ಸಾಕ್ಷಿ ಹೇಳಿದಕ್ಕೆ ವ್ಯಕ್ತಿ ಕೊಲೆ

ಹರಪನಹಳ್ಳಿ

      ಜಗಳವೊಂದರ ಪ್ರಕರಣದಲ್ಲಿ ತನ್ನ ವಿರುದ್ಧ ಕೋರ್ಟನಲ್ಲಿ ಸಾಕ್ಷಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬರೈತನನ್ನು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಹಲುವಾಗಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.

       ಮತ್ತೂರು ನಿಂಗಪ್ಪ(48) ಕೊಲೆಗೀಡಾದ ರೈತ. ಬಿಳಿಚೋಡು ಬಸವರಾಜ(38) ಆರೋಪಿ. ಕಳೆದ ಎರಡೂವರೆ ವರ್ಷಗಳ ಹಿಂದೆ ಜಮೀನೊಂದರಲ್ಲಿ ಜಗಳವಾಗಿ ಹೊಡೆದಾಟ ನಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹರಪನಹಳ್ಳಿ ಕೋರ್ಟನಲ್ಲಿ ವಿಚಾರಣೆ ಹಂತದಲ್ಲಿತ್ತು. ಫೆ.22ರಂದು ವಿಚಾರಣೆ ಸಂದರ್ಭದಲ್ಲಿ ಕೋರ್ಟಗೆ ಆಗಮಿಸಿ ಮೃತ ಮತ್ತೂರು ನಿಂಗಪ್ಪನು ಆರೋಪಿ ಬಿಳಿಚೋಡು ಬಸವರಾಜನ ವಿರುದ್ಧ ಸಾಕ್ಷಿ ನುಡಿದಿದ್ದನು.

         `ನನ್ನ ವಿರುದ್ಧವೇ ಸಾಕ್ಷಿ ಹೇಳಿದೆಯಾ ಎಂದು ಕುಪಿತಗೊಂಡ ಆರೋಪಿ ಬಸವರಾಜ ಹಲುವಾಗಲು ಗ್ರಾಮದಲ್ಲಿ ಅಂದೇ ಸಂಜೆ ಮೃತನ ಮನೆಗೆ ಆಗಮಿಸಿದ್ದಾನೆ. ಆ ಸಂದರ್ಭದಲ್ಲಿ ಮೃತ ರೈತ ಮನೆಯಲ್ಲಿ ಇಲ್ಲದಿದ್ದರಿಂದ ವಾಪಾಸು ಹೋಗಿ ರಾತ್ರಿ 9 ಗಂಟೆಗೆ ಪುನಃ ಬಂದಿದ್ದಾನೆ. ಆಗ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ನಿಂಗಪ್ಪಗೆ `ನನ್ನ ವಿರುದ್ಧ ಸಾಕ್ಷಿ ಹೇಳುತ್ತಿಯಾ’ ಎಂದು ಕುತ್ತಿಗೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಹೀಗೆ ಎರಡು ಬಾರಿ ಹೊಡೆದಾಗ ಕುಸಿದ ನಿಂಗಪ್ಪನನ್ನು ಹರಿಹರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಮತ್ತೂರು ನಿಂಗಪ್ಪ ಸಾವನ್ನಪ್ಪಿದ್ದಾನೆ. ಮೃತನ ಪತ್ನಿ ಮಂಗಳಮ್ಮ ನೀಡಿದ ದೂರನ್ನು ಹಲುವಾಗಲು ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link