ವಿರೂಪಾಕ್ಷನಿಗೆ 9 ಕೆ.ಜಿ ಬೆಳ್ಳಿ ದೀಪ ಸಮರ್ಪಿಸಿದ ಆನಂದ್ ಸಿಂಗ್..!!

0
74

ಹೊಸಪೇಟೆ :

      ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಭಾನುವಾರ ಹಂಪಿ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ, ಹೋಮ ಹವನ ನಡೆಸಿದರು.

     ಬೆಳಿಗ್ಗೆ ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ನಾಡ ದೇವತೆ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವಿದ್ಯಾರಣ್ಯ ದೇವಸ್ಥಾನ, ನಗರದ ಊರಮ್ಮ ದೇವಾಲಯ, ತಳವಾರಕೇರಿಯ ರಾಂಪುರ ದುರ್ಗಮ್ಮ, ಹಾಗು ಪಟೇಲ ನಗರದ ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ಹೋಮ ಹವನ ನಡೆಸಿದರು.

     ಇದೇ ವೇಳೆ ನಗರದ ಊರಮ್ಮ ದೇವಾಲಯ, ತಳವಾರಕೇರಿಯ ರಾಂಪುರ ದುರ್ಗಮ್ಮದೇವಿ ದೇವಸ್ಥಾನಗಳಿಗೆ ತಲಾ 9 ಕೆ.ಜಿ.ಬೆಳ್ಳಿ ದೀಪಗಳನ್ನು ದಾನವಾಗಿ ನೀಡಿದರು.ಇದಾದ ನಂತರ ವೇಣುಗೋಪಾಲ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುವಾಗ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಸಿಪಿಐ, ಸಿಪಿಐ(ಎಂ), ಬಿಜೆಪಿ ಹಾಗು ವಿವಿಧ ಸಂಘಟನೆಗಳ ಮುಖಂಡರು ಅವರ ಯೋಗ ಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಕಣ್ಣಿನ ಭಾಗದಲ್ಲಿ ನೋವು ಕಡಿಮೆಯಾಗಿದೆ. ಎದೆ ಭಾಗದಲ್ಲಿ ಸ್ವಲ್ಪ ನೋವಿದೆ. ಇನ್ನು 15 ದಿನದಲ್ಲಿ ಎಲ್ಲಾ ಆರೋಗ್ಯ ಸುಧಾರಿಸುತ್ತದೆ ಎಂದು ವೈಧ್ಯರು ತಿಳಿಸಿದ್ದಾರೆ ಎಂದರು.

      ಈ ಸಂಧರ್ಭದಲ್ಲಿ ಪತ್ನಿ ಲಕ್ಷ್ಮಿಸಿಂಗ್, ತಂದೆ ಪೃಥ್ವಿರಾಜಸಿಂಗ್, ಮುಖಂಡರಾದ ಧರ್ಮೇಂದ್ರಸಿಂಗ್, ಸಂದೀಪಸಿಂಗ್, ಟಿಂಕರ್ ರಫೀಕ್, ನಿಂಬಗಲ್ ರಾಮಕೃಷ್ಣ, ಅಂಜಿನಿ, ನಾಗೇನಹಳ್ಳಿ ಬಸವರಾಜ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here