ತುರುವೇಕೆರೆ:
ರಾಜ್ಯ ಛಾಯಾವೃತ್ತಿ ಸಮೂಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ವಿವಿದ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಇದೇ 31 ರಂದು ಹಮ್ಮಿಕೊಂಡಿರುವ ಕರ್ನಾಟಕ ಛಾಯಾಗ್ರಹಣ ಉಧ್ಯಮ ಬಂದ್‍ಗೆ ತಾಲ್ಲೂಕು ವಿಡಿಯೋ ಮತ್ತು ಪೋಟೊಗ್ರಾಫರ್ ಸಂಘ ಬೆಂಬಲಿಸಲಿದೆ ಎಂದು ತಾಲ್ಲೂಕು ಪೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಸೋಮಶೇಖರ್ ತಿಳಿಸಿದರು.
ಶುಕ್ರವಾರ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ದಂಡಾಧಿಕಾರಿ ನಯೀಂಉನ್ನೀಸಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೊರೋನಾ ಹೆಮ್ಮಾರಿ ಪಿಡುಗಿನಿಂದ ಸರ್ಕಾರವು ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಿದ್ದರಿಂದಾಗಿ ಕೇವಲ ಛಾಯಾವೃತ್ತಿಯನ್ನೇ ನಂಬಿದ್ದ ವೃತ್ತಿ ನಿರತರಿಗೆ ಕೆಲಸವೇ ಇಲ್ಲದಂತಾಗಿದೆ. ಮದುವೆ ಮುಂಜಿಯಂತ ಸಭೆ ಸಮಾರಂಭಗಳಿಗೆ ಸರ್ಕಾರ ಕಡಿವಾಣ ವಿಧಿಸಿದ್ದು ಇದನ್ನೇ ನಂಬಿದ್ದ ಛಾಯಾಗ್ರಾಹಕರು ಮನೆ ಬಾಡಿಗೆ, ಕುಟುಂಬದ ನಿರ್ವಹಣೆ, ಮಕ್ಕಳ ವಿಧ್ಯಾಭ್ಯಾಸ ಹೊರೆಯಿಂದ ಕುಟುಂಬ ಬೀದಿಗೆ ಬೀಳುವಂತಾಗಿದೆ.
ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಇದೇ 31 ರಂದು ಕರ್ನಾಟಕ ಛಾಯಾಗ್ರಹಣ ಉಧ್ಯಮ ಬಂದ್ ಮೂಲಕ ಪ್ರತಿಭಟಿಸಲಿದ್ದು ಅದಕ್ಕೆ ತುರುವೇಕೆರೆ ತಾಲ್ಲೂಕು ವಿಡಿಯೋ ಮತ್ತು ಪೋಟೊಗ್ರಾಫರ್ ಸಂಘ ಕೈಜೋಡಿಸಲಿದೆ ಎಂದು ತಾಲ್ಲೂಕು ಪೋಟೊ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಸೋಮಶೇಖರ್ ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ದುಂಡ ಮಾತನಾಡಿ 151 ವರ್ಷ ಇತಿಹಾಸವಿರುವ ಛಾಯಾಗ್ರಹಣಕ್ಕೆ ಇಂದು ಕೊರೋನಾ ವಕ್ಕರಿಸಿದ್ದರಿಂದ ಛಾಯಾಗ್ರಾಹಕರು ಹಾಗೂ ಅವರ ಕುಟುಂಬದಲ್ಲಿ ಆತಂಕ ಮನೆಮಾಡಿದೆ. ಕೋವಿದ್-19 ಹಾಗೂ ನೆರೆ ಸಂತ್ರಸ್ಥರಿಗೆ ವಿಶೇಷ ಪ್ಯಾಕೇಜ್ ಘೋಷಣೆ, ಅಸಂಘಟಿತ ಕಾರ್ಮಿಕ ವಲಯದ 42 ನೇ ವರ್ಗಕ್ಕೆ ಸೇರಿದ ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆಯ ವಿವಿದ ಯೋಜನೆಗಳು ಹಾಗೂ ಸ್ಮಾರ್ಟ್ ಕಾರ್ಡ್ ನೀಡುವುದು, ವೃತ್ತಿಪರರ ವ್ಯಾಪಾರ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್‍ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ, ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳೇ ಛಾಯಾಚಿತ್ರ ತೆಗೆಯುವುದು ನಿಷೇಧ, ವೃತ್ತಿ ಭದ್ರತೆ, ಆರೋಗ್ಯ, ಅಪಘಾತ, ಪರಿಕರಗಳ ಹಾಗೂ ಜೀವ ವಿಮೆ ಯೋಜನೆ ಸೌಲಬ್ಯ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಇಲಾಖೆಗಳಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಆ ನಿಟ್ಟಿನಲ್ಲಿ ಇದೇ 31 ರ ಶನಿವಾರದಂದು ಕರ್ನಾಟಕ ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಬೆಂಗಳೂರು ಛಲೋ ಬೃಹತ್ ಪ್ರತಿಭಟನೆಯನ್ನು ಬೆಂಗಳೂರು ಪ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದು ಅದಕ್ಕೆ ನಮ್ಮ ಬೆಂಬಲ ಇರುವುದಾಗಿ ಘೋಷಿಸಿ ಇಂದು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ತಾಲ್ಲೂಕು ಪೋಟೊ ಮತ್ತು ವಿಡಿಯೋಗ್ರಾಫರ್ ಸಂಘದ ತಾಲ್ಲೂಕು ಪದಾಧಿಕಾರಿಗಳಾದ ಅಭಿ, ವಿನೋದ್, ಗಂಗಾಧರ್, ಅಶೋಕ್, ಮಧು, ಹರೀಶ್, ಗಿರೀಶ್, ಸುನಿಲ್, ದಯಾನಂದ್, ಮಧು, ಉದಯ್, ಸತೀಶ್, ನವೀನ್, ವಿಜಿ, ಲೋಕೇಶ್, ಮುರುಗನ್, ಅರುಣ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ