ಹೊಸಪೇಟೆ:
ಧರ್ಮ,ಅರ್ಥ, ಕಾಮ, ಮೋಕ್ಷಗಳು ವ್ಯಕ್ತಿಗತವಾಗದೇ ಇಂತಹ ಪುಣ್ಯ ಫಲ ಪುರುಷಾರ್ಥಗಳು ವಿಶ್ವವ್ಯಾಪಿಯಾದಾಗ ಮಾತ್ರ ದೇಶ ಸದೃಡವಾಗಿ ಎಲ್ಲರಿಂದ ವಂದನೀಯವಾಗುತ್ತದೆ ಎಂದು ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷ ಶ್ರೀ ಸುಮೇಧಾನಂದ ಮಹಾರಾಜ್ ಜೀ ಹೇಳಿದರು.
ಇಲ್ಲಿನ ಶ್ರೀರಾಮಕೃಷ್ಣ ಗೀತಾಶ್ರಮದಲ್ಲಿ ಶುಕ್ರವಾರ ಸೈನಿಕರ ಹಾಗೂ ರಾಷ್ಟಪ್ರೇಮಿ ನಾಯಕರ ಕ್ಷೇಮ ಕೋರಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚಂಡಿಕಾ ಹೋಮದ ನಂತರ ಮಾತನಾಡಿದ ಅವರು, ದೇಶದಲ್ಲಿ ಪ್ರಚಲಿತವಾಗಿ ಎಲ್ಲ ಸೈನಿಕರಿಗೆ ನೈತಿಕ ಬಲ ಬೆಂಬಲ ನೀಡಬೇಕಾದ ಅನಿವಾರ್ಯತೆ ಇದೆ. ಗಡಿ ಶಾಂತವಾಗಿದ್ದರೆ ಮಾತ್ರ ದೇಶ ಶಾಂತವಾಗಿರುತ್ತದೆ. ಆಂತರಿಕ ಕಲಹ ಸೃಷ್ಟಿಸಲು ಭಯೋತ್ಪಾದಕರು ಸದಾ ಹವಣಿಸುತ್ತಿದ್ದು ದೇಶ ಭಕ್ತ ಸೈನಿಕರು ಅವರ ದುಶ್ಕøತ್ಯವನ್ನು ಪದೇ ಪದೇ ವಿಫಲಗೊಳಿಸುತ್ತಿದ್ದಾರೆ. ಕಾರಣ ಆ ಗಡಿ ಕಾಯುವ ಸೈನಿಕರು ಅರೋಗ್ಯ, ಆಯುಷ್ಯಗಳನ್ನು ಹೊಂದಿ ಸದಾ ಉತ್ಸಾಹಿಗಳಾಗಿರಲೆಂದು ಹೇಳಿದರು.
ದೇಶದಲ್ಲಿ ಎಲ್ಲಾ ಪಕ್ಷಗಳಲ್ಲಿರುವ ರಾಷ್ಟ್ರಪ್ರೇಮ ರಾಜಕಾರಣಿಗಳಿಗೆ ಸಜ್ಜನರಿಗೆ ಪದೇಪದೇ ತೊಂದರೆಯಾಗುತ್ತಾ “ಅಸುರಿ” ಶಕ್ತಿಗಳು ಜಯಸಾಧಿಸುತ್ತಿದ್ದು ಸಜ್ಜನ ದೇಶಭಕ್ತರ ಅಸ್ತಿತ್ವಕ್ಕಾಗಿ ನಾಯಕರ ಹಾಗೂ ಲೋಕದ ಕಲ್ಯಾಣಕ್ಕಾಗಿ ಈ ಹೋಮ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಕಲಬುರಗಿಯ ಸ್ವಾಮಿ ಮಹೇಶ್ವರಾನಂದ ಜೀ, ರಾಣೇಬೆನ್ನೂರಿನ ಶ್ರೀ ಸ್ವಾಮಿ ಪ್ರಕಾಶಾನಂದ ಜೀ, ಬೆಂಗಳೂರಿನ ಮಾತಾಜಿ ವಿವೇಕಮಯಿ, ಹೊಸಪೇಟೆಯ ಮಾತಾ ಪ್ರಬೋದಾಮಯಿ, ಗೋಕಾಕ್ ನ ಮಾತಾಜೀ ಶಿವಮಯಿ, ಸೇರಿದಂತೆ ಪೂಜ್ಯರು ಸಾನಿದ್ಯ ವಹಿಸಿದ್ದರು. ಸ್ಥಳೀಯ ಹಿರಿಯರಾದ ಗೋಪಿ, ಪ್ರಭಾಕರ, ಪ್ರಕಾಶ್ ರಾವ್, ಸಂತೋಷ್ ಜೀ, ವಕೀಲರಾದ ಸತೀಶ್, ಗೋಪಿ, ಹನುಮಂತಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








