸಬೇಕು. ಎಲ್ಲಾಧರ್ಮದ ಜನಗಳಿಗೆ ಸಮಾನಗೌರವ ಮತ್ತು ನ್ಯಾಯವನ್ನುಒದಗಿಸುವುದು ಸಂವಿಧಾನದಲ್ಲಿದೆ.ಸಂವಿಧಾನದ ಮೌಲ್ಯಗಳನ್ನು ಅಂಬೇಡ್ಕರ್ ರವರು ಇಡೀ ರಾಷ್ಟ್ರಕ್ಕೆ ಸಾರಿದ್ದಾರೆ ಎಂದರು.
ಡಾ.ರಾಜ್‍ಕುಮಾರ್‍ರವರ ಬಗ್ಗೆ ಬುಕ್ಕಸಾಗರ ಲೊಕೇಶ್ ಮಾತನಾಡಿ ಪ್ರಪಂಚದಲ್ಲಿ ಮೇರು ನಟರೆಂದು ವಿಖ್ಯಾತಿ ಪಡೆದವರು ಡಾ.ರಾಜ್‍ಕುಮಾರ್ ರವರು .ಅವರು ಬೆಳೆದಿದ್ದು ದೊಡ್ಡ ಅದ್ಭುತ.ಬೇಡರಕಣ್ಣಪ್ಪದಿಂದ ಹಿಡಿದು ಶಬ್ಧವೇದಿ ವರೆಗೂ204 ಚಿತ್ರಗಳಲ್ಲಿ ನಟನಾಗಿ ಅಭಿನಯಿಸಿದ್ದಾರೆ.ಅವರಅದ್ಭುತ ಸಾಧನೆಗೆಈಡೀ ವಿಶ್ವವೆ ಮೆಚ್ಚಿದೆ.ಅವರು ಪೌರಣಿಕ, ಜಾನಪದ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅವರ ಪಾತ್ರಗಳು ವೈವಿದ್ಯಾಮಯ.ಅದರಲ್ಲೂ ನಟರಾಗಿ ಅಭಿನಯಿಸಿರುವುದು ಹೆಚ್ಚು. ಹಣಕ್ಕಾಗಿ ಸಿನಿಮಾ ಮಾಡಲಿಲ್ಲ. ಅದ್ಭುತಗಾಯಕರು ಪ್ರತಿಯೊಂದು ಸಿನಿಮಾದಲ್ಲಿಗಾಯಕರಾಗಿಧ್ವನಿ ನೀಡಿದವರು. ಸರಳ ವ್ಯಕ್ತಿತ್ವವುಳ್ಳವರು, ಭೇದ ಭಾವವನ್ನು ಮಾಡದವರು, ಕೆಲಸಗಾರರಜೊತೆ ಸಹ ಪಂಕ್ತಿ ಭೋಜನವನ್ನು ಮಾಡುತ್ತಿದ್ದರುಅವರಆದರ್ಶ, ಅವರು ಹಾಕಿಕೊಟ್ಟ ಹೆಜ್ಜೆಗಳನ್ನು ನಾವು ಪಾಲಿಸಬೆಕು ಎಂದರು.
ಕುಮಾರವ್ಯಾಸ ಮತ್ತು ಮಹಾಭಾರತದ ಬಗ್ಗೆ ಉಪನ್ಯಾಸ ನೀಡಿದ ಎಂ.ಕೆ.ಶೇಷಗಿರವರುಮಹಾಭಾರತವು ಭಾರತೀಯರಿಗೆಲ್ಲಾ ಪರಮ ಪೂಜ್ಯವಾದಗ್ರಂಥ.ವಸ್ತು ನಿಷ್ಠವಾದ ಬಹಳ ತೂಕವಾದಜ್ಞಾನ ಕೋಶ. ಸಂಸ್ಕತ ಮಹಾಭಾರತದಲ್ಲಿಒಂದು ಲಕ್ಷಕ್ಕಿಂತ ಹೆಚ್ಚು ಶ್ಲೋಕಗಳಿವೆ. ಶ್ರೀ ಕೃಷ್ಣನು ಜೀವನಚರಿತ್ರೆಯನ್ನು ವಿವರಿಸಿವ ಹರಿವಂಶ ಎಂಬ ದೊಡ್ಡ ಭಾಗವನ್ನು ಮಹಾಭಾರತದಕಡೆಜೋಡಿಸಲಾಗಿದೆ. ಹರಿವಂಶವನ್ನು ಬಿಟ್ಟರೂಕೂಡ ಉಳಿದ ಭಾಗವೇ ಹದಿನೆಂಟು ಪರ್ವಗಳಾಗುತ್ತವೆ ಎಂದರು.
ವೇದ, ವೇದಾಂಗ, ಉಪನಿಷತ್ತುಗಳ ರಹಸ್ಯ, ಇತಿಹಾಸ, ಪುರಾಣಗಳ ವಸ್ತು, ಧರ್ಮಗಳ ವಿವರಣೆ, ನ್ಯಾಯಾಧಿ ಶಾಸ್ತ್ರಗಳ ಸಾರ, ನದಿ, ಪರ್ವತ, ಸಾಗರ, ವನ ಮತ್ತು ಪಕೃತಿ ವರ್ಣನೆ ಮಹಾಭಾರತದ ಸ್ವರೂಪವಾಗಿದೆ. ಇದರಲ್ಲಿ ಬರುವಎಲ್ಲಾ ಪಾತ್ರಗಳು ನಾಯಕ ಪಾತ್ರಧಾರಿಗಳು ಎಂದು ಹೇಳಿದರು.
ಇದೇ ವೇಳೆಈಶ್ವರಪ್ಪ ಬರೆದಿರುವಎರಡನೇ ಪಿಯುಸಿ ವಿಧ್ಯಾರ್ಥಿಗಳಾಗಿ ಸುಲಭವಾಗಿಗಣಿತ ಪರೀಕ್ಷೆಎದುರಿಸಲು ಪ್ರಶ್ನೋತ್ತರ ಪುಸ್ತಕ ಬಿಡುಗಡೆ ನಡೆಯಿತು.ರಾಮಣ್ಣ ಸ್ವಾಗತಿಸಿದರು. ಸ.ಪ.ಪೂ.ಕಾ ಪ್ರಾಂಶುಪಾಲರಾದ ಮಲ್ಲಪ್ಪ ವಂದಿಸಿದರು. ಹಾಗೂ ಅನಿಕೇತನ ಬಳಗದ ಸರ್ವ ಸದಸ್ಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ